ಬೌರಿಂಗ್ ಆಸ್ಪತ್ರೆಗೆ ಹೈಕೋರ್ಟ್ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ: ಐವರು ವೈದ್ಯರು ಒಂದೇ ದಿನ ರಜೆ ಪಡೆದ ವಿಚಾರ ತಿಳಿದು ಗರಂ

ಬೆಂಗಳೂರಿನಲ್ಲಿ ವ್ಯವಸ್ಥೆ ಹೇಗಿದೆ ಅಂತ ನೋಡೊಕೆ ಭೇಟಿ ನೀಡಲಾಗಿದೆ. 750 ಬೆಡ್​ಗಳಿದ್ದು, ಗಲೀಜು ಇದೆ. ಸ್ವಚ್ಚತೆ ಕಡಿಮೆ ಇದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕೊಡಲಾಗುವುದು ಎಂದರು.

ಬೌರಿಂಗ್ ಆಸ್ಪತ್ರೆಗೆ ಹೈಕೋರ್ಟ್ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ: ಐವರು ವೈದ್ಯರು ಒಂದೇ ದಿನ ರಜೆ ಪಡೆದ ವಿಚಾರ ತಿಳಿದು ಗರಂ
ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಹೈಕೋರ್ಟ್ ನ್ಯಾ.ಬಿ.ವೀರಪ್ಪ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2022 | 12:44 PM

ಬೆಂಗಳೂರು: ರಾಜ್ಯ ಕಾನೂನು ಪ್ರಾಧಿಕಾರಕ್ಕೆ ಆಸ್ಪತ್ರೆ ಸೌಕರ್ಯ ಸರಿಯಿಲ್ಲ ಎಂದು ರಾಜ್ಯದ ಎಲ್ಲಾ ಕಡೆಯಿಂದ ದೂರುಗಳು ಬರ್ತಾ ಇವೆ. ಹಾಗಾಗಿ ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ (Bowring Hospital) ಭೇಟಿ ನೀಡಲಾಗಿದೆ ಎಂದು ಹೈಕೋರ್ಟ್ ನ್ಯಾ.ಬಿ.ವೀರಪ್ಪ ಹೇಳಿದರು. ಬೌರಿಂಗ್ ಆಸ್ಪತ್ರೆ ದಿಢೀರ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ನೋಡಿದ್ದೇವೆ. ಇವತ್ತು ಬೆಂಗಳೂರಿನಲ್ಲಿ ವ್ಯವಸ್ಥೆ ಹೇಗಿದೆ ಅಂತ ನೋಡೊಕೆ ಭೇಟಿ ನೀಡಲಾಗಿದೆ. 750 ಬೆಡ್​ಗಳಿದ್ದು, ಗಲೀಜು ಇದೆ. ಸ್ವಚ್ಚತೆ ಕಡಿಮೆ ಇದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕೊಡಲಾಗುವುದು. ಸರ್ಕಾರ ಹಣ ಕೊಡುತ್ತೆ, ಸ್ಟಾಪ್ ಕೊಡುತ್ತೆ, ವೈದ್ಯರನ್ನ ಕೊಡುತ್ತೆ. ಆದರೆ ನಿರ್ವಹಣೆ ಕಡಿಮೆ ಇದೆ. ವೈದ್ಯರು ಇವತ್ತು ರಜೆ ಅಂತ ಸುಮಾರು ಜನ ಬಂದಿಲ್ಲ ಅಂತಾರೆ. ನಮಗೆ ಕೆಲವರಷ್ಟೇ ಕಾಣಿಸಿದರು ಎಂದರು.

ಸರ್ಕಾರ ಹೆಚ್ಚು ಮುತುವರ್ಜಿ ವಹಿಸಬೇಕು. ಇವತ್ತು 50 ಜನ ರೋಗಿಗಳು ಇದ್ದಾರೆ ಅಷ್ಟೇ. ಎಷ್ಟು ವೈದ್ಯರು ಇದ್ದಾರೆ, ಖಾಲಿ ಎಷ್ಟು ಇದೆ ಅನ್ನೋ ಬಗ್ಗೆ ವರದಿ ಕೇಳಿದ್ದೀನಿ. ಬೆಡ್​ಗಳು ಕ್ಲೀನ್ ಇಲ್ಲ, ಇಲ್ಲಿ ಏನೂ ಸಾಲದು. ಅದಕ್ಕೆ ಜನ ಬರ್ತಾ ಇಲ್ಲ. ಮೆಡಿಸಿನ್ ಬಳಕೆ ಅಗದೇ ಇದರೆ ಖಾಸಗಿ ಆಸ್ಪತ್ರೆಗೆ ಹೋಗುತ್ತೆ ಅಷ್ಟೇ. ಇಲ್ಲಿ ಯಜಮಾನರು ಯಾರು ಅನ್ನೋದು ಗೊತ್ತಿಲ್ಲ. ಅವರು ಬೆಳಿಗ್ಗೆಯಿಂದ ಸಂಜೆಯವರೆಗೆ ಇರಬೇಕು. ಇಲ್ಲಿ ಯಾರು ಅನ್ನೋದು ಗೊತ್ತಿಲ್ಲ, ನಾವು ಹುಡುಕುತ್ತೇವೆ ಎಂದು ನ್ಯಾ. ವೀರಪ್ಪ ಹೇಳಿದರು.

ಒಂದೇ ದಿನ 5 ವೈದ್ಯರು ರಜೆ: ನ್ಯಾ.ಬಿ.ವೀರಪ್ಪ ಗರಂ 

ಇನ್ನು ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿ, ರೋಗಿಗಳ ಜತೆ ಚರ್ಚೆ ಮಾಡಿದರು. ವೈದ್ಯಕೀಯ ಚಿಕಿತ್ಸೆ, ಸೌಲಭ್ಯಗಳ ಬಗ್ಗೆ ನ್ಯಾ.ಬಿ.ವೀರಪ್ಪ ಪರಿಶೀಲನೆ ನಡೆಸಿದರು. ಚರ್ಮರೋಗ ತಜ್ಞರ ವಿಭಾಗದಲ್ಲಿ ಒಂದೇ ದಿನ 6 ವೈದ್ಯರಲ್ಲಿ ಐವರು ರಜೆ ವಿಚಾರ ತಿಳಿದು ಗರಂ ಆಗಿದ್ದು, ವೈದ್ಯರನ್ನು ತರಾಟೆ ತೆಗೆದುಕೊಂಡರು. ಹೆಚ್ಚು ರೋಗಿಗಳು ಬಂದರೆ ನೀವೊಬ್ಬರೆ ಹೇಗೆ ಚಿಕಿತ್ಸೆ ನೀಡುತ್ತೀರಾ? ಗಂಭೀರ ಕೇಸ್​ಗಳು ಬಂದಾಗ ನೀವು ಒಬ್ಬರೇ ಏನ್​ ಮಾಡುತ್ತೀರಾ ಎಂಬ ನ್ಯಾ.ಬಿ.ವೀರಪ್ಪ ಪ್ರಶ್ನೆಗಳಿಗೆ ವೈದ್ಯೆ ತಡಬಡಾಯಿಸಿದರು. ಹಾಸಿಗೆ ಕ್ಲೀನ್ ಮಾಡಿಲ್ಲ. ಎಷ್ಟು ದಿನ ಆಯ್ತು‌ ಕ್ಲೀನ್ ಮಾಡಿ ಎಂದು ಶಸ್ತ್ರಚಿಕಿತ್ಸಾ ಹೊರ ರೋಗಿ ವಿಭಾಗದಲ್ಲಿ ವೈದ್ಯರಿಗೆ ತರಾಟೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ಲಭ್ಯವಿರುವ ಉಚಿತ ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಶಸ್ತ್ರ ಚಿಕಿತ್ಸೆ ವಿಭಾಗದ ವೈದ್ಯ ಕೆಂಪರಾಜು ಮಾಹಿತಿ ನೀಡಿದರು. ಮೆಡಿಕಲ್ ಸ್ಟೋರ್ ಸ್ವಚ್ಛತೆ ಬಗ್ಗೆ ನ್ಯಾ. ವೀರಪ್ಪ ಬೇಸರ ವ್ಯಕ್ತಪಡಿಸಿದ್ದು, ಆಸ್ಪತ್ರೆ ಸಿಬ್ಬಂದಿ ಸಮಜಾಯಿಸಲು ನೋಡಿದರು. ಮೆಡಿಕಲ್ ಸ್ಟೋರ್​ನಲ್ಲಿ ಇದ್ದ ಗಲೀಜನ್ನ ನಾನೇ ಕ್ಲೀನ್ ಮಾಡುತ್ತೇನೆ ಪೊರಕೆ ಕೊಡಿ ಎಂದು ನ್ಯಾ. ವೀರಪ್ಪ ಹೇಳಿದರು. ಮೇಜರ್ ಆಪರೇಷನ್ ಥಿಯೇಟರ್, ರಕ್ತ ಕೇಂದ್ರವನ್ನು ಪರಿಶೀಲನೆ ಮಾಡಿದ್ದು, ಕ್ಲೀನ್ ಇದರೆ ಹೆಚ್ಚು ಜನ ಬರುತ್ತಾರೆ. ಇಲ್ಲ ಅಂದರೆ ಜನ ಪ್ರೈವೇಟ್ ಆಸ್ಪತ್ರೆಗೆ ಹೋಗುತ್ತಾರೆ. ಎಷ್ಟು ಜನ ಪ್ರೈವೇಟ್ ಆಸ್ಪತ್ರೆಗೆ ಹೋಗುತ್ತಾರೆ. ನೀವು ಆಸ್ಪತ್ರೆ ಅಪ್ಡೇಟ್‌ ಮಾಡಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು. ಆಸ್ಪತ್ರೇಲಿ ಎಷ್ಟು ಮಂದಿ ವೈದ್ಯರು ಹಾಗೂ ಸಿಬ್ಬಂದಿ ಇದ್ದಾರೆ. ಎಷ್ಟು ಖಾಲಿ ಪೋಸ್ಟ್ಗಳಿವೆ ಅನ್ನೋ ಸಂಪೂರ್ಣ ಮಾಹಿತಿ ಕೊಡಿ ಎಂದರು. ಸಮಯ 10:30 ಆದರೂ ಮೆಡಿಕಲ್ ಸುಪೆರಿಡೆಂಟ್ ಸತೀಶ್ ಕುಮಾರ್ ಇನ್ನೂ ಆಸ್ಪತ್ರೆಗೆ ಬಂದಿರಲಿಲ್ಲ.

ನ್ಯಾಯಾಧೀಶರು ಅವ್ಯವಸ್ಥೆ ಅಂತಾ ಹೇಳಿದ್ದಾರಾ? ಸಚಿವ ಡಾ.ಕೆ. ಸುಧಾಕರ್

ಬೌರಿಂಗ್ ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಾಧೀಶ ವೀರಪ್ಪ ಭೇಟಿ ವಿಚಾರವಾಗಿ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಧೀಶರು ಅವ್ಯವಸ್ಥೆ ಅಂತಾ ಹೇಳಿದ್ದಾರಾ? ಬೌರಿಂಗ್ ಆಸ್ಪತ್ರೆ ಗುಣಮಟ್ಟದ ಆಸ್ಪತ್ರೆ ಸಿಟಿ ಹೃದಯ ಭಾಗದಲ್ಲಿರುವ ಒಳ್ಳೆಯ ಆಸ್ಪತ್ರೆ. ಆಸ್ಪತ್ರೆಯ ಕಟ್ಟಡ ಹಳೆಯ ಕಟ್ಟಡ, ಸಣ್ಣಪುಟ್ಟ ಅವ್ಯವಸ್ಥೆ ಸರಿಪಡಿಸಿಕೊಳ್ಳುತ್ತೇವೆ. 500 ಹಾಸಿಗೆ ಹೊಸ ಕಟ್ಟಡ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಆಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ