AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ

ವಿದ್ಯುತ್ ಸರಬರಾಜು ಕಂಪನಿಗಳು ಕೆಲವು ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿರುವುದರಿಂದ ಈ ವಾರಾಂತ್ಯದಲ್ಲಿ ಅಂದರೆ ನ.25ರ ಶನಿವಾರ ಮತ್ತು ನ.26ರ ಭಾನುವಾರ ಸೇರಿ ಎರಡು ದಿನಗಳ ಕಾಲ ಬೆಂಗಳೂರಿನ ಹಲವು ಕಡೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ. ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Nov 25, 2023 | 10:59 AM

Share

ಬೆಂಗಳೂರು, ನ.25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಂತಹ ವಿದ್ಯುತ್ ಸರಬರಾಜು ಕಂಪನಿಗಳು ಕೆಲವು ದಿನನಿತ್ಯದ ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿರುವುದರಿಂದ ಈ ವಾರಾಂತ್ಯದಲ್ಲಿ ಅಂದರೆ ನ.25ರ ಶನಿವಾರ ಮತ್ತು ನ.26ರ ಭಾನುವಾರ ಬೆಂಗಳೂರಿನಲ್ಲಿ ಕೆಲ ಕಡೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ (Bengaluru Power Cut).

ವಿದ್ಯುತ್ ಕಂಬಗಳ ಬಳಿ ಅಥವಾ ಟ್ರ್ಯಾನ್ಸ್ ಫಾರ್ಮರ್ ಗಳ ಬಳಿ ಬೆಳೆದ ಗಿಡ-ಗಂಟಿಗಳನ್ನು ತೆರವುಗೊಳಿಸುವುದು, ಬಹು-ಗ್ರಾಮ ಯೋಜನೆಗಳ ಅಡಿಯಲ್ಲಿ ನೀರು ಸರಬರಾಜು ಸ್ಥಾಪನೆಗೆ ವಿದ್ಯುತ್ ಸರಬರಾಜುಗಳನ್ನು ಸ್ಥಾಪಿಸುವುದು, ನವೀಕರಣ, ಆಧುನೀಕರಣ, DTC ರಚನೆಗಳನ್ನು ನಿರ್ವಹಿಸುವುದು, ಕೇಬಲ್​ಗಳನ್ನು ಸರಿ ಮಾಡುವುದು, ರಿಂಗ್ ಮುಖ್ಯ ಘಟಕಗಳನ್ನು ನಿರ್ವಹಿಸುವುದು, ಮರಗಳನ್ನು ಕತ್ತರಿಸುವುದು, ದಿನದ 24 ಗಂಟೆಯೂ ಜಲಸಿರಿಗಾಗಿ ಪೂರೈಕೆ, ಮತ್ತು ಭೂಮಿಯೊಳಗಿನ ಕೇಬಲ್‌ಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸುವುದು ಸೇರಿದಂತೆ ಇತರೆ ನಿರ್ವಾಹಣ ಕಾರ್ಯಗಳನ್ನು ವಿದ್ಯುತ್ ಸಂಸ್ಥೆಗಳು ಕೈಗೊಳ್ಳಲಿವೆ.

ಈ ಕಾರ್ಯಗಳು ಸಾಮಾನ್ಯವಾಗಿ ಬೆಳಗ್ಗೆ 10 ಗಂಟೆ ಮತ್ತು ಸಂಜೆ 5 ಗಂಟೆಯ ನಡುವೆ ನಡೆಯಲಿವೆ. ಹೀಗಾಗಿ ಈ ಸಮಯದಲ್ಲಿ ಬೆಂಗಳೂರಿನ ಹಲವು ಕಡೆ ವಿದ್ಯುತ್ ಸಮಸ್ಯೆ ಉಂಟಾಗುವ ನಿರೀಕ್ಷಿ ಇದೆ.

ನವೆಂಬರ್ 25ರ ಶನಿವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಬೈರನಹಳ್ಳಿ, ಹೊಸೂರು, ಮಿಂಡಾಪುರ, ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಬಾಬು ಜಗಜೀವನ ನಗರ, ರಾಜನಗರ, ವಿಜಯನಗರ, ದೇವರಾಜನಗರ ಮತ್ತು ಇತರ ಪ್ರದೇಶಗಳು. , ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ, ಕೊಣನೂರು, ಚಿಕ್ಕೇನಹಳ್ಳಿ, ಬಿ ಜಿ ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.

ಇದನ್ನೂ ಓದಿ: ಧಾರವಾಡ: ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ನವೆಂಬರ್ 26ರ ಭಾನುವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ರಾಮರಾಯನ ಪಾಳ್ಯ, ಬಿಟಿಎಸ್ ಮಿಲ್, ಕನ್ನಮಂಗಲ, ಕನ್ನಮಂಗಲ ಗೇಟ್, ನಾಗೇನಹಳ್ಳಿ, ಕೆಂಜಿಗಾನಹಳ್ಳಿ, ಕಮ್ಮಸಂದ್ರ, ಎಲ್ಲದಹಳ್ಳಿ, ತಿಮ್ಮಸಂದ್ರ, ವೊಡ್ಡಿಗೆರೆ, ಆಲೇನಹಳ್ಳಿ, ಬಿಲಂಕೋಟೆ ಏರಿಯಾ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ಜಿರಾಮಪ್ಪನನಹಳ್ಳಿ, ಜಿರಾಮಪ್ಪನಹಳ್ಳಿ ದೊಡ್ಡೇರಿ d ಇಂಡಸ್ಟ್ರಿ, Sk ಸ್ಟೀಲ್ ಕೈಗಾರಿಕೆ, ಯಡೇಹಳ್ಳಿ, ಭಾರತೀಪುರ, ಕೆ ಜಿ ಶ್ರೀನಿವಾಸಪುರ, ಕೆಂಗಲ್ಕೆಂಪೋಹಳ್ಳಿ, ಬಿಲ್ಲನಕೋಟೆ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಕೈಗಾರಿಕಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ನಗರ ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಸುರರ್‌ಹರಜನೇಶ್ವರ ದೇವಸ್ಥಾನದ ಹತ್ತಿರ, ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡವಣೆ, ಎಸ್‌ಜೆಎಂ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳು, ಹೆಡ್ ಪೋಸ್ಟ್ ಆಫೀಸ್ ರಸ್ತೆ, ಪಿ ಬಿ ರಸ್ತೆ, ಕೈಗಾರಿಕಾ ಪ್ರದೇಶ ರಸ್ತೆ, ಎಸ್‌ಜೆಮಿಟ್ ಸರ್ಕಲ್, ಖಾಸಗಿ ಬಸ್ಟಾಂಡ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ಟಾಂಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೊಂಡಹಳ್ಳಿ. ಪಿಲಾಲಿ ಮತ್ತು ರಂಗನಾಥಪುರ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?