ಬೆಂಗಳೂರು: ಕಳೆದ ವಾರದಿಂದ ನಿರಂತವಾಗಿ ಚಿನ್ನದ ದರ ಏರುತ್ತಲೇ ಇದೆ. ಇಂದು (ಜೂನ್ 2) ಕೂಡಾ ಚಿನ್ನದ ದರ ಏರಿಕೆಯತ್ತ ಸಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಕಳೆದ ಕೆಲವು ದಿನಗಳಿಂದ ಬೆಳ್ಳಿ ದರ ಇಳಿಕೆಯತ್ತ ಸಾಗಿತ್ತು. ಆದರೆ ಇಂದು ಕೊಂಚ ಏರಿಕೆ ಕಂಡಿದೆ. ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ ಸೇರಿ ಇನ್ನಿತರ ನಗರಗಳಲ್ಲಿ ಆಭರಣಗಳ ಬೆಲೆ ಎಷ್ಟಿದೆ ಎಂಬ ಕುತೂಹಲ ಕಾಡುವುದು ಸಹಜ. ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟು ನಿಗದಿಯಾಗಿದೆ ಎಂಬುದನ್ನು ನೊಡೋಣ.
ಕಳೆದ ವಾರದಿಂದ ಚಿನ್ನದ ದರ ಏರಿಕೆಯತ್ತ ಸಾಗುತ್ತಲೇ ಇದೆ. ಇದರಿಂದ ಚಿನ್ನ ಪ್ರಿಯರು ನಿರಾಸೆಗೊಂಡಿದ್ದಾರೆ. ಕೇವಲ ಆಭರಣ ತೊಟ್ಟು ಖುಷಿ ಪಡುವುದೊಂದೇ ಅಲ್ಲದೇ ಚಿನ್ನವನ್ನು ಖರೀದಿಸಿಟ್ಟು ಭವಿಷ್ಯದಲ್ಲಿ ಸಹಾಯವಾಗುವುದು ಎಂಬುದು ಭಾರತೀಯರ ಉದ್ದೇಶ. ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವಲ್ಲಿ ಹೆಚ್ಚು ಹಣ ವ್ಯಯಿಸುತ್ತಾರೆ.
ವಿವಿಧ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಮಾಹಿತಿ
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,100 ರೂಪಾಯಿಗೆ ಏರಿಕೆ ಆಗಿದೆ. ಸರಿಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 230 ರೂಪಾಯಿ ಏರಿಕೆ ಕಂಡು ಬಂದಿದ್ದು ಇಂದು 50,300 ರೂಪಾಯಿಗೆ ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ ಬೆಳ್ಳಿ ದರವನ್ನು ಗಮನಿಸಿದಾಗ 1ಕೆಜಿ ಬೆಳ್ಳಿಗೆ 72,600 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,390 ರೂಪಾಯಿಗೆ ಏರಿಕೆ ಆಗಿದೆ. ಅದೇರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,600 ರೂಪಾಯಿ ಆಗಿದೆ. ಸರಿಸುಮಾರು 120 ರೂಪಾಯಿಯಷ್ಟು ಹೆಚ್ಚಳವಾಗಿದೆ. ಇನ್ನು, ಬೆಳ್ಳಿ ದರದಲ್ಲಿ 500 ರೂಪಾಯಿಯಷ್ಟು ಏರಿಕೆಯಾದ ಬಳಿಕ 1ಕೆಜಿ ಬೆಳ್ಳಿ ಬೆಲೆ 77,300 ರೂಪಾಯಿ ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,980 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,980 ರೂಪಾಯಿ ಆಗಿದೆ. ಇನ್ನು, ಬೆಳ್ಳಿ ದರ 600 ರೂಪಾಯಿ ಹೆಚ್ಚಳದ ಬಳಿಕ 1 ಕೆಜಿ ಬೆಳ್ಳಿಗೆ 72,600 ರೂಪಾಯಿ ನಿಗದಿಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,900 ರೂಪಾಯಿ ಆಗಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,900 ರೂಪಾಯಿ ನಿಗದಿ ಮಾಡಲಾಗಿದೆ. ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು 1ಕೆಜಿ ಬೆಳ್ಳಿ ದರ 600 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 72,600 ರೂಪಾಯಿ ದಾಖಲಾಗಿದೆ.
ಒಟ್ಟಾರೆಯಾಗಿ ಗಮನಿಸಿದಾಗ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ. ಅಂತರಾಷ್ಟ್ರೀಯ ಟ್ರೆಂಡ್ ಹಾಗೂ ಚಿನ್ನದ ಮೇಲಿನ ಆಮದು ಸುಂಕದ ಮೌಲ್ಯವನ್ನು ಆಧರಿಸಿ ಪ್ರತಿನಿತ್ಯ ಆಭರಣದ ಬೆಲೆಯನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ:
Gold Silver Rate Today: ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?
Published On - 8:19 am, Wed, 2 June 21