ಆನ್ ಲೈನ್ ಗ್ಯಾಂಬ್ಲಿಂಗ್ ತಡೆ ಕಾನೂನು ತಂದೆವು, ಆದ್ರೆ ಹೈಕೋರ್ಟ್ ಮತ್ತೆ ತಡೆ ಕೊಟ್ಟಿದೆ- ಸದನದಲ್ಲಿ ಸಿಎಂ ಬೊಮ್ಮಾಯಿ ಅಸಹಾಯಕತೆ
ಇOnline Gambling: ಷ್ಟು ವರ್ಷ ಆಡಳಿತ ಮಾಡಿದವರು ಈ ಸಣ್ಣ ಕಾನೂನು ತಿದ್ದುಪಡಿ ಮಾಡ್ಲಿಲ್ಲ. ಇದರ ಬಗ್ಗೆ ನಾನು ಗೃಹ ಸಚಿವ ಇದ್ದಾಗ ಇದು ಕಾಗ್ನಿಜೇಬಲ್ ಅಫೆನ್ಸ್ ಅಂತ ಮಾಡಿ ಕಾನೂನು ಮಾಡಿದ್ದೆವು. ಮೊದಲಿನಂತೆ 500 ರೂ ದಂಡ ಕಟ್ಟಿ ಸ್ಟೇಷನ್ ಬೇಲ್ ಪಡೆದು ಹೊರಗೆ ಹೋಗಲು ಈಗ ಆಗಲ್ಲ. ಈಗ ಗ್ಯಾಂಬ್ಲಿಂಗ್ ನಲ್ಲಿ ಸಿಕ್ಕಿಬಿದ್ರೆ 3-5 ವರ್ಷ ಶಿಕ್ಷೆ ಕಾನೂನು ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4ರಂದು ಮಂಡಿಸಿದ ರಾಜ್ಯ ಆಯವ್ಯಯದ ಬಗ್ಗೆ ವಿಧಾನಮಂಡಳದ ಉಭಯ ಸದನಗಳಲ್ಲೂ ಚರ್ಚೆ ಮುದುವರಿದಿದೆ. ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಚರ್ಚೆ ವೇಳೆ ಐಪಿಎಲ್ ಬೆಟ್ಟಿಂಗ್ ಮತ್ತು ಆನ್ ಲೈನ್ ಗ್ಯಾಂಬ್ಲಿಂಗ್ ವಿಚಾರ ಪ್ರಸ್ತಾಪಿಸಿದರು. ಈ ವೇಳೆ, ಆನ್ ಲೈನ್ ಜೂಜು (Online Gambling) ತಡೆ ಕಾನೂನು ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಸಹಾಯಕತೆ ತೋರುತ್ತಾ, ವಿಷಯದ ಬಗ್ಗೆ ಸ್ಪಷ್ಟನೆ ನೀಡಿದರು. ಕಾನೂನಿಗೆ ಹೈಕೋರ್ಟ್ (Karnataka High court) ತಡೆ ಕೊಟ್ಟ ಹಿನ್ನೆಲೆ ಕಾನೂನು ಜಾರಿ ಮಾಡಲಾಗ್ತಿಲ್ಲ ಎಂದು ಸಿಎಂ ಬೊಮ್ಮಾಯಿ (Basavaraj Bommai) ಸದನದಲ್ಲಿ ಅಸಹಾಯಕತೆ ತೋಡಿಕೊಂಡರು.
ಇಷ್ಟು ವರ್ಷ ಆಡಳಿತ ಮಾಡಿದವರು ಆ ಸಣ್ಣ ಕಾನೂನನ್ನೂ ಸಹ ತಿದ್ದುಪಡಿ ಮಾಡ್ಲಿಲ್ಲ: ಸಿಎಂ ಬೊಮ್ಮಾಯಿ ಸೋಷಿಯಲ್ ಕ್ಲಬ್ ಗಳಲ್ಲಿ ನಡೆಯೋದೆಲ್ಲಾ ಗ್ಯಾಂಬ್ಲಿಂಗ್. ನಾವು ದಾಳಿ ಮಾಡಿಸಿದ್ರೆ ಬೆಳಗ್ಗೆ ಸ್ಟೇಷನ್ ಬೇಲ್ ತಗೊಂಡು ಆರೋಪಿ ಆಚೆ ಬರುತ್ತಾನೆ. 500 ರೂ ದಂಡ ಕಟ್ಟಿ, ಆರೋಪಿ ಹೊರಗೆ ಬರುತ್ತಾನೆ. ಇದಕ್ಕೆ ಕಾರಣ ನಮ್ಮ ಕಾನೂನು ಇರೋ ರೀತಿ. ಇಷ್ಟು ವರ್ಷ ಆಡಳಿತ ಮಾಡಿದವರು ಈ ಸಣ್ಣ ಕಾನೂನು ತಿದ್ದುಪಡಿ ಮಾಡ್ಲಿಲ್ಲ. ಇದರ ಬಗ್ಗೆ ನಾನು ಗೃಹ ಸಚಿವ ಇದ್ದಾಗ ಇದು ಕಾಗ್ನಿಜೇಬಲ್ ಅಫೆನ್ಸ್ ಅಂತ ಮಾಡಿ ಕಾನೂನು ಮಾಡಿದ್ದೆವು. ಮೊದಲಿನಂತೆ 500 ರೂ ದಂಡ ಕಟ್ಟಿ ಸ್ಟೇಷನ್ ಬೇಲ್ ಪಡೆದು ಹೊರಗೆ ಹೋಗಲು ಈಗ ಆಗಲ್ಲ. ಈಗ ಗ್ಯಾಂಬ್ಲಿಂಗ್ ನಲ್ಲಿ ಸಿಕ್ಕಿಬಿದ್ರೆ 3-5 ವರ್ಷ ಶಿಕ್ಷೆ ಕಾನೂನು ಇದೆ ಎಂದು ಹೇಳಿದರು.
ದೇಶದಲ್ಲಿ, ವಿದೇಶ ಮಟ್ಟದಲ್ಲಿ ಆನ್ ಲೈನ್ ಗ್ಯಾಂಬ್ಲಿಂಗ್ ನಡೆಯುತ್ತಿದೆ. ಕಾನೂನು ಸರಳ, ಮುಕ್ತ ಇರೋ ಕಡೆ ಕುಳಿತು ವ್ಯವಹಾರ ಮಾಡ್ತಾರೆ. ಆನ್ ಲೈನ್ ಗ್ಯಾಂಬ್ಲಿಂಗ್ ತಡೆಯಲು ನಾನು ಮುಂದಾದೆ, ಆಗ ಇದಕ್ಕೆ ಎಷ್ಟು ನೆಪ ಹೇಳಿದ್ರು? ನಾನು ಆನ್ ಲೈನ್ ಗ್ಯಾಂಬ್ಲಿಂಗ್ ತಡೆ ಹಾಕಲೇಬೇಕು ಅಂತ ಪಟ್ಟು ಹಿಡಿದೆ. ಎರಡು ಮೂರು ತಿಂಗಳು ರೂಪುರೇಷೆ ಸಿದ್ಧಪಡಿಸಿ ಆನ್ ಲೈನ್ ಗ್ಯಾಂಬ್ಲಿಂಗ್ ತಡೆ ಕಾನೂನು ತಂದೆವು. ನಾವು ತಂದ ಕಾನೂನಿಗೆ ಹೈಕೋರ್ಟ್ ಮತ್ತೆ ತಡೆ ಕೊಟ್ಟಿದೆ ಎಂದು ಸಿಎಂ ಬೊಮ್ಮಾಯಿ ಅಸಹಾಯಕತೆ ತೋಡಿಕೊಂಡರು.
ಎಲ್ಲಾ ರಾಜ್ಯಗಳಲ್ಲೂ ಮತ್ತೆ ಶುರುವಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ಆಟ. ನನ್ನ ಮೇಲೆ ಬೇರೆ ಬೇರೆ ರೂಪದಲ್ಲಿ ಬಹಳ ಒತ್ತಡ ಬಂತು. ಒಬ್ಬರು ಬಂದು ನಿಮ್ಮ ಕ್ಷೇತ್ರಕ್ಕೆ ಎಷ್ಟು ಬೇಕೋ ಅಷ್ಟು ಫ್ರೀ ವ್ಯಾಕ್ಸಿನ್ ಕೊಡ್ತೀನಿ ಅಂತ ಆಮಿಷ ಕೊಟ್ಟರು. ನಾನು ನಿಮ್ಮ ಪಾಪ ಬೇಡ ಅಂತ ಒಪ್ಪಲಿಲ್ಲ. ನಾವು ಆನ್ ಲೈನ್ ಗ್ಯಾಂಬ್ಲಿಂಗ್ ತಡೆ ಕಾನೂನು ತಂದೆವು. ಕಾನೂನು ತಂದ್ರೂ ಅದನ್ನು ಜಾರಿ ಮಾಡಲಾಗದ ಅಸಹಾಯಕತೆಯಲ್ಲಿದ್ದೇವೆ ಎಂದು ಸದನದಲ್ಲಿ ಸಿಎಂ ಬೊಮ್ಮಾಯಿ ಖುದ್ದಾಗಿ ತಮ್ಮ ಅಸಹಾಯಕತೆ ತೋಡಿಕೊಂಡರು.
ಇದನ್ನೂ ಓದಿ: ಸಾಲ ತೀರಿಸಲಿಲ್ಲ ಎಂದು ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ ಕಿರಾತಕ
ಇದನ್ನೂ ಓದಿ: ಕುಮಾರಸ್ವಾಮಿ ಹೋಟೆಲ್ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ಮುಂದೆ ಹೆಚ್ಡಿಕೆ ಬಗ್ಗೆ ಏಕವಚನದಲ್ಲಿ ಮಾತಾಡುವೆ -ಯೋಗೇಶ್ವರ್
Published On - 2:44 pm, Mon, 14 March 22