ಯುಟ್ಯೂಬ್​, ಸುದ್ದಿ ವೆಬ್​ಸೈಟ್​ಗಳಿಗೆ ಸಿಗಲಿದೆ ಸರ್ಕಾರದ ಜಾಹೀರಾತು; ಡಿಜಿಟಲ್​ ಜಾಹೀರಾತು ಮಾರ್ಗಸೂಚಿ ಜಾರಿ ಮಾಡಿದ ಸರ್ಕಾರ

ಡಿಜಿಟಲ್ ಮಾಧ್ಯಮಗಳಲ್ಲಿ ಸರ್ಕಾರದ ಜಾಹೀರಾತು ಪ್ರಕಟಿತವಾದಲ್ಲಿ ಸರ್ಕಾರದ ಜಾಹಿರಾತುಗಳು ಯುವ ಸಮೂಹವನ್ನು ತಲುಪಲು ಸಹಕಾರಿಯಾಗುವುದರಿಂದ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ನ್ನು ಜಾರಿಗೊಳಿಸಿ, ಡಿಜಿಟಲ್ ಜಾಹೀರಾತಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಯುಟ್ಯೂಬ್​, ಸುದ್ದಿ ವೆಬ್​ಸೈಟ್​ಗಳಿಗೆ ಸಿಗಲಿದೆ ಸರ್ಕಾರದ ಜಾಹೀರಾತು; ಡಿಜಿಟಲ್​ ಜಾಹೀರಾತು ಮಾರ್ಗಸೂಚಿ ಜಾರಿ ಮಾಡಿದ ಸರ್ಕಾರ
ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಜಾರಿ ಮಾಡಿದ ಸರ್ಕಾರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 27, 2024 | 10:08 PM

ಬೆಂಗಳೂರು, ಆ.27: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ(Digital media)ಗಳು ಹೆಚ್ಚು ಪ್ರಚಲಿತವಾಗಿದ್ದು, ಅದರಲ್ಲಿ ಸರ್ಕಾರದ ಜಾಹೀರಾತು ಪ್ರಕಟ ಮಾಡುವುದರಿಂದ ಹೆಚ್ಚು ಯುವ ಸಮೂಹವನ್ನು ತಲುಪಲು ಸಹಾಯವಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತದೆ. ಈ ಹಿನ್ನಲೆ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ನ್ನು ಜಾರಿಗೊಳಿಸಿ, ಡಿಜಿಟಲ್ ಜಾಹೀರಾತಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024

ಈ ಹಿನ್ನಲೆ ಡಿಜಿಟಲ್‌ ಜಾಹೀರಾತುಗಳಿಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಿಜಿಟಲ್‌ ಇನಫ್ಲುಯೆನ್ಸರ್‌ಗಳ ಆಯ್ಕೆಗೆ ಮಾನದಂಡ ನಿಗದಿ ಮಾಡಿದ್ದು, ಡಿಜಿಟಲ್ ಜಾಹೀರಾತು ಏಜೆನ್ಸಿಗಳಿಗೂ ಮಾನದಂಡ ಹೇರಲಾಗಿದೆ.

ಇದನ್ನೂ ಓದಿ:ಸೈಬರ್ ವಂಚನೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ವೈಯಕ್ತಿಕ ಮಾಹಿತಿ ಕಾಪಾಡಲು ಈ ಮಾರ್ಗಗಳು ಸಾಕು

ಅರ್ಹ ಡಿಜಿಟಲ್​ ಮಾಧ್ಯಮ ಘಟಕಗಳು

ವಿಡಿಯೋ ಸ್ಕ್ರೀಮಿಂಗ್​ ಪ್ಲಾಟ್​ಫಾರ್ಮ್​ಗಳು: ಗೂಗಲ್​(ಯೂಟ್ಯೂಬ್​), ಮೆಟಾ(ಫೇಸ್​​ಬುಕ್​), ಇನ್​ಸ್ಟಾಗ್ರಾಂ, ವಾಟ್ಸಾಪ್​ ಬಿಸಿನೆಸ್​, ಇತರೆ.

ಸರ್ಚ್​ ಇಂಜಿನ್​ಗಳು: ಗೂಗಲ್​, ಬಿಂಗ್​ ಮತ್ತು ಇತರೆ.

ಸಾಮಾಜಿಕ ಜಾಲತಾಣಗಳು: ಎಕ್ಸ್​(ಟ್ವೀಟರ್​) ಫೇಸ್​ಬುಕ್​, ಇನ್​ಸ್ಟಾಗ್ರಾಂ, ವಾಟ್ಸಾಪ್​, ಟೆಲಿಗ್ರಾಂ, ಲಿಂಕ್​ಡ್​ಇನ್​, ಇತ್ಯಾದಿ.

ಒಟಿಟಿ ಪ್ಲಾಟ್​ಫಾರ್ಮ್​: ನೆಟ್​ಫ್ಲಿಕ್ಸ್​, ಅಮೇಜಾನ್​ ಫ್ರೈಮ್​, ಸನ್​ನೆಕ್ಸ್ಟ್​, ಇತರೆ.

ಫಿನ್​ಟೆಕ್ ಪ್ಲಾಟ್​ಫಾರ್ಮ್​: ಪೇಟಿಎಂ, ಫೋನ್​ಪೇ ಮತ್ತು ಗೂಗಲ್​ಪೇ ಇತರೆ.​

ಹೆಚ್ಚಿನ ಮಾಹಿತಿಗಾಗಿ ಈ ಪಿಡಿಎಫ್​ ಮೇಲೆ ಕ್ಲಿಕ್​ ಮಾಡಿ

Digital Advertising Guidelines – 2024

ಡಿಜಿಟಲ್​ ಜಾಹಿರಾತು ಏಜೆನ್ಸಿಗೆ ಅರ್ಹತೆ

*ಡಿಜಿಟಲ್​ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಅಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಎಜೆನ್ಸಿಯ ಈ ಕೆಳಗಿನ ಮಾನದಂಡಗಳು ಪೂರೈಸಬೇಕು.

*ಭಾರತ ಸರ್ಕಾರದ ರಿಜಿಸ್ಟಾರ್​ ಆಫ್​ ಕಂಪನೀಸ್​ನಲ್ಲಿ ನೋಂದಣಿಯಾದ ಕಾನೂನುಬದ್ದ ಸಂಘಟಿತ ಘಟಕವಾಗಿರಬೇಕು-ಪ್ರೈವೇಟ್​ ಲಿಮಿಟೆಡ್​ ಕಂಪನಿ, ಪಬ್ಲಿಕ್​ ಲಿಮಿಟೆಡ್​ ಕಂಪನಿ, ಲಿಮಿಟೆಡ್​ ಲಯಬಿಲಿಟಿ ಪಾಲುದಾರಿಕೆ.

*ಎಂಪ್ಯಾನೆಲಿಂಗ್​ ಸಮಯದಲ್ಲಿ ಕನಿಷ್ಟ ಎರಡು ವರ್ಷವಾಗಿರಬೇಕು.

*ಮಾನ್ಯವಾದ ಜಿಎಸ್​ಟಿ ನೋಂದಣಿ ಇರಬೇಕು.

*ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಛೇರಿ ಇರಬೇಕು.

*ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ಪ್ರಾಮುಖ್ಯತೆ ಇರಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:32 pm, Tue, 27 August 24

ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ