ಬೆಂಗಳೂರಿಗೆ ಜೆಎನ್.1 ನ ಆತಂಕ; 45 ಸ್ಯಾಂಪಲ್ಗಳನ್ನು ಜೆನೆಮಿಕ್ ಸೀಕ್ವೆನ್ಸ್ಗೆ ಕಳಿಸಿದ ಆರೋಗ್ಯ ಇಲಾಖೆ
ಹೊಸತಳಿ ಜೆಎನ್.1ಗೆ ಬೆಂಗಳೂರೇ ಫಸ್ಟ್ ಟಾರ್ಗೆಟ್. ರಾಜ್ಯದಲ್ಲಿ ದಾಖಲಾಗುವ ಒಟ್ಟಾರೆ ಕೇಸ್ಗಳಲ್ಲಿ ಶೇ 90 ರಷ್ಟು ಬೆಂಗಳೂರಿನಲ್ಲಿಯೇ ಪತ್ತೆಯಾಗುತ್ತೆ. ರಾಜ್ಯದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 24 ಕೇಸ್ ದಾಖಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ 23 ಪಾಸಿಟಿವ್ ಕೇಸ್ಗಳಿವೆ.
ಬೆಂಗಳೂರು, ಡಿ.22: ದೇಶದಲ್ಲಿ ಕೊರೊನಾದ ಉಪತಳಿ ಜೆಎನ್.1 ನ (JN1 Variant) ಆತಂಕ ಹೆಚ್ಚಾಗಿದ್ದು, ನೆರೆಯ ರಾಜ್ಯಗಳಾದ ಗೋವಾ, ಕೇರಳ, ಮಹಾರಾಷ್ಟ್ರದಲ್ಲಿ ಕೇಸ್‌ಗಳ ಸಂಖ್ಯೆ ಅಧಿಕಗೊಂಡಿದೆ. ಹೊಸ ತಳಿಯ ಆತಂಕ ರಾಜ್ಯಕ್ಕೂ ಕೂಡಾ ಇದ್ದು, ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಬಿಬಿಎಂಪಿ (BBMP) ಕೂಡ ವೈರಸ್ ತಡೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಇಡೀ ರಾಜ್ಯಕ್ಕೆ ಹೋಲಿಸಿದರೆ ಕೋವಿಡ್ (Covid 19) ಹೆಚ್ಚು ವೇಗವಾಗಿ ಹರಡುವುದು ಬೆಂಗಳೂರಿನಲ್ಲಿ. ಹೊಸತಳಿ ಜೆಎನ್.1ಗೆ ಬೆಂಗಳೂರೇ ಫಸ್ಟ್ ಟಾರ್ಗೆಟ್. ರಾಜ್ಯದಲ್ಲಿ ದಾಖಲಾಗುವ ಒಟ್ಟಾರೆ ಕೇಸ್ಗಳಲ್ಲಿ ಶೇ 90 ರಷ್ಟು ಬೆಂಗಳೂರಿನಲ್ಲಿಯೇ ಪತ್ತೆಯಾಗುತ್ತೆ. ಹೀಗಾಗಿ ಬೆಂಗಳೂರಿನ ಮೇಲೆ ಆರೋಗ್ಯ ಇಲಾಖೆ ಹಚ್ಚಿನ ನಿಗಾ ವಹಿಸಿದೆ.
ರಾಜ್ಯದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 24 ಕೇಸ್ ದಾಖಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ 23 ಪಾಸಿಟಿವ್ ಕೇಸ್ಗಳಿವೆ. ಬೆಂಗಳೂರಿನಲ್ಲೇ ಒಟ್ಟು 93 ಸಕ್ರಿಯ ಕೊವಿಡ್ ಪ್ರಕರಣಗಳಿವೆ. 93 ಪಾಸಿಟಿವ್ ಕೇಸ್ನಲ್ಲಿ 45 ಸ್ಯಾಂಪಲ್ ಅನ್ನು ಆರೋಗ್ಯ ಇಲಾಖೆ ಜೆನೆಮಿಕ್ ಸೀಕ್ವೆನ್ಸ್ಗೆ ಕಳಿಸಿದೆ. ಸೊಂಕಿನ ಲಕ್ಷಣ ಹೆಚ್ಚಿತ್ತು. ಮತ್ತು ಸಿಟಿ ವ್ಯಾಲ್ಯೂ ನಲ್ಲಿ ವ್ಯತ್ಯಾಸ ಇತ್ತು. ಹೀಗಾಗಿ 50 ಮಂದಿಯ ಸ್ಯಾಂಪಲ್ ಅನ್ನು ಜೆನೆಮಿಕ್ ಸೀಕ್ವೆನ್ಸ್ ಗೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.
50 ಮಂದಿಯ ಜೆನೆಮಿಕ್ ಸೀಕ್ವೆನ್ಸ್ ರಿಪೋರ್ಟ್ ಏನಾಗಲಿದೆ ಎಂಬುದು ದೊಡ್ಡ ತಲೆನೋವಾಗಿದೆ. ಯಾವ ತಳಿ ಇದೆ, ಇರುವುದು ಜೆಎನ್ 1 ಅಥವಾ ಬೇರೆ ತಳಿನಾ ಎಂಬುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಆರೋಗ್ಯ ಇಲಾಖೆ ಈಗ ಜೆನೆಮಿಕ್ ಸೀಕ್ವೆನ್ಸ್ ರಿಪೋರ್ಟ್ಗಾಗಿ ಕಾಯುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿಂದು ಹೊಸದಾಗಿ 24 ಜನರಿಗೆ ಕೊರೊನಾ ಸೋಂಕು; ಇಲ್ಲಿದೆ ವಿವರ
ರಾಜ್ಯಕ್ಕೆ JN.1 ವೈರಸ್ ಭೀತಿ ಹಿನ್ನಲೆ ಸಿಲಿಕಾನ್ ಸಿಟಿ ಶಾಲೆಗಳ ಮಕ್ಕಳು ಹಾಗೂ ಪೋಷಕರಿಗೆ ಟೆನ್ಷನ್ ಶುರುವಾಗಿದೆ. ಹೀಗಾಗಿ ಶಾಲೆಗಳಲ್ಲಿ ಸ್ಟ್ರಿಕ್ಟ್ ರೂಲ್ಸ್ ಗೆ ಚಿಂತನೆ ಶುರುವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಚಿಂತನೆ ಮಾಡಿದೆ. ಕೊವಿಡ್ ಭೀತಿ ಹಿನ್ನೆಲೆ ಪೋಷಕರಿಗೆ ಶಾಲೆ ಆಡಳಿತಗಳಿಂದ ಮೆಸೇಜ್ ಮೂಲಕ ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಿ ಎಂದು ಸೂಚನೆ ನೀಡಿವೆ. ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸಲಹೆ ನೀಡಿವೆ. JN.1 ವೈರಸ್ ರಾಕೆಟ್ ಸ್ಪೀಡ್ ನಲ್ಲಿ ಹರಡುವ ಕಾರಣ ಮಕ್ಕಳ ಬಗ್ಗೆ ಜಾಗೃತಿಗೆ ಕೆಲ ಖಾಸಗಿ ಶಾಲೆಗಳು ನಿರ್ಧಾರ ಮಾಡಿವೆ. ಕ್ಯಾಮ್ಸ್ ಖಾಸಗಿ ಶಾಲಾ ಒಕ್ಕೂಟ ಜಾಗೃತಿ ಹಾಗೂ ಮನವಿಗೆ ಮುಂದಾಗಿದ್ದು ತನ್ನ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆ ಮಾಡಲು ಸೂಚನೆ ನೀಡಿದೆ.
ಕೊರೊನಾದಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರಕ್ಕೆ ಚಿಂತನೆ
ಸಿಟಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಮತ್ತೊಂದೆಡೆ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಪಾಲಿಕೆ ತಯಾರಿ ನಡೆಸುತ್ತಿದೆ. ನಗರದ 12 ವಿದ್ಯುತ್ ಚಿತಾಗಾರಗಳ ಪೈಕಿ 4 ಚಿತಾಗಾರ ಮೀಸಲಿಡಲಾಗಿದೆ. ಸುಮ್ಮನಹಳ್ಳಿ, ಮೇಟಿ ಅಗ್ರಹಾರ, ಬನಶಂಕರಿ, ಹೆಬ್ಬಾಳ ಚಿತಾಗಾರಗಳು ಅಂತ್ಯಕ್ರಿಯೆಗೆ ಮೀಸಲಿಡಲಾಗಿದೆ. ಈ ಹಿಂದೆ ಅಂತ್ಯ ಸಂಸ್ಕಾರಕ್ಕೆ ಚಿತಾಗಾರಗಳಲ್ಲಿ ತೀವ್ರ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಸಿಎಂ ಸೂಚನೆ ಹಿನ್ನೆಲೆ ಬಿಬಿಎಂಪಿ ತಯಾರಿ ನಡೆಸುತ್ತಿದೆ. ಶವ ಸಾಗಿಸಲು 8 ವಲಯಕ್ಕೆ ತಲಾ ಒಂದೊಂದು ಆ್ಯಂಬುಲೆನ್ಸ್ ಮೀಸಲಿಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:12 am, Fri, 22 December 23