ಬೆಂಗಳೂರು, ಜೂನ್.17: ವಾಹನ ಸವಾರರ ದುಃಸ್ವಪ್ನವಾಗಿದ್ದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನ (Central Silk Board Junction) ಜಾಮ್ ಶೀಘ್ರದಲ್ಲಿಯೇ ಕೊನೆಯಾಗುವ ದಿನ ಹತ್ತಿರವಾಗುತ್ತಿದೆ. ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ ವರಗೆ ನಿರ್ಮಾಣವಾಗ್ತಿದ್ದ 3.3 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ಕಾಮಗಾರಿ ಕಂಪ್ಲಿಟ್ ಆಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೆ ಸಜ್ಜಾಗ್ತಿದೆ.
ಅಂತಿಮ ತಪಾಸಣೆ ಬಾಕಿಯಿದ್ದು ಅದು ಮುಗಿಯುತ್ತಿದ್ದಂತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಈ ಡಬಲ್ ಡೆಕ್ಕರ್ ಫ್ಲೈಓವರ್ನಲ್ಲಿ ಮೆಟ್ರೋ ರೈಲು ಹಾಗೂ ವಾಹನ ಸಂಚರಿಸುತ್ತೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್‌ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ. ಸಂಚಾರ ದಟ್ಟಣೆ ನಿವಾರಣೆ ದೃಷ್ಟಿಯಿಂದ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸಿಗ್ನಲ್ ಮುಕ್ತವಾಗಿಸಲಾಗಿದೆ. ಎಚ್‌ಎಸ್‌ಆರ್ ಲೇಔಟ್ ಹಾಗೂ ಹೊಸೂರು ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಪಬಹುದು.
ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬಿಸಿ, ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ
ಇದರ ಜೊತೆಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಬಿಎಂಆರ್‌ಸಿಎಲ್‌ನಿಂದ ಬರೋಬ್ಬರಿ ಐದು ರ್ಯಾಂಪ್‌ಗಳ ನಿರ್ಮಾಣ ಮಾಡ್ತಿದೆ. ಒಂದು ರ್ಯಾಂಪ್ ರಾಗಿಗುಡ್ಡದಿಂದ ಡಬಲ್ ಡೆಕ್ಕರ್ ಫ್ಲೈ ಒವರ್ ಮೇಲೆ ಬರುವ ವಾಹನ ಸವಾರಿಗೆ ಸಿಲ್ಕ್ ಬೊರ್ಡ್ ನಲ್ಲಿ ಸಿಗ್ನಲ್‌ನಲ್ಲಿ ನಿಲ್ಲದೆ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಗೆ ತಲುಪಲು ಸಹಕಾರಿಯಾಗುತ್ತದೆ. ಮತ್ತೊಂದು ರ‍್ಯಾಂಪ್ ಬಿಟಿಎಂ ಲೇಔಟ್‌ನಿಂದ ಬರುವವರು ಔಟರ್ ರಿಂಗ್ ರೋಡ್ ಮತ್ತು ಹೊಸೂರು ರಸ್ತೆ ಪ್ರವೇಶಿಸಲು ಬಳಸಬಹುದು. ಇನ್ನೊಂದು ರ್ಯಾಂಪ್ ರಾಗಿಗುಡ್ಡದಿಂದ ಬರೋರು ಕೆ.ಆರ್. ಪುರಂ ಕಡೆಗೆ ಹೋಗಲು ನೆರವಾಗುತ್ತೆ. ಈ ಬಗ್ಗೆ ವಾಹನ ಸವಾರ ರಾಮಚಂದ್ರ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸಿಲ್ಕ್ ಬೋರ್ಡ್ ಸಿಗ್ನಲ್ ಮುಕ್ತ ಮಾಡುವ ಕೆಲಸಕ್ಕೆ ವಾಹನ ಸವಾರರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಒಮ್ಮೆ ಓಪನ್ ಆದ್ರೆ ಸಾಕು ಅಂತ ಕಾಯ್ದಿದ್ದಾರೆ. ಆದಷ್ಟು ಬೇಗ ಓಪನ್ ಆಗಲಿ ಎನ್ನುವುದೇ ನಮ್ಮ ಆಶಯ ಕೂಡ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ