ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಕಾನ್ಸ್ಟೇಬಲ್ ಒಬ್ಬರು ನೇಣಿಗೆ ಶರಣಾಗಿದ್ದಾರೆ. ರಂಗನಾಥ್ ಕುಮಾರ್ ನೇಣಿಗೆ ಶರಣಾದ ಕಾನ್ಸ್ಟೇಬಲ್. ಬೆಂಗಳೂರಿನ ಉಪ್ಪಾರಪೇಟೆಯ ಖಾಸಗಿ ಲಾಡ್ಜ್ ಕೋಣೆಯಲ್ಲಿ ರಂಗನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾನ್ಸ್ಟೇಬಲ್ ರಂಗನಾಥ್ ಈ ಹಿಂದೆ ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಕಾರ್ಯನಿರ್ವಹಿಸಿದ್ದರು. ಲಾಡ್ಜ್ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್!
ಬೆಂಗಳೂರು: ರಾಮಮೂರ್ತಿನಗರ, ಹೆಣ್ಣೂರು ನಡುವಿನ ರೈಲ್ವೆ ಬ್ರಿಡ್ಜ್ ಬಳಿ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ರಿಕವರಿಗೆ ಹೋಗಿದ್ದ ವೇಳೆ ಆರೋಪಿ ರಘು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ರಘು ಮೇಲೆ ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ನವೆಂಬರ್ 12ರಂದು ಆರೋಪಿ ರಘು ಶ್ರೀಧರ್ ಎಂಬುವವರನ್ನು ಕೊಲೆಮಾಡಿದ್ದ. ಗ್ಯಾಂಗ್ ಸಮೇತ ಬಂದು ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ ಶ್ರೀಧರ್ನ ಹತ್ಯೆಗೈದಿದ್ದ. ಕೊಲೆಯಾದ ಶ್ರೀಧರ್ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷನಾಗಿದ್ದರು. ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದ ಗುಂಪು ಶ್ರೀಧರ್ನ ಕೊಲೆ ಮಾಡಿದ್ದರು.
ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಮೃತ ಶ್ರೀಧರ್ ಓಡಿದ್ದರು. ಆದರೆ ದುಷ್ಕರ್ಮಿಗಳು ಬೆನ್ನತ್ತಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
(gauribidanur constable suicide in a lodge at upparpet in bangalore)
Published On - 1:49 pm, Tue, 16 November 21