ಒಳ್ಳೆಯ ವ್ಯಕ್ತಿಯನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ; ನನಗೆ ನೂರಕ್ಕೆ ನೂರರಷ್ಟು ಸಚಿವ ಸ್ಥಾನ ಸಿಗಲಿದೆ: ಶಾಸಕ ತಿಪ್ಪಾರೆಡ್ಡಿ
Karnataka Politics: ಬಸವರಾಜ ಬೊಮ್ಮಾಯಿಗೆ ಎಲ್ಲ ವಿಚಾರಗಳು ಗೊತ್ತಿವೆ. ಒಳ್ಳೆಯ ವ್ಯಕ್ತಿಯನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಇದಕ್ಕಾಗಿ ಹೈಕಮಾಂಡ್ ಹಾಗೂ ಬಿಎಸ್‌ವೈಗೆ ಧನ್ಯವಾದ ಎಂದು ಶಾಸಕ ತಿಪ್ಪಾರೆಡ್ಡಿ, ಬಸವರಾಜ ಬೊಮ್ಮಾಯಿಗೆ ಶುಭಾಶಯ ತಿಳಿಸಿದ್ದಾರೆ.
ಬೆಂಗಳೂರು: ಬಿ.ಎಸ್. ಯಡಿಯೂರಪ್ಪನವರ ನಂತರ ಯಾರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಾರೆ ಎಂಬ ಪ್ರಶ್ನೆಗೆ ನಿನ್ನೆ ಉತ್ತರ ಸಿಕ್ಕಿದ್ದು, ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರನ್ನೇ (CM Basavaraj Bommai) ಹೈಕಮಾಂಡ್ ಸಿಎಂ ಆಗಿ ಆಯ್ಕೆ ಮಾಡಿದೆ. ಅಚ್ಚರಿಯ ಆಯ್ಕೆಗೆ ಇತರ ಶಾನಸಕರು ಬೆಂಬಲ ವ್ಯಕ್ತಪಡಿಸಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗಲೇ ಶಾಸಕ ತಿಪ್ಪಾರೆಡ್ಡಿ ನನಗೆ ನೂರಕ್ಕೆ ನೂರರಷ್ಟು ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿಗೆ ಎಲ್ಲ ವಿಚಾರಗಳು ಗೊತ್ತಿವೆ. ಒಳ್ಳೆಯ ವ್ಯಕ್ತಿಯನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಇದಕ್ಕಾಗಿ ಹೈಕಮಾಂಡ್ ಹಾಗೂ ಬಿಎಸ್‌ವೈಗೆ ಧನ್ಯವಾದ ಎಂದು ಶಾಸಕ ತಿಪ್ಪಾರೆಡ್ಡಿ, ಬಸವರಾಜ ಬೊಮ್ಮಾಯಿಗೆ ಶುಭಾಶಯ ತಿಳಿಸಿದ್ದಾರೆ.
ಹಿರಿತನ ನೋಡಿ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ನ್ಯಾಯ ಕೊಡಿಸುತ್ತಾರೆ ಎಂಬ ವಿಶ್ವಾಸ ಇದೆ. ಸಚಿವ ಸ್ಥಾನ ಕೊಟ್ಟರೆ ಚೆನ್ನಾಗಿ ಕೆಲಸ ಮಾಡುತ್ತೇನೆ. ವರಿಷ್ಠರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಕಳೆದ ಬಾರಿ ಕೂಡ ಅವಕಾಶ ಸಿಗುತ್ತೆ ಎಂಬ ವಿಶ್ವಾಸ ಇತ್ತು. ಈ ಬಾರಿ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಬೊಮ್ಮಾಯಿ ನನಗೆ ಮೊದಲಿನಿಂದಲೂ ತುಂಬಾ ಪರಿಚಯ. ಅನುಭವಿ ರಾಜಕಾರಣಿ ಎರಡು ವರ್ಷದಲ್ಲಿ ಇನ್ನಷ್ಟು ರಾಜ್ಯ ಅಭಿವೃದ್ಧಿ ಆಗಲಿದೆ ಎಂದು ಶಾಸಕ ತಿಪ್ಪರೆಡ್ಡಿ ತಿಳಿಸಿದ್ದಾರೆ.
ನನಗೆ ಯಾವ ಮಂತ್ರಿಗಿರಿಯೂ ಬೇಡ: ಚ್.ವಿಶ್ವನಾಥ್ ಯಡಿಯೂರಪ್ಪ ರಾಜೀನಾಮೆ ನೀಡಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿರೋದು ಖುಷಿ ತಂದಿದೆ. ರಾಜ್ಯದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ನಿರೀಕ್ಷಿಸಬಹುದು. ಸಂಪುಟ ರಚನೆ ವೇಳೆ ಎಲ್ಲ ಸಮುದಾಯಗಳು ಹಾಗೂ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು. ನನಗೆ ಯಾವ ಮಂತ್ರಿಗಿರಿಯೂ ಬೇಡ. ಬೇರೆಯವರಿಗೆ ಅವಕಾಶ ನೀಡಲಿ. ಹಳಬರು, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಲಿ. ಮೋದಿ ಯಾವ ಫಾರ್ಮುಲಾದಲ್ಲಿ ಸಂಪುಟ ರಚಿಸಿದ್ದರು. ಅದೇ ಫಾರ್ಮುಲಾ ಅನುಸರಿಸಿ ಸಂಪುಟ ರಚನೆ ಮಾಡಲಿ ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Basavaraj Bommai Oath Taking: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ, ದೇವಸ್ಥಾನ ದರ್ಶನ ಬಳಿಕ ಬಿಎಸ್ವೈ ಭೇಟಿ
ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿಗೆ ಉನ್ನತ ಹುದ್ದೆ ಏರುವ ಭವಿಷ್ಯ ನುಡಿದಿದ್ದ ಶ್ರೀ ಗಳು
Published On - 9:59 am, Wed, 28 July 21