ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿಗೆ ಕಾರಣರಾದರೆ ಕ್ರಮ; ಗೃಹ ಸಚಿವ ಆರಗ ಜ್ಞಾನೇಂದ್ರ
ಕಾಲೇಜುಗಳಲ್ಲಿ ಅಶಾಂತಿ ನಿರ್ಮಾಣವಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ ಆರಗ ಜ್ಞಾನೇಂದ್ರ, ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆ ಕೇಂದ್ರಬಿಂದು. ವಿದ್ಯಾರ್ಥಿಗಳು ರಾಷ್ಟ್ರದ ಆಸ್ತಿಯಾಗಬೇಕು.
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಹೆಚ್ಚಾಗುತ್ತಲೇ ಇದೆ. ಒಂದು ಕಡೆ ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ವಿದ್ಯಾರ್ಥಿನಿಯರು ಹೋರಾಟ ಮಾಡುತ್ತಿದ್ದರೆ, ಇನ್ನೊಂದು ಕಡೆ ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ಹಿಂದೂ ವಿದ್ಯಾರ್ಥಿಗಳು (Students) ಪಟ್ಟು ಹಿಡಿದಿದ್ದಾರೆ. ಇಬ್ಬರ ನಡುವಿನ ಸಂಘರ್ಷ ಇದೀಗ ಭುಗಿಲೆದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರರಿಂದ (Araga Jnanedra) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿಗೆ ಕಾರಣರಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಲೇಜುಗಳಲ್ಲಿ ಅಶಾಂತಿ ನಿರ್ಮಾಣವಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ ಆರಗ ಜ್ಞಾನೇಂದ್ರ, ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆ ಕೇಂದ್ರಬಿಂದು. ವಿದ್ಯಾರ್ಥಿಗಳು ರಾಷ್ಟ್ರದ ಆಸ್ತಿಯಾಗಬೇಕು. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಅಸ್ತ್ರಗಳಾಗದಂತೆ ಎಚ್ಚರವಹಿಸಿ. ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕು. ಶೈಕ್ಷಣಿಕ ಕೇಂದ್ರಗಳು, ವಿದ್ಯೆ ಕಲಿಯುವ ಹಾಗೂ ಬೋಧನೆಯ ದೇಗುಲಗಳಾಗಿಯೇ ಉಳಿಯಬೇಕು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕಿ ಖನೀಜಾ ಫಾತಿಮಾಗೆ ಈಶ್ವರಪ್ಪ ಸವಾಲ್:
ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವುದಾಗಿ ಹೇಳಿದ್ದ ಶಾಸಕಿ ಖನೀಜಾ ಫಾತಿಮಾ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಧಮ್ ಇದ್ದರೆ ಮಸೀದಿಗೆ ಮಹಿಳೆಯರಿಗೆ ಪ್ರವೇಶ ಕೊಡಿಸಿ. ನೀವು ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವುದಲ್ಲ. ಮೊದಲು ನೀವು ಮಸೀದಿಗೆ ಹೋಗಿ. ನಾವು ಶಾಲೆಗೆ ಮಾತ್ರ ಹಿಜಾಬ್ ನಿಷೇಧಿಸಿದ್ದೇವೆ. ಹೊರಗಡೆಗೆ ನಿಷೇಧ ಮಾಡಿಲ್ಲ ಎಂದು ಹೇಳಿದ್ದಾರೆ.
ಎಮ್ಎಲ್ಸಿ ಸಿಎಂ ಇಬ್ರಾಹಿಂ ಹೇಳಿಕೆ ವಿಕೃತಿಯಿಂದ ಕೂಡಿದೆ. ಇಬ್ರಾಹಿಂ ಮುಸ್ಲಿಂ ಮಹಿಳೆಯರಿಗೆ ಮಾಡಿದ ಅಪಮಾನ. ಅವರ ಮುಖ ನೋಡಲು ಹಿಜಾಬ್ ತೆಗೆಯಬೇಕಾ? ಸಿಎಂ ಇಬ್ರಾಹಿಂ ಹೇಳಿಕೆಯನ್ನು ಯಾರೂ ಒಪ್ಪುವಂಥದ್ದಲ್ಲ ಅಂತ ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ
ಮುಸ್ಲಿಂ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಹಿಂದೂ ಧಾರ್ಮಿಕ ಆಚರಣೆ; ಹಿಜಾಬ್ ಗಲಾಟೆ ನಡುವೆ ಮಾದರಿಯಾದ ಅಂತ್ಯ ಸಂಸ್ಕಾರ
ನದಿ ಜೋಡಣೆಗೆ ಬಸವರಾಜ ಬೊಮ್ಮಾಯಿ ವಿರೋಧ! ದೆಹಲಿಯಲ್ಲಿ ಸಿಎಂ ಹೇಳಿದ್ದೇನು?
Published On - 12:11 pm, Tue, 8 February 22