ಕರ್ನಾಟಕದ ಜಿಮ್ಗಳಿಗೆ ಮಾರ್ಗಸೂಚಿ ನೀಡಲಾಗುವುದು: ಸಚಿವ ಕೆ ಸುಧಾಕರ್ ಹೇಳಿಕೆ
Gym Guidelines: ಜಿಮ್ ಮಾಡುವುದು ಸರಿ, ತಪ್ಪು ಎಂಬ ಆತಂಕಗಳು ಬೇಡ. ಹೃದಯರೋಗ ತಜ್ಞರಿಂದ ಅಭಿಪ್ರಾಯ ಪಡೆದು ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುವುದು. ಸಂಪೂರ್ಣ ಮಾಹಿತಿಯೊಂದಿಗೆ ಗೈಡ್ಲೈನ್ಸ್ ಸಿದ್ಧಪಡಿಸ್ತೇವೆ ಎಂದು ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಜಿಮ್ ಮಾಡುವ ಯುವಕರಿಗೆ ಕರ್ನಾಟಕ ಆರೋಗ್ಯ ಸಚಿವ ಸುಧಾಕರ್ ಕಿವಿಮಾತು ಹೇಳಿದ್ದಾರೆ. ಕರ್ನಾಟಕ ರಾಜ್ಯದ ಜಿಮ್ಗಳಿಗೆ ಮಾರ್ಗಸೂಚಿಯನ್ನ ನೀಡಲಾಗುತ್ತದೆ. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಒಂದೆರಡು ಘಟನೆಗಳಿಂದ ಆತಂಕಕ್ಕೊಳಗಾಗುವುದು ಬೇಡ. ಜಿಮ್ ಮಾಡುವುದು ಸರಿ, ತಪ್ಪು ಎಂಬ ಆತಂಕಗಳು ಬೇಡ. ಹೃದಯರೋಗ ತಜ್ಞರಿಂದ ಅಭಿಪ್ರಾಯ ಪಡೆದು ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುವುದು. ಸಂಪೂರ್ಣ ಮಾಹಿತಿಯೊಂದಿಗೆ ಗೈಡ್ಲೈನ್ಸ್ ಸಿದ್ಧಪಡಿಸ್ತೇವೆ ಎಂದು ಸುಧಾಕರ್ ತಿಳಿಸಿದ್ದಾರೆ.
ಪರಿಣಿತ ತರಬೇತಿದಾರರು, ಸಾಮಗ್ರಿಗಳ ಬಗ್ಗೆ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುವುದು. ದೇಶ ವಿದೇಶದ ಖ್ಯಾತ ವೈದ್ಯರ ಬಳಿ ಮಾಹಿತಿ ಪಡೆಯುತ್ತೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಜಿಮ್ ಮಾಡುವ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜಿಮ್ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಪುನೀತ್ ರಾಜ್ಕುಮಾರ್ ನನ್ನ ಜಿಮ್ ಮೇಟ್ ಆಗಿದ್ದರು: ಸುಧಾಕರ್ ಪುನೀತ್ ರಾಜ್ಕುಮಾರ್ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ರಾಜ್ಕುಮಾರ್ ನನ್ನ ಜಿಮ್ ಮೇಟ್ ಆಗಿದ್ದರು. ಪುನೀತ್ ಅವರ ವರ್ಕೌಟ್ ನೋಡ್ತಿದ್ರೆ ಆಶ್ಚರ್ಯವಾಗ್ತಿತ್ತು. ನಟ ಪುನೀತ್ ಅವರ ಜೀವನ ಶೈಲಿ ಎಲ್ಲವೂ ಚೆನ್ನಾಗಿತ್ತು. ಪುನೀತ್ ಅವರಿಗೆ ಯಾವುದೆ ದುರಭ್ಯಾಸಗಳು ಇರಲಿಲ್ಲ. ಕುಟಂಬಸ್ಥರಿಗೆ ಆ ಭಗವಂತನೇ ಆತ್ಮಸ್ಥೈರ್ಯ ನೀಡಬೇಕು ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ‘ಪುನೀತ್ ಜಿಮ್ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ
ಇದನ್ನೂ ಓದಿ: ಜಿಮ್ನಲ್ಲಿ ಪುನೀತ್ ರಾಜ್ಕುಮಾರ್ ವರ್ಕೌಟ್: ಹೇಗಿರುತ್ತಿತ್ತು ಗೊತ್ತಾ ಅಪ್ಪು ಕಸರತ್ತು? ಇಲ್ಲಿದೆ ವಿಡಿಯೋ