ರಾಜ್ಯದಿಂದ ಸ್ಯಾಂಟ್ರೊ ರವಿ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ: ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Jan 14, 2023 | 8:03 AM

ಸ್ಯಾಂಟ್ರೊ ರವಿ ರಾಜ್ಯ ಬಿಟ್ಟು ಹೋಗೋವರೆಗೆ ಮೈಸೂರು ಪೊಲೀಸರು ಏನು ಮಾಡುತ್ತಿದ್ದರು. ಪೊಲೀಸ್ ಇಲಾಖೆ ಬದುಕಿದ್ಯಾ? ಯಾವಾಗಲೋ ಸಾಯಿಸಿದ್ದಾರೆ ಎಂದು ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದಿಂದ ಸ್ಯಾಂಟ್ರೊ ರವಿ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ: ಕುಮಾರಸ್ವಾಮಿ
ಸ್ಯಾಟ್ರೋ ರವಿ, ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ಪೊಲೀಸ್​ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ತೆಲೆನೋವಾಗಿದ್ದ ಕೆ.ಎಸ್.ಮಂಜುನಾಥ್ ಅಲಿಯಾಸ್​ ಸ್ಯಾಂಟ್ರೋ ರವಿಯನ್ನು (Santro Ravi) ಮೈಸೂರು ಪೊಲೀಸರು ನಿನ್ನೆ (ಜ.13) ರಂದು ಗುಜರಾತ್​​ನಲ್ಲಿ (Gujarat) ಬಂಧಿಸಿದ್ದರು. ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumarswamy) ಮಾತನಾಡಿ ಸ್ಯಾಂಟ್ರೊ ರವಿ ರಾಜ್ಯದಿಂದ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ. ರಾಜ್ಯ ಬಿಟ್ಟು ಹೋಗೋವರೆಗೆ ಏನು ಮಾಡುತ್ತಿದ್ದರು? ಪೊಲೀಸ್ ಇಲಾಖೆ ಬದುಕಿದ್ಯಾ? ಯಾವಾಗಲೋ ಸಾಯಿಸಿದ್ದಾರೆ. ಟಾಪ್ ಅಧಿಕಾರಿಗಳನ್ನು ವರ್ಗಾವಣೆ ಮಾಡೋ ಅಧಿಕಾರವನ್ನೇ ಅವನಿಗೆ ಕೊಟ್ಟಿದ್ದಾರೆ.

ಸ್ಯಾಂಟ್ರೋ ರವಿಯನ್ನು ಗುಜರಾತ್​​ನಲ್ಲಿ 2-3 ದಿನದ ಹಿಂದೆಯೇ ಬಂಧನ

ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು (ಜ.14) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸ್ಯಾಂಟ್ರೋ ರವಿಯನ್ನು ಗುಜರಾತ್​​ನಲ್ಲಿ 2-3 ದಿನದ ಹಿಂದೆಯೇ ಬಂಧಿಸಿದ್ದಾರೆ. ಈಗ ಏನೇನೆಲ್ಲ ಸಾಕ್ಷ್ಯ ಇಟ್ಟುಕೊಂಡಿದ್ದ ಅದನ್ನೆಲ್ಲ ಕಿತ್ತುಕೊಂಡು ಕರೆದುಕೊಂಡು ಬಂದಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಇವನದ್ದೇ ನೇರ ಪಾತ್ರ ಇದೆ. ಯಾವ ಅಧಿಕಾರಿಗಳು ಇವನ ಬಗ್ಗೆ ತನಿಖೆ ಮಾಡುತ್ತಾರೆ. ಇವರು ಬಂಧಿಸಿ ಕರೆತಂದಿರೋದು ಮೈಸೂರಿನಲ್ಲಿ ಮಹಿಳೆ ದಾಖಲಿಸಿದ ಪ್ರಕರಣದ ಆಧಾರದ ಮೇಲೆ. ಉಳಿದ ಪ್ರಕರಣಗಳನ್ನು ಯಾವ ರೀತಿ ತನಿಖೆ ಮಾಡುತ್ತಾರೆ? ಬಿಜೆಪಿಯವರು ದೇಶದಲ್ಲಿ ಏನ್​ ಬೇಕಿದ್ದರು ಮಾಡುತ್ತಾರೆ.

ಇದನ್ನೂ ಓದಿ: ವೈಟ್‌ ಕಾಲರ್ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್ ಕುಮಾರ್​ ಹೇಳಿದ್ದಿಷ್ಟು

ನಮ್ಮ ಗೃಹ ಸಚಿವರು ಗುಜರಾತ್​​ನಲ್ಲಿದ್ದಾರೆ. ಸ್ಯಾಂಟ್ರೊ ರವಿ ಕೂಡ ಅಲ್ಲೇ ಇದ್ದ. ಇಲ್ಲಿಂದ ಅವರು ಅಲ್ಲಿ ಯಾವಾಗ ಹೋದರು..? ಗೃಹ ಸಚಿವರು ಗುಜರಾತ್​ಗೆ ಯಾವಾಗ ಹೋದರು ಅನ್ನೋದೆ ಯಕ್ಷಪ್ರಶ್ನೆ? ಗುಜರಾತ್ ನಲ್ಲಿಯೂ ಬಿಜೆಪಿ ಸರ್ಕಾರ ಇದೆ. ಅವರನ್ನ ಬಂಧಿಸಿ ಕರೆತರುತಂದಿರೋದು ಈ ಪ್ರಕರಣವನ್ನು ಮುಚ್ಚಿಹಾಕಲು ಎಂದು ಹೇಳಿದರು.

ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಕೊನೆಗೂ ಬಂಧನ, ಗುಜರಾತ್​ನಲ್ಲಿ ಪೊಲೀಸ್ ಬಲೆಗೆ

ಸ್ಯಾಂಟ್ರೋ ರವಿಗೆ ರಾಜಾತಿಥ್ಯ

ಗುಜರಾತ್​ನಿಂದ ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ಣುತಪ್ಪಿಸಿ ರಾಜಾತಿಥ್ಯ ಕೊಟ್ಟು ಪೊಲೀಸರು ಕರೆದೊಯ್ದಿದ್ದಾರೆ. ರವಿಗೆ ಯಾವ ರೀತಿ ರಾಜಾತಿಥ್ಯ ನೀಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಏರ್​​ಪೋರ್ಟ್​ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ವಿಐಪಿ ಗೇಟ್​​​ನಲ್ಲಿ ಸ್ಯಾಂಟ್ರೋ ರವಿಗೆ ಯಾಕೆ ಬಿಡುತ್ತಾರೆ? ಏರ್​​ಪೋರ್ಟ್​ ವಿಐಪಿ ಗೇಟ್​​​ ಇರೋದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:03 am, Sat, 14 January 23