ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 6 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಜಪ್ತಿ; ಶೌಚಾಲಯದಲ್ಲೂ ಸಿಕ್ತು ಬಂಗಾರ

ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6.29 ಕೋಟಿ ಮೌಲ್ಯದ ಚಿನ್ನವನ್ನು ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು DRI ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಶೌಚಾಲಯದಲ್ಲಿ ಸಿಕ್ಕಿರುವ ಚಿನ್ನದ ಬಗ್ಗೆಯೂ ವಿಚಾರಣೆ ಶುರವಾಗಿದೆ.

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 6 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಜಪ್ತಿ; ಶೌಚಾಲಯದಲ್ಲೂ ಸಿಕ್ತು ಬಂಗಾರ
ಪ್ರಾತಿನಿಧಿಕ ಚಿತ್ರ
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 07, 2024 | 7:16 PM

ಬೆಂಗಳೂರು, ಜೂ.07: ನಿನ್ನೆಯಷ್ಟೇ(ಜೂ.06) ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನವನ್ನು (gold) ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ (Kempegowda International Airport) ಜಪ್ತಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇಂದು(ಜೂ.07) ಕೂಡ ಅಕ್ರಮವಾಗಿ ಸಾಗಿಸುತ್ತಿದ್ದ 6.29 ಕೋಟಿ ಮೌಲ್ಯದ ಚಿನ್ನವನ್ನು ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕಾಕ್​ನಿಂದ  ಇಬ್ಬರು ಮಹಿಳೆಯರು ಬೆಂಗಳೂರಿನ ಕೆಂಪೇಗೌಡ ಏರ್​​ಪೋರ್ಟ್​​ಗೆ ಬಂದಿಳಿದಿದ್ದರು. ಅದರಲ್ಲಿ ನಾಜಿ ಲಿಟಿ  ಎಂಬುವವರಿಂದ 2 ಕೆಜಿ 181 ಗ್ರಾಂ ಚಿನ್ನ ಹಾಗೂ ಆರತಿ ಸೆಗಾಲ್ ಎಂಬುವವರಿಂದ  4 ಕೆಜಿ 61 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಮಾನ ನಿಲ್ದಾಣದ ಶೌಚಾಲಯದಲ್ಲೂ 2 ಕೆಜಿ 772 ಗ್ರಾಂ ಚಿನ್ನ ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು DRI ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಶೌಚಾಲಯದಲ್ಲಿ ಸಿಕ್ಕಿರುವ ಚಿನ್ನದ ಬಗ್ಗೆಯೂ ವಿಚಾರಣೆ ಶುರವಾಗಿದೆ.

ಇದನ್ನೂ ಓದಿ:ಬೆಂಗಳೂರು ಏರ್​ಪೋರ್ಟ್: ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ವಶ, ಚಿನ್ನ ಜಪ್ತಿ

ನಿನ್ನೆಯಷ್ಟೇ 6 ಕೆಜಿ 834 ಗ್ರಾಂ ಚಿನ್ನ ಸೀಜ್​

ನಿನ್ನೆ(ಜೂ.06)ಯಷ್ಟೇ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ 6 ಕೆಜಿ 834 ಗ್ರಾಂ ಚಿನ್ನವನ್ನು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಜಪ್ತಿ ಮಾಡಲಾಗಿತ್ತು. ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಥಾರ್ ಏರ್ ವೇಸ್ ವಿಮಾನದಲ್ಲಿ ಆಗಮಿಸಿದ್ದ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಹ್ಯಾಂಡ್ ಬ್ಯಾಗ್​ನಲ್ಲಿ ಮುಚ್ಚಿಟ್ಟು ಚಿನ್ನ ಸಾಗಾಟಕ್ಕೆ ಯತ್ನಿಸಿದ್ದರು. ಇದರ ಬೆನ್ನಲ್ಲೇ ಇದೀಗ ಆರು ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ