TV9 Kannada Karnataka Bengaluru Ganesh Chaturthi: Vehicle traffic restricted in Bengaluru Tannery, Nagawara on Main Road, Kannada News
ಗಣೇಶ ಮೆರವಣಿಗೆ: ನಾಗವಾರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್, ಪಾರ್ಕಿಂಗ್ ನಿಷೇಧ
ಬೆಂಗಳೂರಿನ ಈ ರಸ್ತೆಯಲ್ಲಿ ಬುಧವಾರ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ನಗರದ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಪಾರ್ಕಿಂಗ್ ನಿಷೇಧಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಮಾರ್ಗ ಬದಲಾವಣೆ ಸೂಚಿಸಿದ್ದಾರೆ.
ಗಣೇಶ ಮೆರವಣಿಗೆ
ವಿವೇಕ ಬಿರಾದಾರ
Updated on:
Sep 10, 2024 | 7:58 AM
ಬೆಂಗಳೂರು, ಸೆಪ್ಟೆಂಬರ್ 09: ಬುಧವಾರ ಐದನೇ ಗಣೇಶ (Ganesha) ವಿಸರ್ಜನೆ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾನರಿ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಹೀಗಾಗಿ ಸೆಪ್ಟೆಂಬರ್ 11 ರಂದು ಈ ರಸ್ತೆಯಲ್ಲಿ ಮಧ್ಯಾಹ್ನ 12:30 ರಿಂದ ರಾತ್ರಿ 1:00 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗ ಇಲ್ಲಿದೆ.
ಸಂಚಾರ ನಿರ್ಬಂಧ
ನಾಗವಾರ ಮುಖ್ಯ ರಸ್ತೆ ಮತ್ತು ಟ್ಯಾನು / ಡೇವಿಸ್ ರೋಡ್ ಮುಖ್ಯ ರಸ್ತೆ
ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ರೋಜರ್ ರಸ್ತೆ, ಆರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ಹಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮಾಸ್ಕ್ ಜಂಕ್ಷನ್‌ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಲಾಜರ್ ರಸ್ತೆ ಮತ್ತು ಎಂ.ಎಂ ರಸ್ತೆ ಜಂಕ್ಷನ್ ನಿಂದ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಬುದ್ಧ ವಿಹಾರ ರಸ್ತೆ ಮೂಲಕ ಹೋಗುವ ಸಂಚಾರ ಬಂದ್ ಮಾಡಲಾಗಿದೆ.
ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಅಸಯೇ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ಬದಲಾಯಿಸಲಾಗಿದ್ದು, ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಮಾತ್ರ ಏಕ ಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) September 9, 2024
ಸಂಚಾರಕ್ಕೆ ಪರ್ಯಾಯ ಮಾರ್ಗ
ಧಣಿಸಂದ್ರ ಮುಖ್ಯ ರಸ್ತೆಯ ಕಡೆಯಿಂದ ಪುಲಕೇಶಿನಗರ ಮತ್ತು ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಥಣಿಸಂದ್ರ ಮುಖ್ಯ ರಸ್ತೆ ನಾಗವಾರ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದುಕೊಂಡು ಹೆಣ್ಣೂರು ಜಂಕ್ಷನ್‌ನಲ್ಲಿ ಬಲ ತಿರುವು ಹೆಚ್.ಬಿ.ಆರ್ 30 ಅಡಿ ರಸ್ತೆ ಸಿದ್ದಪ್ಪರೆಡ್ಡಿ ಜಂಕ್ಷನ್ – ಅಯೋದ್ಯ ಜಂಕ್ಷನ್ ಲಿಂಗರಾಜಮರಂ ಫೈ ಓವರ್ನಿಂದ ಹೆಚ್.ಎಂ ರೋಡ್ ಡೇವಿಸ್ ರೋಡ್ – ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ – ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿದೆ.
ಟ್ಯಾನರಿ ಮುಖ್ಯ ರಸ್ತೆ ಕಡೆಯಿಂದ ಥಣಿಸಂದ್ರ ಕಡೆಗೆ ಸಂಚರಿಸುವ ವಾಹನಗಳು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ – ಡೇವಿಸ್ ರೋಡ್ ಹೆಚ್.ಎಂ ರೋಡ್ ಜಂಕ್ಷನ್-ಲಿಂಗರಾಜಪುರಂ ಫ್ಲೈ ಓವರ್ – ಅಯೋಧ್ಯೆ ಜಂಕ್ಷನ್ – ಸಿದ್ದಪ್ಪ ರೆಡ್ಡಿ ಜಂಕ್ಷನ್ – ಹೆಣ್ಣೂರು ಜಂಕ್ಷನ್ ಎಡತಿರುವು – ಹೊರ ವರ್ತೂಲ ರಸ್ತೆ – ನಾಗವಾರ ಜಂಕ್ಷನ್‌ನಲ್ಲಿ ಬಲತಿರುವು ಪಡೆದುಕೊಂಡು ನೇರವಾಗಿ ಥಣಿಸಂದ್ರ ಕಡೆಗೆ ಸಂಚರಿಸಬಹುದಾಗಿದೆ.
ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಎಂ.ಎಂ ರಸ್ತೆ – ಮಾಸ್ಕ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದುಕೊಂಡು ಕ್ಲಾರೆನ್ಸ್ ಬ್ರಿಡ್ಜ್ ಬಲತಿರುವು ಪಡೆದುಕೊಂಡು ಪಾಟರಿ ರಸ್ತೆ ಹೆಚ್.ಎಂ. ರಸ್ತೆ ಮೂಲಕ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದುಕೊಂಡು ಎಂಎಂ ರಸ್ತೆಯಲ್ಲಿ ನೇರವಾಗಿ ಚಲಿಸಿ ಪಾಟರಿ ರಸ್ತೆ ರೈಲ್ವೆ ಅಂಡರ್ ಟ್ರಸ್ಟ್ ಮುಖಾಂತರ ಪಾಟರಿ ರಸ್ತೆ ತಲುಪಿ ಬಲ ತಿರುವು ಪಡೆದು ಹೆಚ್.ಎಂ.ರಸ್ತೆ ಮೂಲಕ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.
ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಸಂಚಾರವನ್ನು ಮಾರ್ಗ ಬದಲಾವಣೆ ಮಾಡಿ ಲಾಜರ್ ರಸ್ತೆಯಲ್ಲಿ ಸಂಚರಿಸಿ ರೈಲ್ವೆ ಅಂಡರ್ ಬ್ರಿಡ್ಜ್ ಮುಖಾಂತರ ಎಂ.ಎಂ ರಸ್ತೆ ತಲುಪಿ ಮಲಕೇಶಿನಗರ ಕಡೆಗೆ ಸಂಚರಿಸಬಹುದು.
ರೋಜರ್ ರಸ್ತೆ, ಅರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ಪಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ವಿವಿಯಾನಿ ರಸ್ತೆ ಮುಖಾಂತರ ಪಾಟರಿ ರಸ್ತೆ ತಲುಪಿ ಲಾಜರ್ ರಸ್ತೆ ರೈಲ್ವೆ ಅಂಡರ್ ಬ್ರಿಡ್ಜ್ ಮುಖಾಂತರ ಎಂ.ಎಂ ರಸ್ತೆ ತಲುಪಿ ಪುಲಕೇಶಿನಗರ ಕಡೆಗೆ ಸಂಚರಿಸಬಹುದು.
ಮಾಸ್ಕ್ ಜಂಕ್ಷನ್‌ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಸಂಚಾರವನ್ನು ಮಾರ್ಗ ಬದಲಾವಣೆ ಮಾಡಿ ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮುಖಾಂತರ ಲಾಜರ್ ರಸ್ತೆ ರೈಲ್ವೆ ಅಂರ್ಡಬ್ರಿಡ್ಜ್ ಮೂಲಕ ವಾಟರಿ ರಸ್ತೆ/ ತಲುಪಿ ಹೆಚ್.ಎಂ ರಸ್ತೆ ಮುಖೇನವಾಗಿ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.
ಲಾಜರ್ ರಸ್ತೆ ಮತ್ತು ಎಂ.ಎಂ ರಸ್ತೆ ಜಂಕ್ಷನ್ ನಿಂದ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಬುದ್ದ ವಿಹಾರ ರಸ್ತೆ ಮೂಲಕ ಹೋಗುವ ಸಂಚಾರವನ್ನು ಮಾರ್ಗ ಬದಲಾವಣೆ ಮಾಡಿ ಎಂ.ಎಂ ರಸ್ತೆ ಮೂಲಕ ಮಾನ್ಯ ಜಂಕ್ಷನ್ ಎಡ ತಿರುವು ಪಡೆದು ಕೋಲ್ಡ್ ರಸ್ತೆ – ವೀಲ್ಡರ್ ರಸ್ತೆ ಮೂಲಕ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಸಂಚರಿಸಬಹುದು.
ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಅಸ್ವಯೇ ರಸ್ತೆಯಲ್ಲಿ ಹೋಗುವ ಸಂಚಾರವನ್ನು ಮಾರ್ಗ ಬದಲಾವಣೆ ಮಾಡಿ ವೀಲ್ಡರ್ಸ್ ರಸ್ತೆ ಮೂಲಕ ಥಾಮಸ್ ಕೆಫೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದುಕೊಂಡು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಸಂಚರಿಸಬಹುದು.
ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ & ಸು ಪೊಲೀಸ್ ಠಾಣೆಯವರೆಗೆ ಮತ್ತು ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್ವರೆಗೆ, ಎಂ.ಎಂ ರಸ್ತೆ, ಪಾಟರಿ ರಸ್ತೆ, ಲಾಜರ್ ರಸ್ತೆ, ಬುದ್ಧ ವಿಹಾರ ರಸ್ತೆ, ಅಸ್ಸಾಯೇ ರಸ್ತೆಗಳ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 am, Tue, 10 September 24
ವಿವೇಕ ಬಿರಾದಾರ
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.