ಜೆಡಿಎಸ್​ನಿಂದ ಮೂಲ ಪಕ್ಷಕ್ಕೆ ಸೇರ್ಪಡೆಯಾದ ಹೆಚ್​​ ಆರ್​ ಶ್ರೀನಾಥ್​; ಪಕ್ಷಕ್ಕೆ ಬಲ ಬಂದಂತಾಗಿದೆ ಎಂದ ಸಿದ್ದರಾಮಯ್ಯ

ವಿಧಾನಪರಿಷತ್​ನ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಜೆಡಿಎಸ್​ ತೊರೆದು, ನೂರಾರು ಬೆಂಬಲಿಗರ ಜೊತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್​ನಿಂದ ಮೂಲ ಪಕ್ಷಕ್ಕೆ ಸೇರ್ಪಡೆಯಾದ ಹೆಚ್​​ ಆರ್​ ಶ್ರೀನಾಥ್​;  ಪಕ್ಷಕ್ಕೆ ಬಲ ಬಂದಂತಾಗಿದೆ ಎಂದ ಸಿದ್ದರಾಮಯ್ಯ
ಹೆಚ್​​. ಆರ್​ ಶ್ರೀನಾಥ
TV9kannada Web Team

| Edited By: Vivek Biradar

Jul 03, 2022 | 6:18 PM

ಬೆಂಗಳೂರು: ವಿಧಾನಪರಿಷತ್​ನ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ (HR Shrinath) ಜೆಡಿಎಸ್ (JDS)​ ತೊರೆದು, ನೂರಾರು ಬೆಂಬಲಿಗರ ಜೊತೆ ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕಾಂಗ್ರೆಸ್​ಗೆ (Congress) ಸೇರ್ಪಡೆಯಾಗಿದ್ದಾರೆ. ಹಾಗೇ ಕೊಪ್ಪಳ ಜಿಲ್ಲೆಯ ಜೆಡಿಎಸ್ ಮುಖಂಡರು ಕೂಡ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದು, ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್, ಈಶ್ವರ ಖಂಡ್ರೆ, ಇಕ್ಬಾಲ್​ ಅನ್ಸಾರಿ ಉಪಸ್ಥಿತರಿದ್ದರು.

ಇದನ್ನು ಓದಿ: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮತ್ತೆ 30ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ

ಪಕ್ಷ ಸೇರ್ಪಡೆ ನಂತರ ಮಾತನಾಡಿದ ಹೆಚ್.ಆರ್.ಶ್ರೀನಾಥ್  3 ವರ್ಷ ದೂರ ಇದ್ದೆ, ಈಗ ಮತ್ತೆ ಮಾತೃಪಕ್ಷಕ್ಕೆ ಬಂದಿದ್ದೇನೆ. ನಮ್ಮ ತಂದೆ ರಾಮುಲು ಇಂದಿರಾ ಗಾಂಧಿಯವರ ಅನುಯಾಯಿ. ನಮ್ಮ ರಕ್ತದಲ್ಲೇ ಕಾಂಗ್ರೆಸ್‌ ಇದೆ. ಬಿಜೆಪಿಯಿಂದ ಆಫರ್ ಬಂದಿತ್ತು, ಅಮಿತ್ ಶಾ ಕರೆ ಮಾಡಿದ್ದರು. ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟವನು ಹೀಗಾಗಿ ಹೋಗಿಲ್ಲ. ಕೊಪ್ಪಳದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನ ನಡೆಸುತ್ತಿದ್ದಾರೆ. ಅದಕ್ಕೆ ನಾವು ಗಂಗಾವತಿಯಲ್ಲಿ ಅವಕಾಶ ನೀಡುವುದಿಲ್ಲ. ಎಲ್ಲ ಮಸೀದಿಯಲ್ಲೂ ಶಿವ ಲಿಂಗ ಹುಡುಕಲು ಹೊರಟಿದ್ದಾರೆ. ಅಂಜನಾದ್ರಿ ಬೆಟ್ಟ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಹೇಳಿದರು.

ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಶ್ರೀನಾಥ್​ ಕಾಂಗ್ರೆಸ್​ ಸೇರಿದ್ದರಿಂದ ಪಕ್ಷಕ್ಕೆ ಬಲ ಬಂದಂತಾಗಿದೆ. ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲುತ್ತಾರೆ. ಇಕ್ಬಾಲ್ ಅನ್ಸಾರಿ ಗೆಲ್ಲುತ್ತಾರೆ. ಶಿವರಾಜ ತಂಗಡಗಿ ಕೈಗೆ ಬಲಬಂದಂತಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು  ಕೆಪಿಸಿಸಿ ಕಚೇರಿಯಲ್ಲಿ ಹೇಳಿದ್ದಾರೆ.

ಇದನ್ನು ಓದಿ: ನನ್ನನ್ನು ಬೆಂಬಲಿಸುವಂತೆ ಯಾವುದೇ ಶಾಸಕರಿಗೆ ಬಲವಂತ ಮಾಡಿಲ್ಲ: ಏಕನಾಥ್ ಶಿಂಧೆ

ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ನಮ್ಮ ಸರ್ವೆ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಪಕ್ಷ  5ಕ್ಕೆ 5 ಸ್ಥಾನ ಗೆಲ್ಲಲಿದೆ. ಅದನ್ನ ನೀವು ನಿಜವಾಗಿಸಬೇಕು, ಆಮೇಲೆ ಅಧಿಕಾರ ಬರುತ್ತದೆ. ಕೊಪ್ಪಳ ಜಿಲ್ಲೆಗೆ ಇಂದು ಶ್ರೇಷ್ಠವಾದ ದಿನವಾಗಿದೆ. ಇಂದಿರಾಗಾಂಧಿ ಕಾಲದಿಂದ ಶ್ರೀನಾಥ್ ಪಕ್ಷದ ಕಾರ್ಯಕರ್ತರು. ಶ್ರೀನಾಥ್ ಕುಟುಂಬಸ್ಥರು ಇಂದಿರಾಗಾಂಧಿ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದರು. ಕಾರಣಾಂತರಗಳಿಂದ ಹೆಚ್.ಆರ್.ಶ್ರೀನಾಥ್ ಪಕ್ಷ ತೊರೆದಿದ್ದರು. 1 ತಿಂಗಳ ಹಿಂದೆ ಮನೆಗೆ ಹೋಗಿ ನಾನೇ ಕಾಂಗ್ರೆಸ್​ಗೆ ಆಹ್ವಾನಿಸಿದ್ದೆ. ಇಂದು ಹೆಚ್.ಆರ್.ಶ್ರೀನಾಥ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು. 

ರಾಮುಲು ಫ್ಯಾಮಿಲಿ, ಅನ್ಸಾರಿ ಫ್ಯಾಮಿಲಿ ಹಿಂದಿನಿಂದಲೂ ಆತ್ಮೀಯರು. ಕಾರಣಾಂತರಗಳಿಂದ ನಮ್ಮ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಮೂಡಿತ್ತು. ಹಿಂದಿನದ್ದೆಲ್ಲವನ್ನೂ ಮರೆತು ಶ್ರೀನಾಥ್, ನಾನು ಒಂದಾಗಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನೀಡಿದ್ದಾರೆ. ನಾಯಕರು ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada