ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಪ್ರಕರಣ; ಕೆಲ ವಕೀಲರ ವಿರುದ್ಧ ಸಿಐಡಿ ತನಿಖೆ, ಎಫ್ಎಸ್ಎಲ್ ಪರಿಶೀಲನೆಗೆ ಹೈಕೋರ್ಟ್ ಅಸ್ತು

ಒಂದೇ ತಿಂಗಳಲ್ಲಿ ಆ ನಕಲಿ ಮಾಲೀಕರು, ನಕಲಿ ಬಾಡಿಗೆದಾರರೊಂದಿಗೆ ರಾಜಿ ಸಂಧಾನ ಮಾಡಿಕೊಂಡು ಕೇಸನ್ನು ಇತ್ಯರ್ಥ ಪಡಿಸಿಕೊಂಡು ಇದಕ್ಕೆ ಕೋರ್ಟ್ ಡಿಕ್ರಿ ಪಡೆದಿದ್ದರು.

ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಪ್ರಕರಣ; ಕೆಲ ವಕೀಲರ ವಿರುದ್ಧ ಸಿಐಡಿ ತನಿಖೆ, ಎಫ್ಎಸ್ಎಲ್ ಪರಿಶೀಲನೆಗೆ ಹೈಕೋರ್ಟ್ ಅಸ್ತು
ಹೈಕೋರ್ಟ್
Follow us
TV9 Web
| Updated By: sandhya thejappa

Updated on:Nov 16, 2021 | 3:01 PM

ಬೆಂಗಳೂರು: ಕೋರ್ಟ್ ದಾಖಲೆಗಳನ್ನೇ ತಿರುಚಿ, ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಖಾಸಗಿ ಆಸ್ತಿ ಕಬಳಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಹೈಕೋರ್ಟ್ ಅನುಮತಿ ನೀಡಿದೆ. ಕಳೆದ ವರ್ಷವಷ್ಟೇ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು. ಶಾ ಹರಿಲಾಲ್ ಭಿಕಾಬಾಯಿ ಕಂಪನಿಗೆ ಸೇರಿದ ಆಸ್ತಿಯನ್ನು ಮಾಲೀಕರ ಗಮನಕ್ಕೇ ಬರದೆ ಕೆಲ ವ್ಯಕ್ತಿಗಳು ಕಬಳಿಸಲು ಸಂಚು ರೂಪಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೇ ಕೆಲ ನಕಲಿ ವ್ಯಕ್ತಿಗಳನ್ನು ಕಟ್ಟಡದ ಬಾಡಿಗೆದಾರರೆಂದು ಹೆಸರಿಸಿ ಯಶವಂತಪುರದ 5600 ಚದರಡಿ ಜಾಗದಿಂದ ಅವರನ್ನು ಖಾಲಿ ಮಾಡಿಸಲು ಕೋರ್ಟ್ನಲ್ಲಿ 2018 ರಲ್ಲಿ ಕೇಸ್ ದಾಖಲಿಸಲಾಗಿತ್ತು.

ನಂತರ ಒಂದೇ ತಿಂಗಳಲ್ಲಿ ಆ ನಕಲಿ ಮಾಲೀಕರು, ನಕಲಿ ಬಾಡಿಗೆದಾರರೊಂದಿಗೆ ರಾಜಿ ಸಂಧಾನ ಮಾಡಿಕೊಂಡು ಕೇಸನ್ನು ಇತ್ಯರ್ಥ ಪಡಿಸಿಕೊಂಡು ಇದಕ್ಕೆ ಕೋರ್ಟ್ ಡಿಕ್ರಿ ಪಡೆದಿದ್ದರು. ನಂತರ ಈ ಡಿಕ್ರಿ ಬಳಸಿ ಮೂಲ ಮಾಲೀಕರನ್ನೇ ಸ್ವಾಧೀನದಿಂದ ಹೊರಹಾಕಲು ಯತ್ನಿಸಿದ್ದರು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಗಾಭರಿಯಾದ ಮೂಲ ಮಾಲೀಕರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಘಟನೆಯ ಬಗ್ಗೆ ಸಿಐಡಿ ತನಿಖೆಗೆ ನಿರ್ದೇಶನ ನೀಡಿದ್ದರು. ಪ್ರಕರಣದ ಗಂಭೀರತೆ ಪರಿಗಣಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿತ್ತು. ಸಿಐಡಿ ತನಿಖೆ ವೇಳೆ ಈ ಅಕ್ರಮದಲ್ಲಿ ಕೆಲವು ವಕೀಲರೂ ಪಾಲ್ಗೊಂಡಿದ್ದು ಪತ್ತೆಯಾಗಿತ್ತು.

ಅಲ್ಲದೇ ಬೆಂಗಳೂರಿನ ಜಯನಗರ ಸೇರಿ ಹಲವೆಡೆ ಇಂಥದ್ದೇ ಅಕ್ರಮ ಎಸಗಿರುವುದು ಕಂಡು ಬಂದಿದೆ. ಕೋರ್ಟ್ಗಳಲ್ಲಿ ದಾಖಲಾದ 71 ಪ್ರಕರಣ ಸೇರಿದಂತೆ ಒಟ್ಟು 118 ಇಂತಹ ಪ್ರಕರಣ ನಡೆದಿರುವುದು ಸಿಐಡಿ ತನಿಖೆ ವೇಳೆ ಪತ್ತೆಯಾಗಿದೆ. ಹೈಕೋರ್ಟ್ ಪ್ರಕರಣದ ತನಿಖಾಧಿಕಾರಿಗಳಿಗೆ ಸಹಕರಿಸುವಂತೆ ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯ ಕೂಡಾ ದಾಖಲೆಗಳನ್ನು ಸಿಐಡಿಗೆ ರವಾನಿಸಿದೆ.

ನೋಟರಿ ದಾಖಲೆಗಳನ್ನೂ ಬಳಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಕೆಲ ವಕೀಲರು, ಕೆಲ ನೋಟರಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಂದೆ ಇಂತಹ ಘಟನೆ ಮರುಕಳಿಸದಂತೆ ತಡೆಯಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅನ್ನೂ ಪ್ರತಿವಾದಿಯಾಗಿಸಿದೆ. ಕೋರ್ಟ್ಗೆ ಸಲಹೆ ನೀಡಲು ವಕೀಲ ಶ್ರೀಧರ್ ಪ್ರಭುರನ್ನು ಅಮೈಕಸ್ ಕ್ಯೂರಿಯಾಗಿ ನೇಮಿಸಿತ್ತು. ಇಂದು ಕೋರ್ಟ್ಗೆ ಹೇಳಿಕೆ ನೀಡಿದ ಅಮೈಕಸ್ ಕ್ಯೂರಿ ನೋಟರಿ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಅಗತ್ಯವಿದೆ. ನೋಟರಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಅಂತಿಮ ಆದೇಶದ ವೇಳೆ ಈ ಬಗ್ಗೆ ಪರಿಗಣಿಸುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ರವರಿದ್ದ ವಿಭಾಗೀಯ ಪೀಠ ಸದ್ಯ ಜಮೀನಿನ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಅನುಮತಿ ನೀಡಿದೆ. ತನಿಖೆ ಪ್ರಗತಿ ವರದಿ ಸಲ್ಲಿಸಲು ಸಿಐಡಿ ಪೊಲೀಸರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ

ಯಾದಗಿರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ! 52 ಲಕ್ಷ ರೂ. ಮೌಲ್ಯದ ಮರಳು ಜಪ್ತಿ

ಮಧ್ಯರಾತ್ರಿ ಹಸುವನ್ನು ರಕ್ಷಿಸಿದ ಪಂಜಾಬ್ ಮುಖ್ಯಮಂತ್ರಿ; ಸಾಮಾಜಿಕ ಮಾಧ್ಯಮದಲ್ಲಿ ಚನ್ನಿ ಕಾರ್ಯಕ್ಕೆ  ಶ್ಲಾಘನೆ

Published On - 3:00 pm, Tue, 16 November 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ