ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಆಗ್ರಹಿಸಿ ಹಾಸನದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಪ್ರಕರಣ; ಉನ್ನತ ಶಿಕ್ಷಣ ಸಚಿವರು ಹೇಳಿದ್ದು ಹೀಗೆ

ಎನ್ಇಪಿನಲ್ಲಿ ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕೆಲಸ ಮಾಡಲು ಶಾಲೆಯ ಅವಧಿಯಲ್ಲಿ ಆಯ್ಕೆ ಮಾಡಿಕೊಂಡು ಮುಂದೆ ಸಾಗುವ ಅವಕಾಶವಿದೆ.

ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಆಗ್ರಹಿಸಿ ಹಾಸನದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಪ್ರಕರಣ; ಉನ್ನತ ಶಿಕ್ಷಣ ಸಚಿವರು ಹೇಳಿದ್ದು ಹೀಗೆ
ಅಶ್ವತ್ಥ್ ನಾರಾಯಣ
Follow us
TV9 Web
| Updated By: Digi Tech Desk

Updated on:Oct 26, 2021 | 2:54 PM

ಬೆಂಗಳೂರು: ಶಿಕ್ಷಣದ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕೆಂದು ಆಗ್ರಹಿಸಿ ಹಾಸನದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath Narayan) ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದಲ್ಲಿ ಇಂತಹ ಕೆಲಸ ಮಾಡಬೇಕು, ಅಂತಹ ಕೆಲಸ ಮಾಡಬೇಕು ಎಂಬ ತಾರತಮ್ಯ ಹೋಗಬೇಕೆಂದು ಮೃತ ವಿದ್ಯಾರ್ಥಿ ಮಾತನಾಡಿದ್ದಾನೆ. ಯಾರು ಯಾವ ಕೆಲಸ ಬೇಕಾದರೂ ಮಾಡಬಹುದು. ಕಸ ಹೊಡೆಯುವ ಕೆಲಸವನ್ನಾದರೂ ಮಾಡಬಹುದು. ದೊಡ್ಡ ಕೆಲಸವನ್ನಾದರೂ ಮಾಡಬಹುದು. ತನಗೆ ಇಷ್ಟವಾದ ಕೆಲಸ ಮಾಡಲು ಬಿಡಬೇಕು ಅಂತ ವಿದ್ಯಾರ್ಥಿ ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದಾನೆ. ಈಗ ಸಮಾಜದಲ್ಲಿ ಸುಧಾರಣೆ ಆಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎನ್ಇಪಿನಲ್ಲಿ ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕೆಲಸ ಮಾಡಲು ಶಾಲೆಯ ಅವಧಿಯಲ್ಲಿ ಆಯ್ಕೆ ಮಾಡಿಕೊಂಡು ಮುಂದೆ ಸಾಗುವ ಅವಕಾಶವಿದೆ. 10 ವರ್ಷದಲ್ಲಿ ಇದರ ಸುಧಾರಣೆಯನ್ನು ನಾವು ಕಾಣುತ್ತೇವೆ ಎಂದು ತಿಳಿಸಿದ ಸಚಿವರು, ವಿದ್ಯಾರ್ಥಿಯ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದರೆ ದುಡುಕಿಬಿಟ್ಟ. ತನ್ನ ಅಭಿಪ್ರಾಯ ಹೇಳಿಕೊಳ್ಳಬಹುದಿತ್ತು. ಪ್ರಾಣ ಕಳೆದುಕೊಳ್ಳಬಾರದಿತ್ತು. ಅವರ ಕುಟುಂಬದ ನೋವು ಭರಿಸುವ ಶಕ್ತಿ ದೇವರು ಕರುಣಿಸಲಿ ಅಂತ ಹೇಳಿದರು.

ಹೇಮಂತ್ ನಿನ್ನೆ ಎಲ್ಲರ ಜೊತೆ ಚೆನ್ನಾಗಿದ್ದ. ಕಾಲೇಜಿಗೆ ಹೋಗಲು ರೆಡಿ ಆಗಿದ್ದವನು, ವಾಪಸ್ ಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಕಾರಣ ನಮಗೆ ಗೊತ್ತಿಲ್ಲ. ಎಲ್ಲರ ಜೊತೆಗೂ ಆತ್ಮೀಯನಾಗಿದ್ದ ಅಂತ ಮೃತ ಹೇಮಂತ್ ರೂಮೇಟ್ ಲೇಖನ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ಇದ್ದು ಹೋರಾಟ ಮಾಡಬೇಕು; ಮೃತ ವಿದ್ಯಾರ್ಥಿ ತಂದೆ ಹೇಳಿಕೆ ಅವನ ಆಸೆಯಂತೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಲಿ. ಎಲ್ಲರನ್ನೂ ಒಂದೇ ರೀತಿ ನೋಡಬೇಡಿ. ಪ್ರತಿಭೆ ಇದ್ದವರಿಗೆ ಅವಕಾಶ ಕೊಡಿ. ಆತನಲ್ಲಿ ಏನೊ‌ ಜಿಗುಪ್ಸೆ ಆಗಿದೆ. ಅದನ್ನ ನಮ್ಮೊಟ್ಟಿಗೆ ಹೇಳಬಹುದಿತ್ತು. ಸಾವು ಎಂದೂ ನ್ಯಾಯ ಕೊಡಲ್ಲ. ಇದ್ದು ಹೋರಾಟ ಮಾಡಬೇಕು. ಯಾರು ಇಂತಹ ತೀರ್ಮಾನ ತೆಗೆದುಕೊಳ್ಳಬೇಡಿ. ಶಿಕ್ಷಣ ಪಡೆದವರು ಮಾತ್ರ ಸಮಾಜದಲ್ಲಿ ಬದುಕುತ್ತಿಲ್ಲ. ಅನಕ್ಷರಸ್ಥರು ಜೀವನ ನಡೆಸುತ್ತಿದ್ದಾರೆ. ಉದ್ಯೋಗ ಇಲ್ಲದವರೂ ಬದುಕಿದ್ದಾರೆ. ಮಗನ ಆತ್ಮಹತ್ಯೆ ನಿರ್ಧಾರ ಸರಿಯಿಲ್ಲ ಅಂತ ಹೇಮಂತ್ ತಂದೆ ತೋಪೇಗೌಡ ಹೇಳಿದರು.

ಇದನ್ನೂ ಓದಿ

ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ’, ಅಂತ್ಯಸಂಸ್ಕಾರಕ್ಕೆ ಸಿಎಂ ಬೊಮ್ಮಾಯಿ ಬರಬೇಕು; ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಫಾರಿನ ಟ್ರಿಪ್ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ವಂಚಕ ಅರೆಸ್ಟ್, ಮತ್ತೊಂದೆಡೆ ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಸೆರೆ

Published On - 2:44 pm, Tue, 26 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ