Bengaluru Crime: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ
ಮೃತ ಪ್ರತೀಕ್ ಮತ್ತು ಆರೋಪಿ ಸಮೀಷ್ ಸ್ನೇಹಿತರು. ಕೊಡಿಗೆಹಳ್ಳಿ ಬಳಿಯ ಮಟನ್ ಅಂಗಡಿಯಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ. ತೂಕದ ಬಟ್ಟಿನಿಂದ ಸಮೀಷ್ ಪ್ರತೀಕ್ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ ಪ್ರತೀಕ್ ಹಲ್ಲೆ ವಿಚಾರ ಮನೆಯಲ್ಲಿ ಮುಚ್ಚಿಟ್ಟಿದ್ದಾನೆ.
ಬೆಂಗಳೂರು: ಅಕ್ಟೋಬರ್ 20 ರಂದು ಪ್ರತೀಕ್ ಎಂಬ ಯುವಕ ಅಪಘಾತದಿಂದ ಮೃತಪಟ್ಟಿರುವ ಮಾಹಿತಿ ಬಂದಿತ್ತು. ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ ಮೃತನ ತಲೆ ಹೊರತುಪಡಿಸಿದರೆ ಮೈಮೇಲೆ ಯಾವುದೇ ಗಾಯಗಳಿರಲಿಲ್ಲ. ಮೇಲಾಗಿ ಅಪಘಾತ ನಡೆದಿದೆ ಎನ್ನಲಾದ ಮತ್ತಿಕೆರೆ ಜಂಕ್ಷನ್ ಬ್ಯುಸಿ ಇರುವ ಸ್ಥಳ. ಸಣ್ಣ ಅಪಘಾತ ಸಂಭವಿಸಿದರೂ ಮಾಹಿತಿ ಲಭ್ಯವಾಗಬೇಕಿತ್ತು. ಮರಣೋತ್ತರ ಪರೀಕ್ಷಾ ವರದಿ ಸಹ ತಲೆಯಲ್ಲಿ ಆಂತರಿಕ ರಕ್ತಸ್ರಾವವಾಗಿ ಮೃತಪಟ್ಟಿರುವುದಾಗಿ ಬಂದಿತ್ತು. ತನಿಖೆ ನಡೆಸಿದಾಗ ಸ್ನೇಹಿತರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರೋದು ಬಯಲಾಗಿದೆ ಎಂದು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿಕೆ ನೀಡಿದ್ದಾರೆ.
ಮೃತ ಪ್ರತೀಕ್ ಮತ್ತು ಆರೋಪಿ ಸಮೀಷ್ ಸ್ನೇಹಿತರು. ಕೊಡಿಗೆಹಳ್ಳಿ ಬಳಿಯ ಮಟನ್ ಅಂಗಡಿಯಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ. ತೂಕದ ಬಟ್ಟಿನಿಂದ ಸಮೀಷ್ ಪ್ರತೀಕ್ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ ಪ್ರತೀಕ್ ಹಲ್ಲೆ ವಿಚಾರ ಮನೆಯಲ್ಲಿ ಮುಚ್ಚಿಟ್ಟಿದ್ದಾನೆ. ಮೂರು ದಿನಗಳ ಕಾಲ ಚಿಕಿತ್ಸೆ ಸಹ ಪಡೆದಿಲ್ಲ. ಮದ್ಯದ ನಶೆಯಲ್ಲಿ ನೋವಿಗೆ ಚಿಕಿತ್ಸೆ ಪಡೆಯದೇ ಸುಮ್ಮನಾಗಿದ್ದಾನೆ. ತಲೆ ನೋವು ಅತಿಯಾದಾಗ ಮನೆಯವರು ಆಸ್ಪತ್ರೆಗೆ ದಾಖಲಿಸಲಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಪ್ರಕರಣವನ್ನ ಕೊಡಿಗೆಹಳ್ಳಿ ಠಾಣೆಗೆ ವರ್ಗಾಯಿಸಲಾಗಿತ್ತು. ಸದ್ಯ ಕೊಡಿಗೆಹಳ್ಳಿ ಪೊಲೀಸರಿಂದ ಸಮೀಷ್ ಬಂಧನವಾಗಿದೆ ಎಂದು ತಿಳಿಸಲಾಗಿದೆ.
ಕೋಲಾರ: ದೇಗುಲದ ಪೂಜಾರಿ ಕೊಲೆ ಕೋಲಾರ ಜಿಲ್ಲೆ ಕೆಜಿಎಫ್ ತಾಕೂಕಿನ ಗೋಣಮಾಕನಹಳ್ಳಿಯಲ್ಲಿ ದೇಗುಲದ ಪೂಜಾರಿಯ ಕೊಲೆ ಮಾಡಿದ ದುರ್ಘಟನೆ ನಡೆದಿದೆ. ನಾಲ್ವರು ದುಷ್ಕರ್ಮಿಗಳ ತಂಡದಿಂದ ಗಜೇಂದ್ರ (42) ಎಂಬವರ ಕೊಲೆಯಾಗಿದೆ. ಆ್ಯಂಡರ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ; ದುಷ್ಕರ್ಮಿಗಳ ಕೃತ್ಯ ದುಷ್ಕರ್ಮಿಗಳು ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದಿದೆ. 2 ದಿನದ ಹಿಂದೆ ಪರಮೇಶ್ ಎಂಬುವರ ಕಾಂಡಿಮೆಂಟ್ಸ್ಗೆ ಬೆಂಕಿ ಹಚ್ಚಲಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವ ಕಿಡಿಗೇಡಿಗಳ ಕೃತ್ಯ, ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ವಿಜಯಪುರ: ಆಕಸ್ಮಿಕ ಬೆಂಕಿಯಿಂದ ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು ಆಕಸ್ಮಿಕ ಬೆಂಕಿಯಿಂದ ಹೆದ್ದಾರಿಯಲ್ಲೇ ಕಾರೊಂದು ಹೊತ್ತಿ ಉರಿದ ಘಟನೆ ವಿಜಯಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ವಿಜಯಪುರದ ವಿಶಾಲ್ ವಾಲಿ ಅವರ ಕಾರು ಬೆಂಕಿಗಾಹುತಿ ಆಗಿದೆ. ಅದೃಷ್ಟವಶಾತ್ ಕಾರಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ. ಸೊಲ್ಲಾಪುರದಿಂದ ವಿಜಯಪುರಕ್ಕೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದಾವಣಗೆರೆ: ಹೋಟೆಲ್ ಮಾಲೀಕನಿಂದ ಕಾರ್ಮಿಕರ ಮೇಲೆ ಹಲ್ಲೆ ಹೋಟೆಲ್ ಮಾಲೀಕನಿಂದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 22ರಂದು ನಡೆದ ಘಟನೆ ತಡವಾಗಿ ತಿಳಿದುಬಂದಿದೆ. ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ಹೋಟೆಲ್ ಮಾಲೀಕ ಬದ್ರಿನಾಥ್ ಹುಟ್ಟುಹಬ್ಬ ಹಿನ್ನೆಲೆ ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿ ಬಳಿಕ ಟಿಪ್ ಕೇಳಿದ್ದಕ್ಕೆ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ. ಕಾರ್ಮಿಕರ ಮೇಲೆ ಹಲ್ಲೆ ಮಾಡುವ ವಿಡಿಯೋ ವೈರಲ್ ಮಾಡಲಾಗಿದೆ. ಇದೀಗ ವಿದ್ಯಾನಗರ ಪೊಲೀಸ್ ಠಾಣೆ, ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಜಿಲ್ಲೆಯ ಕಾರ್ಮಿಕ ಮುಖಂಡನಿಂದ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ: Karnataka Crime News: ಕೊಪ್ಪಳದ ಕಂದಾಯ ಅಧಿಕಾರಿ ಆತ್ಮಹತ್ಯೆ, ಚಿಕ್ಕಮಗಳೂರಿನಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಇದನ್ನೂ ಓದಿ: Crime News: ಅಪ್ರಾಪ್ತೆ ಅತ್ಯಾಚಾರ; ಮೂವರ ಬಂಧನ, ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣು