ಬಲಿಪಾಡ್ಯಮಿಯಂದು ಮುಜರಾಯಿ ದೇಗುಲಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ ಆದೇಶ
ಅಕ್ಟೋಬರ್ 26 ರಂದು ಬಲಿಪಾಡ್ಯಮಿಯಂದು ಮುಜರಾಯಿ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸುವಂತೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಆದೇಶ ನೀಡಿದ್ದಾರೆ.
ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 26 ರಂದು ಬಲಿಪಾಡ್ಯಮಿಯಂದು ರಾಜ್ಯ ಸಾರ್ಕಾರದ ಅಧೀನದಲ್ಲಿ ಬರುವಂತಹ ಮುಜರಾಯಿ ದೇವಸ್ಥಾನಗಳಲ್ಲಿ ಗೋಪೂಜೆ (Go puja) ನಡೆಸುವಂತೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಆದೇಶ ನೀಡಿದ್ದಾರೆ. ಸಚಿವರ ಸೂಚನೆಯಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಬಲಿಪಾಡ್ಯಮಿಯಂದು ಸಂಜೆ 5.30 ರಿಂದ 6.30 ರವರೆಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗೋಪೂಜೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಗೋವುಗಳ ಮಹತ್ವ ಮತ್ತು ಅವುಗಳ ರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಬೇಕಿದೆ. ಹಾಗಾಗಿ ಬಲಿಪಾಡ್ಯಮಿಯ ಗೋಧೂಳಿ ಲಗ್ನದಲ್ಲಿ ಗೋಪೂಜೆ ನಡೆಸಲು ಸಚಿವೆ ಶಶಿಕಲಾ ಜೊಲ್ಲೆ ಆದೇಶ ನೀಡಿದ್ದಾರೆ.
ಗೋ ಪೂಜೆ ಏಕೆ ಮಾಡಬೇಕು?
ಗೋವನ್ನು ನಾವು ಲಕ್ಷ್ಮಿದೇವಿಗೆ ಹೋಲಿಸುತ್ತೇವೆ. ಮಾತೃಸ್ವರೂಪವೋ ಅವೆಲ್ಲವೂ ನಮಗೆ ಲಕ್ಷ್ಮಿ. ಅದು ಭೂಮಾತೆ ಆಗಿರಬಹುದು, ಕಾಮಧೇನು ಆಗಿರಬಹುದು. ಹಸುವಿಲ್ಲದೆ ಮನುಷ್ಯನಿಗೆ ಜೀವನ ಇಲ್ಲ. ಹಸುವಿನಿಂದ ಸಿಗುವ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ, ಗಂಜಳ, ಸಗಣಿ ಎಲ್ಲವೂ ಉಪಯೋಗಿಸಲಾಗುತ್ತದೆ. ಹೀಗೆ ಎಲ್ಲವನ್ನೂ ಮನುಷ್ಯನಿಗೆ ನೀಡುವ ಮುಗ್ಧವಾದ ಪ್ರಾಣಿ ಗೋವನ್ನು ಲಕ್ಷ್ಮಿಪೂಜೆ ಮಾಡುವ ದಿನ ಗೋಪೂಜೆ. ಅಂದು ಗೋವುಗಳಿಗೆ, ಕರುಗಳಿಗೆ ಆರತಿ ಬೆಳಗಿ, ತಿನಿಸು ಕೊಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:53 pm, Wed, 19 October 22