ಬೆಂಗಳೂರು: ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹ ಜ್ಯೋತಿ ಯೋಜನೆ (Gruha Jyothi Scheme) ಪ್ರಯೋಜನ ಪಡೆಯಬಹುದಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 30ರೊಳಗೆ ವಿದ್ಯುತ್ ಬಾಕಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಜುಲೈ 25ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಆಗಸ್ಟ್ ಬಿಲ್ನಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಜುಲೈ 25ರಿಂದ ಆಗಸ್ಟ್ 25ರೊಳಗೆ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಸೆಪ್ಟೆಂಬರ್ ಬಿಲ್ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ. ಯೋಜನೆಗೆ ಅರ್ಹರಾಗಲು ಸರಾಸರಿ 200 ಯೂನಿಟ್ ಮೀರಬಾರದು ಎಂದು
ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Gruha Jyothi Scheme: ಗೃಹ ಜ್ಯೋತಿ ಯೋಜನೆಗೆ ಹರಿದು ಬಂತು 85 ಲಕ್ಷಕ್ಕೂ ಹೆಚ್ಚು ಅರ್ಜಿಗಳು!
ಹಿಂಬಾಕಿ ಇದ್ದರೂ ಗ್ರಾಹಕರಿಗೆ ದೊರಕಲಿದೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ!
ಇಂದೇ ನೋಂದಾಯಿಸಿಕೊಳ್ಳಿ: https://t.co/bsGvzlXT4x#ಗೃಹಜ್ಯೋತಿ #GruhaJyothiScheme #GruhaJyothi #croresofconsumers #consumers #registration @EnergyDeptGoK @CMofKarnataka @siddaramaiah @thekjgeorge @mdbescom @BescomHelpline pic.twitter.com/cq9eJgZdyo
— Namma BESCOM (ನಮ್ಮ ಬೆಸ್ಕಾಂ) (@NammaBESCOM) July 2, 2023
ಪ್ರಕಟಣೆಯಲ್ಲಿ ಏನಿದೆ?
ಗೃಹಜ್ಯೋತಿ ಯೋಜನೆಗೆ ಇಂದು 1,01,915 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಈವರೆಗೆ 92,50,157 ಗ್ರಾಹಕರು ನೋಂದಣಿಸಿಕೊಂಡಿದ್ದಾರೆ. ಜೂ.18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 pm, Sun, 2 July 23