ಬೆಂಗಳೂರಿಗರಿಗೆ ಗುಡ್ ನ್ಯೂಸ್: ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾರಂಭ
Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲಿಸಿದ್ದಾರೆ. ಮಾರ್ಚ್ ವೇಳೆಗೆ ಸುರಂಗ ಮಾರ್ಗದ ಕೆಲಸ ಪೂರ್ಣಗೊಳ್ಳಲಿದ್ದು, ಶೀಘ್ರವೇ ಕಾಳೇನ ಅಗ್ರಹಾರ-ನಾಗವಾರ ಮಾರ್ಗ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ. ಏರ್ಪೋರ್ಟ್ಗೆ ಸಂಪರ್ಕ ಕಲ್ಪಸುವ ಬ್ಲ್ಯೂ ಲೈನ್ ಕಾಮಗಾರಿಯ 2A, 2B ಯೋಜನೆಗೂ ವೇಗ ಸಿಕ್ಕಿದೆ.

ಮುಖ್ಯಾಂಶಗಳು
- ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ
- ಶೀಘ್ರವೇ ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾರಂಭ
- ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಆಗಸ್ಟ್ 23: ಬೆಂಗಳೂರಿಗರ ಬಹು ವರ್ಷಗಳ ಬೇಡಿಕೆಯಾಗಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡುವ ಸುಳಿಸು ಸಿಕ್ಕಿದೆ. ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ 21 ಕಿಲೋ ಮೀಟರ್ ಉದ್ದದ ಈ ಮಾರ್ಗದ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದ್ದು, ಮಹತ್ವದ ಅಪ್ಡೇಟ್ಸ್ ನೀಡಿದ್ದಾರೆ. ಎಲಿವೇಟೆಡ್ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ ವೇಳೆಗೆ ಅಂಡರ್ ಗ್ರೌಂಡ್ ಕೆಲಸಗಳೂ ಮುಗಿಯಲಿವೆ ಎನ್ನಲಾಗಿದೆ.
ಲಕ್ಷಾಂತರ ಮೆಟ್ರೋ ಪ್ರಯಾಣಿಕರ ಬೇಡಿಕೆಯಾದ ಪಿಂಕ್ ಲೈನ್ ಲೋಕಾರ್ಪಣೆಗೆ ಒತ್ತಡ ಹೆಚ್ಚಾಗಿರುವ ಹಿನ್ನೆಲೆ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಶಾಸಕ ಹಾಗೂ ಸಚಿವ ರಿಜ್ವಾನ್ ಅರ್ಷದ್, ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್ ಜೊತೆಗೂಡಿ BMRCL ಅಧಿಕಾರಿಗಳಿಂದ ಕಾಮಗಾರಿಗಳ ಕುರಿತಾಗಿ ಮಾಹಿತಿ ಪಡೆದಿದ್ದಾರೆ. MG ರಸ್ತೆ ಸುರಂಗ ನಿಲ್ದಾಣದಿಂದ ಶಿವಾಜಿನಗರದ ವರೆಗೆ ಕಾಲ್ನಡಿಗೆಯಲ್ಲೇ ತೆರಳಿ ಅವರು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಫೇಸ್-3 ಮೆಟ್ರೋ ಮಾರ್ಗದಲ್ಲಿ 37ರ ಬದಲು 11 ಕಿ.ಮೀ. ಮಾತ್ರ ಡಬಲ್ ಡೆಕ್ಕರ್ ಫ್ಲೈಓವರ್?
ಉಳಿದ ಮೆಟ್ರೋ ಯೋಜನೆಗಳಿಗೂ ವೇಗ
ಪಿಂಕ್ ಲೈನ್ ಕಾಮಗಾರಿ ಮುಗಿಯುತ್ತ ಬಂದಿರುವ ನಡುವೆ ಏರ್ಪೋರ್ಟ್ಗೆ ಸಂಪರ್ಕ ಕಲ್ಪಸುವ ಬ್ಲ್ಯೂ ಲೈನ್ ಕಾಮಗಾರಿಯ 2A, 2B ಯೋಜನೆಗೂ ವೇಗ ನೀಡಲಾಗಿದೆ. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರ ಮೂಲಕ ನಾಗವಾರ, ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್ಗಿದು ಸಂಪರ್ಕ ಕಲ್ಪಿಸಲಿದೆ. 2027 ಡಿಸೆಂಬರ್ ಅಥವಾ 2028ರ ಮಾರ್ಚ್ ವೇಳೆಗೆ ನೀಲಿ ಮಾರ್ಗದ ಲೋಕಾರ್ಪಣೆ ನಡೆಯುವ ಸಾಧ್ಯತೆ ಇದ್ದು, ಕಾರ್ಯಸಾಧ್ಯತಾ ವರದಿ ಬಳಿಕ ಹಳದಿ ಮಾರ್ಗ ವಿಸ್ತರಣೆ ಬಗ್ಗೆ ನಿರ್ಧಾರ ಆಗಲಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Sun, 23 August 26




