ಗಣೇಶ ಮೆರವಣಿಗೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್, ಮಾರ್ಗ ಬದಲಾವಣೆ ಇಲ್ಲಿದೆ
ಬೆಂಗಳೂರಿನ ಈ ರಸ್ತೆಯಲ್ಲಿ ಇಂದು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಸುಮಾರು 16 ರಿಂದ 20 ಗಣೇಶ ಮೂರ್ತಿಗಳು ಸಾಗಲಿವೆ. ಹೀಗಾಗಿ ನಗರದ ಈ ರಸ್ತೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಮಾರ್ಗ ಬದಲಾವಣೆ ಸೂಚಿಸಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ
ವಿವೇಕ ಬಿರಾದಾರ
Updated on:
Sep 09, 2024 | 9:14 AM
ಬೆಂಗಳೂರು, ಸೆಪ್ಟೆಂಬರ್ 09: ಮೂರನೇ ದಿನ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಚಾಮುಂಡಿನಗರದಲ್ಲಿ ಸೋಮವಾರ ಗಣೇಶ ವಿಸರ್ಜನೆ ಮೆರವಣಿಗೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಇಂದು (ಸೆ.09) ಸಂಜೆ 6 ಗಂಟೆಯಿಂದ ನಿಷೇಧಿಸಲಾಗಿದೆ.
ಚಾಮುಂಡಿನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಡಿಜೆ, ಟ್ಯಾಬ್ಲೋಗಳು, ಸಂಗೀತ, ಡೊಳ್ಳು ಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಮಾರು 16 ರಿಂದ 20 ಗಣೇಶ ಮೂರ್ತಿಗಳು ಸಾಗಲಿವೆ. ಹೀಗಾಗಿ ಸುಗಮ ಸಂಚಾರ ಹಿತದೃಷ್ಟಿಯಿಂದ ಈ ರಸ್ತೆಗಳಲ್ಲಿ ಸೆ.09ರ ಸಂಜೆ 06.00 ಗಂಟೆಯಿಂದ ಸೆ.10ರ ಬೆಳಿಗ್ಗೆ 2.00 ಗಂಟೆಯವರೆಗು ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 8, 2024
ಬದಲಿ ಮಾರ್ಗ
ಸುಲ್ತಾನ್ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮಂಟ್ ರೈಲು ನಿಲ್ದಾಣದಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಸುಲ್ತಾನ್ಪಾಳ್ಯ ಮುಖ್ಯರಸ್ತೆ ದಿಣ್ಣೂರು ಜಂಕ್ಷನ್ನಲ್ಲಿ ಎಡ ತಿರುವು ಪಡೆದು ದೇವೆಗೌಡ ಮುಖ್ಯರಸ್ತೆ ಪಿ.ಆರ್.ಟಿ.ಸಿ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ವಾಟರ್ ಬ್ಯಾಂಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಟಿ.ವಿ ಬದರ್ನಲ್ಲಿ ಎಡ ತಿರುವು ಪಡೆದು ಜಯಮಹಲ್ ಮುಖ್ಯರಸ್ತೆ ಯಲ್ಲಿ ನೇರವಾಗಿ ಕಂಟೋನ್ವೆಂಟ್ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಬಿ ರಸ್ತೆ)ಯಲ್ಲಿ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು: ಸುಲ್ತಾನ್ ಪಾಳ್ಯ ಮುಖ್ಯರಸ್ತೆ ದಿಣ್ಣೂರು ಜಂಕ್ಷನ್ಲ್ಲಿ ಎಡ ತಿರುವು ಪಡೆದು ದೇವೆಗೌಡ ಮುಖ್ಯರಸ್ತೆ ಪಿ.ಆರ್.ಟಿ.ಸಿ ಜಂಕ್ಷನ್ಲ್ಲಿ ಬಲ ತಿರುವು ಪಡೆದುಕೊಂಡು ವಾಟರ್ ಬ್ಯಾಂಕ್ ಜಂಕ್ಷನ್ನಲ್ಲಿ ಬಲ ತಿರುವು ಮಠದಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡೂರಾವ್ ಸರ್ಕಲ್ನಲ್ಲಿ ಎಡ ತಿರುವು ಪಡೆದುಕೊಂಡು ತರಳಬಾಳು ರಸ್ತೆ ಎಡತಿರುವು ಪಡೆದುಕೊಂಡು ಬೆಂಗಳೂರು ಬಳ್ಳಾರಿ ರಸ್ತೆ ಮೇತ್ರಿ ಸರ್ಕಲ್ನಲ್ಲಿ ಪಡೆದುಕೊಂಡು ಬೆಂಗಳೂರು ನಗರದ ಕಡೆಗೆ ಹಾಗೂ ಮೇತ್ರಿ ಸರ್ಕಲ್ ಯು ಟರ್ನ್ ಪಡೆದುಕೊಂಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸುಲ್ತಾನ್ ಪಾಳ್ಯ- ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) ವಾಟರ್ ಬ್ಯಾಂಕ್ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ ಪಡೆದುಕೊಂಡು ವಿ.ಆರ್.ಟಿ.ಸಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ದೇವೆಗೌಡ ರಸ್ತೆ ದಿಬ್ಬರು ಜಂಕ್ಷನ್ನಲ್ಲಿ ಬಲ ತಿರುವು ಪಡೆದುಕೊಂಡು ಸುಲ್ತಾನ್ ಪಾಳ್ಯ ಕಂದಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಮೇಕ್ರಿಸರ್ಕಲ್ – ಜಯಮಹಲ್ ಮುಖ್ಯರಸ್ತೆ ಜಂಕ್ಷನ್ ಪಿ.ಆರ್.ಬಿ.ಸಿ ಜಂಕ್ಷನ್ ಟಿ.ವಿ ಬವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ಪಡೆದುಕೊಂಡು ವಾಟರ್ ಬ್ಯಾಂಕ್ನಲ್ಲಿ ಎಡ ತಿರುವು ಪಡೆದುಕೊಂಡು ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ನಲ್ಲಿ ಬಲ ತಿರುವು ಪಡೆದುಕೊಂಡು ಸುಲ್ತಾನ್ ಸಾಳ್ಯ- ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
ಬೆಂಗಳೂರು ನಗರದ (ಬಿಬಿ ರಸ್ತೆ) ಮೇಖ್ರಿ ಸರ್ಕಲ್ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು: ಮೇಕ್ರಿ ಸರ್ಕಲ್-ಸಿಬಿಐ ಇಂಕ್ಷನ್ನಲ್ಲಿ ಬಲ ತಿರುವು ಪಡೆದುಕೊಂಡು ಸಂಜಯನಗರ ಕ್ರಾಸ್ ಸರ್ವಿಸ್ ರಸ್ತೆ, ತರಳಬಾಳು ರಸ್ತೆಯಲ್ಲಿ ಎಡತಿರುವು ಪಡೆದುಕೊಂಡು ಗುಂಡೂರಾವ್ ಸರ್ಕಲ್ನಲ್ಲಿ ಬಲ ತಿರುವು ಪಡೆದುಕೊಂಡು ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ಪಿ.ಆರ್.ಟಿ.ಸಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ದೇವೆಗೌಡ ರಸ್ತೆ ದಿಣ್ಣೂರು ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ಆರ್. ಟಿ ನಗರ ಮುಖ್ಯರಸ್ತೆಗೆ ಹೋಗಬಹುದು.
ಹೆಬ್ಬಾಳ ಪಿ.ಎಸ್ ಜಂಕ್ಷನ್ ನಿಂದ ಸುಲ್ತಾನ್ ಪಾಳ್ಯ ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು: ಹೆಬ್ಬಾಳ ಪಿ.ಎಸ್ ಜಂಕ್ಷನ್ ನಿಂದ ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆಯಲ್ಲಿ ಎಡ ತಿರುವು ಪಡೆದುಕೊಂಡು ಗುಂಡೂರಾವ್ ಸರ್ಕಲ್ನಲ್ಲಿ ಬಲ ತಿರುವು ಪಡೆದುಕೊಂಡು ಮಠದಹಳ್ಳಿ ರಸ್ತೆ ವಾಟರ್ ಬ್ಯಾಂಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ಪಿ.ಆರ್.ಟಿ.ಸಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ದೇವೆಗೌಡ ರಸ್ತೆ ದಿಣ್ಣೂರು ಜಂಕ್ಷನ್ಲ್ಲಿ ಬಲ ತಿರುವು ಪಡೆದುಕೊಂಡು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 am, Mon, 9 September 24
Vivek Biradar
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.