ಬೆಂಗಳೂರು: ದೈವಾನುಗ್ರಹದಲ್ಲಿ ಎರೆಡು ಬಾರಿ ಮುಖ್ಯಮಂತ್ರಿಯಾದೆ. ಆಗ ದಿನಕ್ಕೆ 5-6 ಸಾವಿರ ಜನರಿಗೆ ಪರಿಹಾರ ನೀಡುತ್ತಿದ್ದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ನಡೆದ ಜೆಡಿಎಸ್(JDS) ಜನತಾಮಿತ್ರ ಅಭಿಯಾನ ಕಾರ್ಯಕ್ರಮದಲ್ಲಿ ಹೇಳಿದ್ರು. ಇದೇ ವೇಳೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ(Ex Minister Katta Subramanya) ಲಲಿತಾ ಸಹಸ್ರನಾಮ ಕಾರ್ಯಕ್ರಮದ ವಿರುದ್ಧ ಟೀಕೆ ಮಾಡಿದ್ದಾರೆ. ಸಭೆಯಲ್ಲಿ ಪರಿಷತ್ತ್ ಸದಸ್ಯ ಟಿ.ಎ. ಶರವಣ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಭಾಗಿಯಾಗಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಸಾವಿರ ಕೆರೆಗಳನ್ನು ಕಟ್ಟಿದ್ದರು. ಆದ್ರೆ ಈಗ ಬೆಂಗಳೂರಿನ ಕೆರೆಗಳ ಸ್ಥಿತಿ ಹೇಗಾಗಿದೆ ಎಂಬುದು ಗೊತ್ತಿದೆ. ಅಭಿವೃದ್ಧಿ ಹೆಸರಲ್ಲಿ ಶ್ರೀಮಂತರು ಕೆರೆಗಳನ್ನು ಮುಚ್ಚಿ ಮನೆ ಕಟ್ಟಿದ್ದಾರೆ. ಬೆಂಗಳೂರು ಊಹೆಗೂ ಮೀರಿ ಬೆಳೆದಿದೆ. ಹೆಚ್.ಡಿ.ದೇವೇಗೌಡರು 24 ವರ್ಷಕ್ಕೆ ರಾಜಕೀಯಕ್ಕೆ ಬಂದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾವೇರಿ ನೀರು ಪೂರೈಸಿದರು. ಬೆಂಗಳೂರಿನಲ್ಲಿ ಬಡವರು ಸ್ವಂತ ನಿವೇಶನ ಹೊಂದಲು ಆಗುತ್ತಿಲ್ಲ. ಸರ್ಕಾರ ಇರುವುದು ಶ್ರೀಮಂತರಿಗೋ, ಬಡವರಿಗೋ ಗೊತ್ತಾಗ್ತಿಲ್ಲ. ಸರ್ಕಾರ ಸರಿಯಾಗಿ ಅತಿಕ್ರಮ ತೆರವುಗೊಳಿಸಿದ್ರೆ ಬೆಂಗಳೂರಿನಲ್ಲಿ 30 ಎಕರೆ ಜಮೀನು ಸರ್ಕಾರದ ವ್ಯಾಪ್ತಿಗೆ ಬರುತ್ತೆ. ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ನಡೆಯುತ್ತಿದೆ ಅಂತ ಹೇಳಿದ್ರು ನರೇಂದ್ರ ಮೋದಿ ಸುಮ್ಮನಿದ್ದಾರೆ. ನನಗೆ ಮತ್ತೊಮ್ಮೆ ಅವಕಾಶ ನೀಡಿದರೆ ದ್ವಿತೀಯ ಪಿಯುಸಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಜಾರಿಮಾಡುವೆ ಎಂದು ಜೆಡಿಎಸ್ ಜನತಾಮಿತ್ರ ಅಭಿಯಾನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗವಾಗಿರುತ್ತದೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ
ಇನ್ನು ಇದೇ ವೇಳೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ಲಲಿತಾ ಸಹಸ್ರನಾಮ ಕಾರ್ಯಕ್ರಮದ ವಿರುದ್ಧ ಹೆಚ್ಡಿಕೆ ಟೀಕೆ ಮಾಡಿದ್ದಾರೆ. ಲಲಿತಾ ಸಹಸ್ರನಾಮ ಮಾಡುದ್ರೆ ನಿಮ್ಮ ಬದುಕು ನಡೆಯುತ್ತಾ? ಇವರೆಲ್ಲ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ನಾನು ಪ್ರಾರಂಭ ಮಾಡಿದ ಬಡವರ ಬಂಧು ಕಾರ್ಯಕ್ರಮವನ್ನ ಬಿಜೆಪಿಯವರು ನಿಲ್ಲಿಸಿಬಿಟ್ರು. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನ ಲೂಟಿ ಮಾಡಿಲ್ಲ. ನಾನು ನರೇಂದ್ರ ಮೋದಿಯವರಂತೆ ಭಾಷಣ ಮಾಡಲ್ಲ. ಸಾರಾಯಿ ನಿಷೇಧಿಸಿದ್ದೆ. ಲಾಟರಿ ನಿಲ್ಲಿಸಿದ್ದೆ. ಆದ್ರೆ ಈಗ ಯುವಕರು ಬೆಟ್ಟಿಂಗ್ ಹಿಂದೆ ಬಿದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.