ಬೆಂಗಳೂರಿನಲ್ಲಿವೆ ಹಸಿದವರಿಗೆ ಉಚಿತವಾಗಿ ಊಟ ನೀಡುವ ಹೋಟೆಲ್​ಗಳು, ನೀವೂ ಟೋಕನ್ ಖರೀದಿಸಿ ನೀಡಬಹುದು!

ಹಸಿದವರಿಗೆ ಮತ್ತು ನಿರ್ಗತಿಕರಿಗೆ ಉಚಿತವಾಗಿ ಆಹಾರ ನೀಡವ ಸಂಬಂಧ ಬೆಂಗಳೂರಿನ ಮತ್ತು ಚಿಕ್ಕಬಳ್ಳಾಪುರದ ಈ ಹೋಟೆಲ್​ಗಳು ವಿನೂತನ ಅಭಿಯಾನ ಆರಂಭಿಸಿವೆ. ಹಸಿದವರಿಗೆ ಮತ್ತು ನಿರ್ಗತಿಕರಿಗೆ ಆಹಾರ ನೀಡುವ ಅಭಿಯಾನದಲ್ಲಿ ಗ್ರಾಹಕರೆ ಅನ್ನದಾನ ಪ್ರಭುಗಳು. ಹೇಗೆ ಈ ಸುದ್ದಿ ಓದಿ..

ಬೆಂಗಳೂರಿನಲ್ಲಿವೆ ಹಸಿದವರಿಗೆ ಉಚಿತವಾಗಿ ಊಟ ನೀಡುವ ಹೋಟೆಲ್​ಗಳು, ನೀವೂ ಟೋಕನ್ ಖರೀದಿಸಿ ನೀಡಬಹುದು!
ತೃಪ್ತಿ ಹೋಟೆಲ್​​
Follow us
ವಿವೇಕ ಬಿರಾದಾರ
|

Updated on:Apr 12, 2024 | 9:36 AM

ಬೆಂಗಳೂರು, ಏಪ್ರಿಲ್​ 12: ಇತ್ತೀಚಿನ ದಿನಗಳಲ್ಲಿ ಕಡೆಮೆ ಬೆಲೆಗೆ ಆಹಾರ (Food) ಸಿಗುವುದೇ ದುರ್ಲಭವಾಗಿದೆ. ಆದರೆ ಈ ಹೋಟೆಲ್​​ಗಳಲ್ಲಿ ಹಸಿದವರಿಗೆ ಉಚಿತವಾಗಿ ಆಹಾರ (Free Food) ನೀಡಲಾಗುತ್ತದೆ. ಬೆಂಗಳೂರಿನಲ್ಲಿನ ತೃಪ್ತಿ, ಮಲ್ಲೇಶ್ವರಂನಲ್ಲಿರುವ ಮುಳಬಾಗಿಲು ದೋಸೆ, ಶಾಸ್ತ್ರಿ ನಗರದಲ್ಲಿರುವ ಎಸ್​ಎಲ್​ವಿ ಕಾಫಿ ಕಾರ್ನರ್​ ಮತ್ತು ಬನಶಂಕರಿ 2nd ಸ್ಟೇಜ್​​ನಲ್ಲಿರುವ ಕಾಪಿ ತಿಂಡಿ. ಮತ್ತು ಇತ್ತೀಚಿಗೆ ಆರಂಭವಾದ ಚಿಕ್ಕಬಳ್ಳಾಪುರದಲ್ಲಿರುವ ಮೂರ್ತಿ ಮೆಸ್​​ನಲ್ಲಿ ಹಸಿದವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ.

ಆದರೆ, ಉಚಿತವಾಗಿ ಆಹಾರವನ್ನು ಹೋಟೆಲ್​ ಅಲ್ಲ ಗ್ರಾಹಕರು ನೀಡುತ್ತಾರೆ ! ಈ ಹೋಟೆಲ್​​ಗಳಿಗೆ ಹೋದ ಗ್ರಾಹಕರಿಗೆ ಹಸಿದವರಿಗೆ ಅಥವಾ ನಿರ್ಗತಿಕರಿಗಾಗಿ ಊಟದ ಟೋಕ್​ನಗಳನ್ನು ಖರೀದಿಸುವ ಅವಕಾಶ ನೀಡಲಾಗುತ್ತದೆ. ಗ್ರಾಹಕರು ಖರೀದಿಸಿದ ಟೋಕನ್​​ಗಳನ್ನು ಬೋರ್ಡ್​​ನಲ್ಲಿ ಪಿನ್​ ಮಾಡಲಾಗಿರುತ್ತದೆ. ಹಸಿದವರು ಅಥವಾ ನಿರ್ಗತಿಕರು ಈ ಹೋಟೆಲ್​ಗಳಿಗೆ ಹೋಗಿ ಟೋಕನ್​ ಪಡೆದು ಉಚಿತವಾಗಿ ಊಟ ಸೇವಿಸಬಬಹುದಾಗಿದೆ. ಪ್ರತಿದಿನ ಈ ಟೋಕನ್​ ಸೇವೆ ಜಾಲ್ತಿಯಲ್ಲಿರುತ್ತದೆ. ಎಷ್ಟು ಬೇಕಾದರು ಟೋಕನ್​ ತೆಗೆದುಕೊಳ್ಳಬಹುದು. ಯಾರು ಪ್ರಶ್ನೆ ಮಾಡುವುದಿಲ್ಲ ಅಂತ ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಉಚಿತ ಆಹಾರ ಅಂತ ಕ್ಯಾಶ್​ ಕೌಂಟರ್​ ಪಕ್ಕದಲ್ಲಿ, ರಸ್ತೆಗೆ ಮುಖಮಾಡಿ ಬೋರ್ಡ್​ ಹಾಕಲಾಗಿರುತ್ತದೆ. ಉಚಿತ ಆಹಾರ ಅಂತ ಕನ್ನಡದಲ್ಲಿ Free Food ಅಂತ ಇಂಗ್ಲಿಷ್​ನಲ್ಲಿ ಬರೆಯಲಾಗಿರುತ್ತದೆ.

ತೃಪ್ತಿ ಹೊಟೇಲ್​ ಎಂಬುವುದು ಕವಿತಾ ಎರಗಂ ಎಂಬುವರ ಕಲ್ಪನೆಯಾಗಿದೆ. ಕವಿತಾ ಎಂಗಂ ಅವರು ಎವಿಎಲ್​ಜಿಐ (AVLGI) ಸಂಸ್ಥೆ ಸ್ಥಾಪಕರು ಮತ್ತು ಅಂತರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈ ಕಲ್ಪನೆ ನಿಮಗೆ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರಿಸಿದ ಕವಿತಾ “ಕೊರೊನಾ ಸಮಯದಲ್ಲಿ ವಯಸ್ಸಾದವರಿಗೆ ಮತ್ತು ಹಸಿದವರಿಗೆ ಊಟ ಹೇಗೆ ನೀಡುವುದು ಅಂತ ನಾನು ಮತ್ತು ನನ್ನ ಪತಿ ಯೋಚಿಸಿದೇವು. ಆಗ ವಿದೇಶದಲ್ಲಿ “ಒಂದು ನನಗೆ ಮತ್ತು ಇನ್ನೊಂದು ಹಸಿದವರಿಗೆ” (One for me and One for Board) ಎಂಬ ಅಭಿಯಾನ ಆರಂಭವಾಗಿತ್ತು. ಇದನ್ನೇ ಇಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.

ಮತ್ತು ನಾವು ಹೋಟೆಲ್​ ನಡೆಸುವವರಿಗೆ ಹೇಳಿದ್ದೇವೆ, “ಊಟಕ್ಕೆ ಬರುವವರನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡಬಾರದು. ಅವರ ಒಂದು ಅಥವಾ ಬದಲಿಗೆ 10 ಟೋಕನ್​ ತೆಗೆದುಕೊಂಡರೂ ಕೂಡ ಪ್ರಶ್ನೆ ಮಾಡಬಾರದು. ಅವರು ಊಟವನ್ನು ಹೋಟೆಲ್​ನಲ್ಲಿಯೇ ಮಾಡಲಿ ಅಥವಾ ಪಾರ್ಸಲ್​ ತೆಗೆದುಕೊಂಡು ಹೋಗಲಿ. ಅವರು ಶ್ರೀಮಂತ ಅಥವಾ ಬಡವರಿರಲಿ, ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡಬಾರದು” ಈ ಪ್ರಶ್ನೆಗಳು ಊಟಕ್ಕೆ ಬಂದವರನ್ನು ಮುಜುಗರಕ್ಕೀಡು ಮಾಡಬಹುದು ಎಂದು ಹೇಳಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಪಾರಿವಾಳಗಳಿಗೆ ಆಹಾರ ನೀಡಿದಕ್ಕೆ 97 ವರ್ಷದ ವೃದ್ಧೆಯ ಮೇಲೆ 2.5 ಲಕ್ಷ ರೂ ದಂಡ

ರಸ್ತೆಯಲ್ಲಿ ಭಿಕ್ಷೆ ಬೇಡುವ ದಂಪತಿಗಳು ಆಹಾರದ ಟೋಕನ್ ಪಡೆಯಲು ಪ್ರತಿದಿನ ಬರುತ್ತಾರೆ ಎಂದು ಚಿಕ್ಕಬಳ್ಳಾಪುರದ ರೆಸ್ಟೋರೆಂಟ್‌ನ ಕ್ಯಾಷಿಯರ್ ತಿಳಿಸಿದರು. ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದ ದಂಪತಿಗೆ ತಿಂಗಳು ಪರ್ಯಂತ ಉಚಿತವಾಗಿ ಊಟ ದೊರೆಯಿತು. ಕೆಲ ದಿನಗಳ ಬಳಿಕ ಇದೇ ದಂಪತಿ ಮಧ್ಯಾಹ್ನ ಊಟದ ಟೋಕನ್​ಗಳನ್ನು ಖರೀದಿಸಿ, ಉಚಿತವಾಗಿ ಹಂಚಿದರು. ಕಳೆದ ವಾರ, ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ಪ್ರಯುಕ್ತ 1,500 ರೂ. ಟೋಕನ್‌ಗಳನ್ನು ಖರೀದಿಸಿದನು.

ಉಚಿತ ಆಹಾರ ಬೋರ್ಡ್​ ನೋಡಿ ಮತ್ತು ನಮ್ಮ ಸೇವೆ ಗಮನಿಸಿ ಕೆಲವರು ಟೋಕನ್​ಗಳನ್ನು ಖರೀದಿಸುತ್ತಾರೆ. ಈ ಟೋಕ್​​ನಗಳನ್ನು ಉಚಿತವಾಗಿ ಹಂಚಲಾಗುತ್ತದೆ. ಕೆಲವು AVLGI ಸದಸ್ಯರು ವಿಶೇಷ ಸಂದರ್ಭಗಳನ್ನು 200 ರಿಂದ 500 ಮೌಲ್ಯದ ಟೋಕನ್‌ಗಳನ್ನು ಖರೀದಿಸುತ್ತಾರೆ ಎಂದು ತಿಳಿಸಿದರು. ತೃಪ್ತಿಯನ್ನು 100 ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸುವುದು ಕವಿತಾ ಅವರ ಗುರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 am, Fri, 12 April 24

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ