SSLC ಪರೀಕ್ಷೆಗೆ ಗೈರಾದ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಲು ಮುಂದಾದ ಆರೋಗ್ಯ ಇಲಾಖೆ

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ಪ್ರಮುಖ ಘಟ್ಟ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಪ್ರಮುಖ ಘಟ್ಟವನ್ನು ತಲುಪಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿರುವ ಆತಂಕಕಾರಿ ವಿಚಾರ ಹೊರಬಿದ್ದಿದೆ. ಈ ಬಾರಿ ಎಸ್ಎಸ್ಎಲ್​ಸಿ ಪರೀಕ್ಷೆಗೆ ಸರಾಸರಿ 8,970 ವಿದ್ಯಾರ್ಥಿಗಳು ಗೈರಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನಡೆಸಲು ತೀರ್ಮಾನಿಸಿದೆ.

SSLC ಪರೀಕ್ಷೆಗೆ ಗೈರಾದ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಲು ಮುಂದಾದ ಆರೋಗ್ಯ ಇಲಾಖೆ
ಸಾಂದರ್ಭಿಕ ಚಿತ್ರ
Edited By:

Updated on: May 16, 2024 | 9:45 AM

ಬೆಂಗಳೂರು, ಮೇ.16: ಎಸ್ಎಸ್ಎಲ್​ಸಿ ಪರೀಕ್ಷೆ (SSLC Exam). ಇದು ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಟರ್ನಿಂಗ್ ಪಾಯಿಂಟ್. ಆದರೆ ಪರೀಕ್ಷೆಗೆ ಹೆದರಿ ಅಥವಾ ಇತರೆ ಸಮಸ್ಯೆಗಳಿಂದಾಗಿ ಇದೇ ಮೊದಲ ಬಾರಿಗೆ ಸರಾಸರಿ 9 ಸಾವಿರದಷ್ಟು ವಿದ್ಯಾರ್ಥಿಗಳು ಎಕ್ಸಾಂಗೆ ಗೈರಾಗಿದ್ದಾರೆ. ವೆಬ್ ಕಾಸ್ಟಿಂಗ್, ಸಿಸಿಟಿವಿ ಭಯ, ಪರೀಕ್ಷೆಯ ಭಯದಿಂದ ಪರೀಕ್ಷೆ ಬರೆಯದೇ ಹಿಂದುಳಿದಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಎಸ್ಎಲ್​ಸಿ ಬೋರ್ಡ್, ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಆರೋಗ್ಯ ಇಲಾಖೆ (Health Department) ಹಾಗೂ ಮಕ್ಕಳ ಹಕ್ಕುಗಳ ಇಲಾಖೆಯ (Department of Child Rights) ಮೊರೆ ಹೋಗಿದೆ.

SSLC ಪರೀಕ್ಷೆಯಲ್ಲಿ ಈ ವರ್ಷ ಗರಿಷ್ಠ ಮಕ್ಕಳು ಗೈರು ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜೊತೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಕೌನ್ಸಿಲಿಂಗ್ ಮಾಡಲು ಮುಂದಾಗಿದೆ. ಎಸ್ಎಸ್ಎಲ್​ಸಿ ಬೋರ್ಡ್​ನಿಂದ ಮಕ್ಕಳ ಗೈರು ಅಂಕಿಅಂಶ ತರಿಸಿಕೊಂಡ ಮಕ್ಕಳ ಹಕ್ಕುಗಳ ಆಯೋಗ, ಮತ್ತೆ ಶಾಲೆಗೆ ಮರಳಿ ತರಲು ಕಾರ್ಯಕ್ರಮ ರೂಪಿಸುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯು ವಿದ್ಯಾರ್ಥಿಗಳಿಗೆ ಸೂಕ್ತ ಕೌನ್ಸಿಲಿಂಗ್ ನೀಡಲು ಮುಂದಾಗಿದೆ. ಇನ್ನು ಈ ಬಾರಿ ಸಿಸಿಟಿವಿ ಸೇರಿದಂತೆ ನಾನಾ ಕಾರಣಗಳಿಂದ ಭಯ ಬಿದ್ದ ಮಕ್ಕಳ ಬಗ್ಗೆ ಪೋಷಕರು ಆತಂಕಕ್ಕೆ ಇಡಾಗಿದ್ದಾರೆ.

ಇದನ್ನೂ ಓದಿ: ಮಡಿಕೇರಿ: ಮುಂಡ್ರೋಡು ಮೀಸಲು ಅರಣ್ಯದಲ್ಲಿ ಸಾವಿರಾರು ಮರ ಕಡಿದ ಆರೋಪ, ತನಿಖೆಗೆ ಆದೇಶಿಸಿದ ಸಚಿವ ಖಂಡ್ರೆ

ಕೋವಿಡ್ ನಂತರದಲ್ಲಿ ಮಕ್ಕಳಿಗೆ ಶಾಲೆ, ಪಾಠ, ಪರೀಕ್ಷೆ ಎಂಬುದು ಭಯ ಹುಟ್ಟಿಸಿದೆ. ಶಾಲೆಯಿಂದ ಎರಡೂವರೆ ವರ್ಷಗಳ ಕಾಲ ದೂರ ಉಳಿದ ಕಾರಣದಿಂದ ಶಿಕ್ಷಣದ ಮಹತ್ವ ತಿಳಿಯುತ್ತಿಲ್ಲ. ವೆಬ್ ಕ್ಯಾಸ್ಟಿಂಗ್, ಸಿಸಿಟಿವಿಗೆ ಹೆದರಿ ಎಕ್ಸಾಂ ಬರೆಯಲು ಯೋಚಿಸಿ ಶೈಕ್ಷಣಿಕ ಬದುಕನ್ನು ಹಾಳು ಮಾಡಿಕೊಳ್ತಿದ್ದಾರೆ. ಎಸ್ಎಸ್ಎಲ್​ಸಿಗೆ ಕೊನೆ ಮಾಡಿ ಬಾಲ ಕಾರ್ಮಿಕರಾಗುತ್ತಿರುವ ದುರ್ಘಟನೆ ಕೂಡ ವರದಿಯಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ