ಚುನಾವಣಾ ಕರ್ತವ್ಯ ಮುಗಿಸಿ ಮಧ್ಯಪ್ರದೇಶದಿಂದ ರಾಜ್ಯಕ್ಕೆ ಹಿಂದಿರುಗಿದ್ದ ಹೋಂ ಗಾರ್ಡ್​ ಸಾವು, ಸರ್ಕಾರದ ವಿರುದ್ಧ ಕುಟುಂಬಸ್ಥರ ಆಕ್ರೋಶ

ರಾಜ್ಯದಿಂದ ಮಧ್ಯಪ್ರದೇಶ ಚುನಾವಣೆ ಡ್ಯೂಟಿಗೆ ಹೋಗಿದ್ದ ಹೋಂ ಗಾರ್ಡ್ ಸಿದ್ದು ಅವರು ವಾಪಸ್ ಆಗುವಾಗ ರೈಲಿನಲ್ಲಿ ತೀವ್ರ ಅಸ್ವಸ್ಥಗೊಂಡು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸರಿಯಾದ ಊಟ, ತಿಂಡಿ ಸಿಗದೇ ಸಿದ್ದು ಮೃತಪಟ್ಟಿದ್ದಾನೆಂದು ಸರ್ಕಾರದ ನಿರ್ಲಕ್ಷ್ಯಕ್ಕೆ ಮೃತ ಸಿದ್ದು ಕುಟುಂಬಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಚುನಾವಣಾ ಕರ್ತವ್ಯ ಮುಗಿಸಿ ಮಧ್ಯಪ್ರದೇಶದಿಂದ ರಾಜ್ಯಕ್ಕೆ ಹಿಂದಿರುಗಿದ್ದ ಹೋಂ ಗಾರ್ಡ್​ ಸಾವು, ಸರ್ಕಾರದ ವಿರುದ್ಧ ಕುಟುಂಬಸ್ಥರ ಆಕ್ರೋಶ
ಸಾವುImage Credit source: The Economic Times
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Nov 25, 2023 | 7:39 AM

ಬೆಂಗಳೂರು, ನ.25: ಚುನಾವಣಾ ಕರ್ತವ್ಯ ಮುಗಿಸಿ ಹಿಂದಿರುಗಿದ್ದ ಹೋಂ ಗಾರ್ಡ್ (​Home Guard) ಚಿಕಿತ್ಸೆ ಫಲಿಸದೆ ಬೆಂಗಳೂರಿನ ಕೆ.ಸಿ.ಜನರಲ್ (KC General Hospital) ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಧ್ಯಪ್ರದೇಶದಿಂದ ರಾಜ್ಯಕ್ಕೆ ಬರುವಾಗ ರೈಲಿನಲ್ಲಿ ತೀವ್ರ ಅಸ್ವಸ್ಥಗೊಂಡ ಮಂಡ್ಯ (Mandya) ಮೂಲದ ಹೋಂ ಗಾರ್ಡ್ ಸಿದ್ದು ಅವರನ್ನು ಸ್ನೇಹಿತರು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ನ.24ರ ಸಂಜೆ 5.30ಕ್ಕೆ ಪ್ರಾಣಬಿಟ್ಟಿದ್ದಾರೆ. ಸರಿಯಾದ ಊಟ, ತಿಂಡಿ ಸಿಗದೇ ಸಿದ್ದು ಮೃತಪಟ್ಟಿದ್ದಾನೆಂದು ಸರ್ಕಾರದ ನಿರ್ಲಕ್ಷ್ಯಕ್ಕೆ ಮೃತ ಸಿದ್ದು ಕುಟುಂಬಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಮಾರ್ಗ ಮಧ್ಯೆ0ಯೇ ಮೃತ ಸಿದ್ದು ರೈಲಿನಲ್ಲಿ ಎರಡು ಮೂರು ಬಾರಿ ವಾಂತಿ ಮಾಡಿಕೊಂಡಿದ್ದರು. ತೀವ್ರ ಅಸ್ವಸ್ಥರಾದ ಹಿನ್ನೆಲೆ ಕೂಡಲೆ ಅವರ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಕೆಸಿ ಜನರಲ್ ಶವಗಾರದಲ್ಲಿ ಮೃತ ಹೋಂ ಗಾರ್ಡ್ ಪಾರ್ಥಿವ ಶರೀರ ಇರಿಸಲಾಗಿದೆ.

ಇದನ್ನೂ ಓದಿ: ಅಂತು ಇಂತು ತಡವಾಗಿ ಬಂದ ರೈಲು: ನಿಟ್ಟುಸಿರು ಬಿಟ್ಟ ಯಾದಗಿರಿಯ 200 ಹೋಂ ಗಾರ್ಡ್ಸ್

ಮಧ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಚುನಾವಣೆ ಹಿನ್ನೆಲೆ ರಾಜ್ಯದ ಹೋಮ್ ಗಾರ್ಡ್​ಗಳನ್ನ ವಿಶೇಷ ಚುನಾವಣಾ ಸೇವೆಗೆಂದು ಮಧ್ಯ ಪ್ರದೇಶಕ್ಕೆ ಕಳುಹಿಸಲಾಗಿತ್ತು. ವಿವಿಧ ಜಿಲ್ಲೆಗಳಿಂದ ರಾಜ್ಯದ ಸುಮಾರು 4000 ಹೋಮ್ ಗಾರ್ಡ್​ಗಳನ್ನ ಮಧ್ಯ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಇವರೆಲ್ಲಾ ಇದೇ ನವೇಂಬರ್ 17 ರಂದು ಅಲ್ಲಿನ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ವಾಪಸ್ ರಾಜ್ಯಕ್ಕೆ ಮರಳಬೇಕಿತ್ತು.ಆದ್ರೆ ಒಂದು ವಾರದ ಕಾಲ ನಮ್ಮ ಹೋಮ್​ ಗಾರ್ಡ್​​ಗಳನ್ನ ವಾಪಸ್ ಕಳಿಸೋ ವ್ಯವಸ್ಥೆ ಮಾಡಿರ್ಲಿಲ್ಲ. ಅಲ್ಲಿನ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ, ನಮ್ಮ ರಾಜ್ಯದ ಅಧಿಕಾರಿಗಳ ಕುಂಟು ನೆಪಗಳಿಂದ ಸುಮಾರು 4000 ಜನ ಗೃಹ ರಕ್ಷಕ ದಳದ ಸಿಬ್ಬಂದಿ ಮರಳಿ ರಾಜ್ಯಕ್ಕೆ ಬಾರಲಾಗದೇ ಅಕ್ಷರಶಃ ಕಂಗಾಲಾಗಿದ್ರು.

ಮಧ್ಯ ಪ್ರದೇಶದಲ್ಲಿ ಇರಲು ವಸತಿ ವ್ಯವಸ್ಥೆ ಸರಿ ಇಲ್ಲದೆ,ಊಟದ ವ್ಯವಸ್ಥೆ ಇಲ್ಲದೆ ಸ್ವಂತ ಹಣ ಖರ್ಚು ಮಾಡುತ್ತ ಪರದಾಡುತ್ತಿದ್ದರು. ವಾಪಸ್ ಬರಲು ಸೂಕ್ತ ರೈಲ್ವೆ ವ್ಯವಸ್ಥೆ ಇಲ್ಲದೆ ಪರಿಸಪಿಸುತ್ತಿದ್ದರು. ಈ ಬಗ್ಗೆ ಟಿವಿ9 ಕೂಡ ಸುದ್ದಿ ಬಿತ್ತರಿಸಿ ಅಧಿಕಾರಿಗಳನ್ನು ಎತ್ತರಿಸಿತ್ತು. ಇದರ ಭಾಗವಾಗಿ ನಿನ್ನೆ ರಾತ್ರಿ ಗೃಹ ರಕ್ಷಕ ದಳದ ಸಿಬ್ಬಂದಿ ಮರಳಿ ಮನೆ ಸೇರಲು ರೈಲಿನ ವ್ಯವಸ್ಥೆ ಮಾಡಲಾಗಿತ್ತು. ಅದರಂತೆಯೇ ಮರಳಿ ಊರಿಗೆ ಬರುವಾಗ ಸಿದ್ದು ಅವರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ