AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂ ಕಳ್ಳತನ ಪ್ರಕರಣ; ಮಷಿನ್​ಗೆ ಹಣ ಹಾಕ್ತಿದ್ದವರಿಂದಲೇ ಕೃತ್ಯ, ಮೂವರ ಬಂಧನ

ಬೆಂಗಳೂರು ನಗರದ ವಿಕ್ಟೋರಿಯಾ ಲೇಔಟ್​ನಲ್ಲಿರುವ ಎಟಿಎಂ ನಲ್ಲಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುರಳಿ ಮೋಹನ್, ಪೋತಾಲು ಸಾಹಿ ತೇಜ ಹಾಗೂ ಎರೆ ಕಾಲ ವೆಂಕಟೇಶ್ ಎಂಬುವವರು ಬಂಧಿತರು. ಕಳ್ಳತನ ಮಾಡಿ ಆಂಧ್ರಗೆ ತೆರಳುವಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಎಟಿಎಂ ಕಳ್ಳತನ ಪ್ರಕರಣ; ಮಷಿನ್​ಗೆ ಹಣ ಹಾಕ್ತಿದ್ದವರಿಂದಲೇ ಕೃತ್ಯ, ಮೂವರ ಬಂಧನ
ಬಂಧಿತ ಆರೋಪಿಗಳು
Follow us
ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 07, 2024 | 6:43 PM

ಬೆಂಗಳೂರು, ಜೂ.07: ನಗರದ ವಿಕ್ಟೋರಿಯಾ ಲೇಔಟ್​(Victoria Layout)ನಲ್ಲಿರುವ ಎಟಿಎಂ ನಲ್ಲಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗನ್ನು ಪೊಲೀಸರು ಬಂಧಿಸಿದ್ದಾರೆ. ಮುರಳಿ ಮೋಹನ್, ಪೋತಾಲು ಸಾಹಿ ತೇಜ ಹಾಗೂ ಎರೆ ಕಾಲ ವೆಂಕಟೇಶ್ ಎಂಬುವವರು ಬಂಧಿತರು. ಆರೋಪಿ ಮುರುಳಿ ಈ ಹಿಂದೆ ಎಟಿಎಂಗಳಿಗೆ ಹಣ ಹಾಕುವ ಸೆಕ್ಯೂರಿಟಿ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ 2022 ರಲ್ಲಿ ಕೆಲಸ ಬಿಟ್ಟಿದ್ದ. ಸದ್ಯ ಅದೇ ಏಜೆನ್ಸಿಯಲ್ಲಿ ಎರೆ ಕಾಲು ವೆಂಕಟೇಶ ಕೆಲಸ ಮಾಡುತ್ತಿದ್ದ.

ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಮುರುಳಿ ಹಾಗೂ ಎರೆ ಕಾಲ ವೆಂಕಟೇಶ್ ನಡುವೆ ಪರಿಚಯವಾಗಿತ್ತು. ಅಲ್ಲದೇ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಅಕ್ಕ-ಪಕ್ಕದ ಹಳ್ಳಿಯವರು. ಇತ್ತ ಕೆಲಸ ಬಿಟ್ಟು ಊರಿಗೆ ಹೋಗಿದ್ದ ಮುರುಳಿ, ಮೈತುಂಬ ಸಾಲ ಮಾಡಿಕೊಂಡಿದ್ದ. ನಂತರ ಸಾಲ ತೀರಿಸಲು ಹಣ ಮಾಡುವ ನಿರ್ಧಾರ ಮಾಡಿದ ಆತ, ಪ್ಲ್ಯಾನ್ ಒಂದನ್ನು ಮಾಡುತ್ತಾನೆ.

ಇದನ್ನೂ ಓದಿ:ಕಳ್ಳತನ ಮಾಡಲು ಹೋಗಿ ಎಸಿ ಕೆಳಗೆ ನಿದ್ರೆಗೆ ಜಾರಿದ ಕಳ್ಳ

ಮಧ್ಯರಾತ್ರಿ ಎಟಿಎಂಗೆ ತೆರಳಿ ಪಾಸ್ ವರ್ಡ್ ಬಳಸಿ ಹಣ ಕಳ್ಳತನ

ಎಟಿಎಂ ಗೆ ಹಣ ಹಾಕಲು 12 ಸಂಖ್ಯೆಯ ಪಿನ್ ನಂಬರ್ ಕಸ್ಟೋಡಿಯನ್​ಗಳಿಗೆ ನೀಡಲಾಗಿರುತ್ತದೆ. ಇಬ್ಬರು ವ್ಯಕ್ತಿಗಳಿಗೆ ತಲಾ ಆರು ನಂಬರ್ ಪಾಸ್ ವರ್ಡ್ ಕೊಡುತ್ತಾರೆ. ಒಮ್ಮೆ ಕಸ್ಟೋಡಿಯನ್ ಬರದಿದ್ದಾಗ ಮೊದಲ ಪಾಸ್​ವರ್ಡ್​ನ್ನು ಪಡೆದಿದ್ದ. ಅದೇ ನಂಬರ್​ನ್ನು ತನ್ನ ಬಳಿ ಬರೆದಿಟ್ಟುಕೊಂಡು ಕೆಲಸ ಬಿಟ್ಟಿದ್ದ. ಇದಾದ ಬಳಿಕ ಕೊನೆಯ 6 ಪಾಸ್ ವರ್ಡ್ ಎರೆ ಕಾಲ ವೆಂಕಟೇಶ್​ಗೆ ಗೊತ್ತಿರುತ್ತದೆ. ಹಾಗಾಗಿ ಆತನನ್ನ ಸಂಪರ್ಕ ಮಾಡಿದ್ದ ಮುರುಳಿ, ಆತನಿಗೂ ಈ ಕೃತ್ಯದ ಬಗ್ಗೆ ಹೇಳುತ್ತಾನೆ.  ಹಣದ ಅವಶ್ಯಕತೆ ಇದ್ದ ಆತ, ಇದಕ್ಕೆ ಒಪ್ಪಿ ಪಾಸ್ ವರ್ಡ್ ನೀಡುತ್ತಾನೆ.

ಇದಾದ ನಂತರ ಮೇ.31 ರಂದು ಮುರುಳಿ ಮತ್ತು ಪೋತಾಲು ಸಾಹಿ ತೇಜ ಬೆಂಗಳೂರಿಗೆ ಬಂದಿದ್ದರು. ಎರೆ ಕಾಲ ವೆಂಕಟೇಶ್ ಊರಿನಲ್ಲೇ ಉಳಿದುಕೊಂಡಿದ್ದ. ಮಧ್ಯರಾತ್ರಿ ಎಟಿಎಂಗೆ ತೆರಳಿ ಪಾಸ್ ವರ್ಡ್ ಬಳಸಿ ಬಾಕ್ಸ್​ನಲ್ಲಿ ಇದ್ದ 20 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ. ಬಳಿಕ ಬೆಂಗಳೂರಲ್ಲೇ ಎರಡು ದಿನ ಉಳಿದುಕೊಂಡು, ಆಂಧ್ರಗೆ ತೆರಳುವಾಗ ಇಬ್ಬರನ್ನು ಪೊಲೀಸರು ಲಾಕ್ ಮಾಡಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ