ಗೋವಾದಲ್ಲಿ ಭೀಕರ ಅಗ್ನಿ ಅವಘಡ: ನೆರೆ ರಾಜ್ಯದ ಘೋರ ದುರಂತದಲ್ಲಿ ಕನ್ನಡಿಗನೂ ಬಲಿ!
ನೆರೆ ರಾಜ್ಯ ಗೋವಾ ಕ್ಲಬ್ನಲ್ಲಿ ಸಂಭವಿಸಿರುವ ಭೀಕರ ಅಗ್ನಿ ಅವಘಡದಲ್ಲಿ ಬರೋಬ್ಬರಿ 25 ಜನರು ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ ಬೆಂಗಳೂರಿನ ನಿವಾಸಿ ಕೂಡ ಮೃತಪಟ್ಟಿದ್ದಾರೆ. ನಿನ್ನೆ ಐವರು ಸ್ನೇಹಿತರ ಜೊತೆ ಗೋವಾಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಇಂದು ರಾತ್ರಿಯೇ ಮೃತದೇಹ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

ಬೆಂಗಳೂರು, ಡಿಸೆಂಬರ್ 09: ಗೋವಾದಲ್ಲಿ ನಡೆದಿರುವ ಭೀಕರ ಅಗ್ನಿ ದುರಂತದಲ್ಲಿ (Fire accident) ಒಬ್ರಲ್ಲ, ಇಬ್ರಲ್ಲ ಒಟ್ಟು 25 ಮಂದಿ ಸಜೀವ ದಹನವಾಗಿದ್ದಾರೆ. ಆ 25 ಜನರ ಪೈಕಿ ಕರ್ನಾಟಕದ ಓರ್ವ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ. ಬೆಂಗಳೂರಿನ (bangaluru) ಥಣಿಸಂದ್ರದ ಹೆಗಡೆನಗರದ ನಿವಾಸಿ ಇಶಾಕ್(25) ಮೃತ ದುರ್ದೈವಿ. ಸದ್ಯ ಗೋವಾದಲ್ಲಿ ಮೃತದೇಹದ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಕುಟುಂಬಸ್ಥರು ರಾತ್ರಿಯೇ ಬೆಂಗಳೂರಿಗೆ ತರುವ ಪ್ರಯತ್ನದಲ್ಲಿದ್ದಾರೆ.
ಮೊಬೈಲ್ ತರಲು ಹೋಗಿ ಪ್ರಾಣ ಬಿಟ್ಟ ಇಸಾಕ್!
ಈ ಘೋರದಲ್ಲಿ ಬೆಂಗಳೂರು ಮೂಲದ ಇಸಾಕ್ ಕೂಡ ಪ್ರಾಣ ಬಿಟ್ಟಿದ್ದಾರೆ. ನಾಲ್ವರು ಸ್ನೇಹಿತರ ಜೊತೆ ಇಸಾಕ್ ನಿನ್ನೆ ಮಧ್ಯಾಹ್ನ ಗೋವಾ ಟ್ರಿಪ್‌ಗೆ ಹೋಗಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಫ್ರೆಂಡ್ಸ್ ಜತೆ ಹೊರ ಬಂದಿದ್ದರು. ಆದರೆ ಮೊಬೈಲ್ ಟೇಬಲ್ ಮೇಲೆ ಬಿಟ್ಟು ಬಂದಿದ್ದೇನೆ ಅಂತಾ ಮತ್ತೆ ವಾಪಸ್ ಆಗಿದ್ದು, ಈ ವೇಳೆ ಬೆಂಕಿ ಕೆನ್ನಾಲಗೆಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ: Video: ಗೋವಾ ಕ್ಲಬ್ನಲ್ಲಿ ಭೀಕರ ಅಗ್ನಿ ಅವಘಡ, ಪ್ರವಾಸಿಗರು ಸೇರಿ 25 ಮಂದಿ ಸಜೀವ ದಹನ, ವಿಡಿಯೋ ಇಲ್ಲಿದೆ
ಕ್ರಿಸ್‌ಮಸ್ ಬರುತ್ತಿದೆ. ಹೊಸ ವರ್ಷ ಕೂಡ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗೋವಾ ಪ್ರವಾಸಿಗರಿಂದಲೇ ಗಿಜಿಗಿಜಿ ಎನ್ನುತ್ತೆ. ಅದರಲ್ಲೂ ವೀಕೆಂಡ್‌ಗಳಲ್ಲಂಥೂ ಪ್ರವಾಸಿಗರ ಸಾಗರವೇ ಕಾಣುತ್ತೆ. ವೀಕೆಂಡ್ ಅಂತಾ ನಿನ್ನೆ ಕೂಡ ಗೋವಾಗೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಉತ್ತರ ಗೋವಾದ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲೂ ಡಿಜೆ ನೈಟ್ ಆಯೋಜನೆ ಆಗಿತ್ತು.
ಇದನ್ನೂ ಓದಿ: Video: ಬೆಲ್ಲಿ ನೃತ್ಯ ನಡೀತಿತ್ತು , ಗೋವಾ ನೈಟ್ಕ್ಲಬ್ ಒಳಗೆ ಬೆಂಕಿ ಹೊತ್ತಿಕೊಳ್ಳುವ ಸಮಯದ ವಿಡಿಯೋ
ರಾತ್ರಿ 10 ಗಂಟೆಯಿಂದಲೇ ಎಲ್ರೂ ಕುಡಿದು, ಕುಣಿದು ಕುಪ್ಪಳಿಸುತ್ತಿದ್ದರು. ಹೀಗೆ ಪಾರ್ಟಿ ಸಾಗಿವಾಗಿರುವಾಗಲೇ ರಾತ್ರಿ 12.30 ರ ಸುಮಾರಿನಲ್ಲಿ ವೇದಿಕೆ ಮೇಲೆ ಹೊಗೆ ಕಾಣಿಸಿಕೊಂಡಿತ್ತು. ಸಣ್ಣದಾಗಿ ಬೆಂಕಿಯೂ ಹೊತ್ತಿತ್ತು. ನೋಡ ನೋಡ್ತಿದ್ದಂತೆ ಇಡೀ ಕ್ಲಬ್‌ಗೆ ಬೆಂಕಿ ಆವರಿಸಿದ್ದು, 25 ಮಂದಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. 4 ಜನರು ಪ್ರವಾಸಿಗರು, 14 ಜನ ಮೃತಪಟ್ಟಿರುವುದು ದೃಢವಾಗಿದ್ದು, ಇನ್ನೂ 7 ಜನರ ಗುರುತು ಪತ್ತೆ ಆಗಿಲ್ಲ. ನೆರೆ ರಾಜ್ಯದ ಘೋರ ಅಗ್ನಿ ಅವಘದಲ್ಲಿ ಕನ್ನಡಿಗನೂ ಬಲಿ ಆಗಿರುವುದು ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



