ಬೆಂಗಳೂರು: ಕರ್ತವ್ಯಲೋಪ; ಹಲಸೂರು ಠಾಣೆ ಇನ್ಸ್ಪೆಕ್ಟರ್ ಅಮಾನತು
ಈ ಹಿಂದೆ ಡಿ.ಜೆ.ಹಳ್ಳಿ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಗಾಂಜಾ ಸೀಜ್ ಮಾಡಿದ್ದ ವಾಹನವನ್ನು ಅಕ್ರಮವಾಗಿ ಬಿಟ್ಟಿದ್ದು, ಈ ಮೂಲಕ ಗಾಂಜಾ ಜಪ್ತಿ ಕೇಸ್‌ನಲ್ಲಿ ಆರೋಪಿಗಳ ಜೊತೆ ಶಾಮೀಲಾಗಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಇನ್ಸ್ಪೆಕ್ಟರ್ ಪ್ರಕಾಶ್ ವಿರುದ್ಧ ದೂರು ದಾಖಲಾಗಿತ್ತು.

ಬೆಂಗಳೂರು, ಅ.17: ಕರ್ತವ್ಯಲೋಪ ಹಿನ್ನೆಲೆ ಹಲಸೂರು ಪೊಲೀಸ್ ಠಾಣೆ(Halasuru police Station) ಇನ್ಸ್ಪೆಕ್ಟರ್ ಪ್ರಕಾಶ್ ಎಂಬುವವರನ್ನು ಅಮಾನತು ಮಾಡಲಾಗಿದೆ. ಈ ಹಿಂದೆ ಡಿ.ಜೆ.ಹಳ್ಳಿ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಗಾಂಜಾ ಸೀಜ್ ಮಾಡಿದ್ದ ವಾಹನವನ್ನು ಅಕ್ರಮವಾಗಿ ಬಿಟ್ಟಿದ್ದು, ಈ ಮೂಲಕ ಗಾಂಜಾ ಜಪ್ತಿ ಕೇಸ್‌ನಲ್ಲಿ ಆರೋಪಿಗಳ ಜೊತೆ ಶಾಮೀಲಾಗಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಇನ್ಸ್ಪೆಕ್ಟರ್ ಪ್ರಕಾಶ್ ವಿರುದ್ಧ ದೂರು ದಾಖಲಾಗಿತ್ತು. ಜೊತೆಗೆ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ತನಿಖೆಗೆ ಆದೇಶಿಸಿದ್ದರು. ಇದೀಗ ಆಂತರಿಕ ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತು ಆದ ಹಿನ್ನೆಲೆ ಅಮಾನತು ಮಾಡಲಾಗಿದೆ.
ಇನ್ನು ನಿನ್ನೆಯಷ್ಟೇ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿರುವ ಶಕ್ತಿ ಯೋಜನೆಯ ಉಚಿತ ಟಿಕೆಟ್ಗಳನ್ನು ಬಿಎಂಟಿಸಿ ಬಸ್ ಕಂಡೆಕ್ಟರ್ ಹರಿದು ಬಿಸಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ತನಿಖೆ ನಡೆಸಿದ ಅಧಿಕಾರಿಗಳು ಕಂಡಕ್ಟರ್ನನ್ನು ಅಮಾನತು ಮಾಡಿದ್ದರು. ಹೌದು, ಪ್ರಕಾಶ್ ಅರ್ಜುನ್ ಕೊಟ್ಯಾಳ ಎಂಬುವವರು ಮೆಜೆಸ್ಟಿಕ್ನಿಂದ ತಾವರಕೆರೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಏರ್ ಇಂಡಿಯಾ ವಿಮಾನ ಸುರಕ್ಷತಾ ಮುಖ್ಯಸ್ಥರ ವಿರುದ್ಧ ಡಿಜಿಸಿಎ ಕ್ರಮ, ಒಂದು ತಿಂಗಳ ಕಾಲ ಅಮಾನತು
ಸಿಸಿಬಿ ಪೊಲೀಸರಿಂದ ವಿದೇಶಿ ಸಿಗರೇಟ್ ಸಂಗ್ರಹಿಸಿಟ್ಟಿದ್ದ ಗೋಡೌನ್ ಮೇಲೆ ದಾಳಿ
ಬೆಂಗಳೂರು: ವಿದೇಶಿ ಸಿಗರೇಟ್ಗಳನ್ನು ಮಾರಾಟ ಮಾಡಲು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಸುಮಾರು 22 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ ಸಹಿತ ಅದನ್ನು ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸಿಟಿ ಮಾರ್ಕೆಟ್ ಬಳಿಯ ಗೋಡೌನ್ನಲ್ಲಿ ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು. ಇನ್ನು ಇದನ್ನು ದೆಹಲಿಯಿಂದ ಕೊರಿಯರ್ ಮೂಲಕ ತರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ