AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime: ಹಣಕ್ಕಾಗಿ ಪ್ರೇಯಸಿಯನ್ನೇ ಹತ್ಯೆ ಮಾಡಿದ್ದ ಆರೋಪಿ ಬಂಧನ

ಪ್ರಿಯಕರ ಶ್ಯಾಮ್​ನಿಂದ ಒಂದು ಲಕ್ಷ ಹಣ ಪಡೆದಿದ್ದ ಗಂಗಾರನ್ನು ಶ್ಯಾಮ್ ಎಂಬಾತ ಹತ್ಯೆಗೈದಿದ್ದಾನೆ. ಹಣದ ವಿಚಾರಕ್ಕೆ ಜಗಳವಾಗಿ ಗಂಗಾಳನ್ನ ಹತ್ಯೆಗೈದಿದ್ದಾನೆ. ಕುತ್ತಿಗೆ ಹಿಡಿದು ಗೋಡೆಗೆ ಅಪ್ಪಳಿಸಿ ಗಂಗಾ ಹತ್ಯೆಗೈದಿದ್ದಾನೆ. ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Bengaluru Crime: ಹಣಕ್ಕಾಗಿ ಪ್ರೇಯಸಿಯನ್ನೇ ಹತ್ಯೆ ಮಾಡಿದ್ದ ಆರೋಪಿ ಬಂಧನ
ಪ್ರಾತಿನಿದಿಕ ಚಿತ್ರ
TV9 Web
| Edited By: |

Updated on: Dec 17, 2021 | 10:37 PM

Share

ಬೆಂಗಳೂರು: ಹಣಕ್ಕಾಗಿ ಪ್ರೇಯಸಿಯನ್ನೇ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸರಿಂದ ಬಂಧನ ಮಾಡಲಾಗಿದೆ. ಪ್ರೇಯಸಿ ಗಂಗಾ ಎಂಬವರನ್ನು ಹಣದ ವಿಚಾರಕ್ಕಾಗಿ ಯೋಗ ತರಬೇತಿ ಶಿಕ್ಷಕ ಶ್ಯಾಮ್ ಹತ್ಯೆಗೈದಿದ್ದ ಎಂದು ತಿಳಿದುಬಂದಿದೆ. ಯೋಗ ತರಬೇತಿಗೆ ಬರುತ್ತಿದ್ದಾಗ ಇಬ್ಬರ ಪರಸ್ಪರ ನಡುವೆ ಪ್ರೀತಿ ಆಗಿತ್ತು. ಪ್ರತ್ಯೇಕ ಯೋಗ ಶಾಲೆ ತೆರೆಯುವುದಕ್ಕೆ ಗಂಗಾ ಹಣ ಪಡೆದಿದ್ದರು ಎಂದು ಹೇಳಲಾಗಿದೆ.

ಪ್ರಿಯಕರ ಶ್ಯಾಮ್​ನಿಂದ ಒಂದು ಲಕ್ಷ ಹಣ ಪಡೆದಿದ್ದ ಗಂಗಾರನ್ನು ಶ್ಯಾಮ್ ಎಂಬಾತ ಹತ್ಯೆಗೈದಿದ್ದಾನೆ. ಹಣದ ವಿಚಾರಕ್ಕೆ ಜಗಳವಾಗಿ ಗಂಗಾಳನ್ನ ಹತ್ಯೆಗೈದಿದ್ದಾನೆ. ಕುತ್ತಿಗೆ ಹಿಡಿದು ಗೋಡೆಗೆ ಅಪ್ಪಳಿಸಿ ಗಂಗಾ ಹತ್ಯೆಗೈದಿದ್ದಾನೆ. ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಶಿವಮೊಗ್ಗ: ಮೊಬೈಲ್​ ಕದಿಯುತ್ತಿದ್ದ ಇಬ್ಬರು ಕಳ್ಳರನ್ನ ಬಂಧಿಸಿದ ಪೊಲೀಸರು ಮೊಬೈಲ್​ ಕದಿಯುತ್ತಿದ್ದ ಇಬ್ಬರು ಕಳ್ಳರನ್ನ ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಎಂಬಲ್ಲಿ ನಡೆದಿದೆ. ಪೊಲೀಸರ ಕಾರ್ಯಾಚರಣೆ ವೇಳೆ ಮೊಬೈಲ್ ಕದಿಯುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಶ್ರೀನಿವಾಸ, ಅಜಾಮ್​ನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 11 ಲಕ್ಷ ರೂ. ಮೌಲ್ಯದ 120 ಮೊಬೈಲ್​ಗಳನ್ನು ವಷಕ್ಕೆ ಪಡೆಯಲಾಗಿದೆ. ಒಂದು ಲ್ಯಾಪ್​ಟಾಪ್​, ಒಂದು ಬೈಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ: ಲಾಡ್ಜ್‌ನಲ್ಲಿ ನಿವೃತ್ತ ಇಂಜಿನಿಯರ್ ಆತ್ಮಹತ್ಯೆ ನಿವೃತ್ತ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಲಾಡ್ಜ್‌ನಲ್ಲಿ ನಡೆದಿದೆ. ಕೊಠಡಿಯಲ್ಲಿ ನಿದ್ರೆಮಾತ್ರೆ ಸೇವಿಸಿ ಮಂಜುನಾಥ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಂಗಾ ಮೇಲ್ದಂಡೆ ಯೋಜನೆಯ ನಿವೃತ್ತ ಇಂಜಿನಿಯರ್ ಆಗಿದ್ದವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಂಡ್ಯ: ದೇವರ ಗರ್ಭಗುಡಿ ಮುಂದೆ ಬೆತ್ತಲಾಗಿ ಅಶ್ಲೀಲ ವರ್ತನೆ ದೇವರ ಗರ್ಭಗುಡಿ ಮುಂದೆ ಬೆತ್ತಲಾಗಿ ಅಶ್ಲೀಲ ವರ್ತನೆ ತೋರಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ನಡೆದಿದೆ. ಎಎಪಿ ಮುಖಂಡ ರಾಮ್​​ಕುಮಾರ್​​ನಿಂದ ಅಶ್ಲೀಲ ವರ್ತನೆ ತೋರಲಾಗಿದೆ. ಗಾಂಜಾ ಮತ್ತಿನಲ್ಲಿ ಇದ್ದಕ್ಕಿದ್ದಂತೆ ದೇವಸ್ಥಾನ ಪ್ರವೇಶಿಸಿದ್ದ ವ್ಯಕ್ತಿ ಗರ್ಭಗುಡಿ ಮುಂದೆ ಅಶ್ಲೀಲ ವರ್ತನೆ ತೋರಿದ್ದ. ಈ ವೇಳೆ ಆತನನ್ನು ಹೊರಗೆ ಹೋಗು ಎಂದು ಅರ್ಚಕರು ಹೇಳಿದ್ದರು. ನಾನು ಹೋಗಲ್ಲ ಎಂದು ಗರ್ಭ ಗುಡಿ ಮುಂದೆ ಬೆತ್ತಲಾಗಿದ್ದ. ಯುವಕನ ಹುಚ್ಚಾಟ ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: Bengaluru Crime: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

ಇದನ್ನೂ ಓದಿ: Crime News: ಹಣ, ಚಿನ್ನ ದೋಚಿ ಪತ್ನಿ ಪರಾರಿ, ಸಿಎಂ ವಿಶೇಷ ಅಧಿಕಾರಿ ಎಂದು ವಂಚಿಸುತ್ತಿದ್ದ ಆರೋಪಿ ಬಂಧನ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?