ಉದ್ಘಾಟನೆ ಕಾಣದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್​ಗಳು; ಬೆಂಗಳೂರಿನ ವಾಹನ ಸವಾರರ ಪಾರ್ಕಿಂಗ್ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ

| Updated By: ಆಯೇಷಾ ಬಾನು

Updated on: May 09, 2024 | 9:17 AM

ಬೆಂಗಳೂರಿನ ಫ್ರೀಡಂ ಪಾರ್ಕ್, ಯಶವಂತಪುರದ ಎಪಿಎಂಸಿ ಯಾರ್ಡ್ ಆವರಣದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಾರ್ಕಿಂಗ್ ಕಾಂಪ್ಲೆಕ್ಸ್​ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳನ್ನು ಉದ್ಘಾಟನೆ ಮಾಡದೆ ಇರುವುದರಿಂದ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.

ಉದ್ಘಾಟನೆ ಕಾಣದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್​ಗಳು; ಬೆಂಗಳೂರಿನ ವಾಹನ ಸವಾರರ ಪಾರ್ಕಿಂಗ್ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ
ಪಾರ್ಕಿಂಗ್ ಕಾಂಪ್ಲೆಕ್ಸ್
Follow us on

ಬೆಂಗಳೂರು, ಮೇ.09: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರ ಗೋಳು ಕೇಳುವವರೇ ಇಲ್ಲ. ಒಂದ್ಕಡೆ ಟ್ರಾಫಿಕ್ ಕಿರಿಕಿರಿ, ಮತ್ತೊಂದ್ಕಡೆ ಪಾರ್ಕಿಂಗ್ ಪ್ಲಾಬಂ (Parking Problem). ಸವಾರರನ್ನು ಒದ್ದಾಡುವಂತೆ ಮಾಡಿದೆ. ಇತ್ತ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಪಾರ್ಕಿಂಗ್ ಕಾಂಪ್ಲೆಕ್ಸ್​ಗಳು (Parking Complex) ಇದ್ದರೂ ಇಲ್ಲದಂತಾಗಿವೆ.

ಫ್ರೀಡಂ ಪಾರ್ಕ್ ಬಳಿ ವಿಶಾಲವಾದ ಹೈ-ಟೆಕ್ ಸೌಲಭ್ಯಗಳಿರುವ ಕಟ್ಟಡವನ್ನು ಪಕ್ಕಾ ಪ್ಲಾನ್ ಮಾಡಿ ಕಾರು, ಬೈಕ್ ಪಾರ್ಕಿಂಗ್ ಮಾಡಲು ಬಿಬಿಎಂಪಿ ನಿರ್ಮಿಸಿದೆ. ಆದರೆ ಕಾಮಗಾರಿ ಮುಗಿದು ಒಂದೂವರೆ ವರ್ಷವಾದ್ರೂ ಈ ಪಾರ್ಕಿಂಗ್ ಕಾಂಪ್ಲೆಕ್ಸ್ ಉದ್ಘಾಟನೆಗೆ ಮುಹೂರ್ತವೇ ಕೂಡಿ ಬಂದಿಲ್ಲ. ಹೀಗಾಗಿ ಜನ ಎಲ್ಲಂದರಲ್ಲಿ ಗಾಡಿ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಇಷ್ಟು ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಿ ಸುಮ್ಮನೆ ಬಿಟ್ಟಿದ್ದಾರೆ. ಇದು ಪಾಳುಬಿದ್ದ ಕಟ್ಟಡವಾಗ್ತಿದೆ ಕೂಡಲೇ ಇಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಸಾಮಾಜಿಕ ಹೋರಾಟಗಾರ ರವಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಾಲ್ಕು ವರ್ಷಗಳ ಪದವಿ ಆದೇಶ ಹಿಂಪಡೆದ ಕರ್ನಾಟಕ ಸರ್ಕಾರ: ಕಾರಣವೇನು?

ಇನ್ನೂ ಯಶವಂತಪುರದ ಎಪಿಎಂಸಿ ಯಾರ್ಡ್ ಆವರಣದಲ್ಲಿರುವ 80 ಕೋಟಿ ಮೌಲ್ಯದ 7 ಅಂತಸ್ತಿನ ಪಾರ್ಕಿಂಗ್ ಕಾಂಪ್ಲೆಕ್ಸ್ ಇದ್ದು ಇಲ್ಲಂದಾಗಿದೆ‌. ಈ ಪಾರ್ಕಿಂಗ್ ಕಾಂಪ್ಲೆಕ್ಸ್​ಗಳ ಸುತ್ತಮುತ್ತ ಪೊಲೀಸರಿಗೆ ಬೆಳಿಗ್ಗೆ ಮತ್ತು ಸಂಜೆ ವಾಹನ ನಿಯಂತ್ರಿಸುವುದೇ ಸವಾಲಿನ ಕೆಲಸವಾಗಿದೆ. ಅಲ್ಲದೆ ಪಾರ್ಕಿಂಗ್​ಗೆ ಸರಿಯಾದ ಜಾಗ ಸಿಗದೆ ಜನರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ. ವಾಹನ ಸವಾರರು ಇದು ಯಾವಾಗ ಓಪನ್ ಆಗುತ್ತೋ ಗೊತ್ತಿಲ್ಲ ತುಂಬಾ ವರ್ಷಗಳಿಂದ ಇದು ಕ್ಲೋಸ್ ಆಗಿಯೇ ಇದೆ. ಇದರ ಅವಶ್ಯಕತೆ ಇರಲಿಲ್ಲ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸುಮ್ಮನೆ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಸರ್ಕಾರ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಅದನ್ನು ಹಾಗೆ ಬಿಟ್ಟರೆ ಹೇಗೆ ಹೇಳಿ. ಇನ್ನಾದ್ರೂ ಎಚ್ಚೆತ್ತು ಶೀಘ್ರದಲ್ಲಿ ಈ ಬಹು ಮಹಡಿ ಕಟ್ಟಡಗಳ ಲೋಕಾರ್ಪಣೆಗೆ ಮುಂದಾಗತ್ತಾರಾ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ