ರಾತ್ರಿ 2 ಗಂಟೆವರೆಗೆ ರೆಸ್ಟೋರೆಂಟ್, ಬಾರ್, ಪಬ್ ತೆರೆಯಲು ಹೋಟೆಲ್ ಮಾಲೀಕರ ಮನವಿ

| Updated By: ಆಯೇಷಾ ಬಾನು

Updated on: Jul 14, 2024 | 10:12 AM

ಬಾಡಿಗೆ, ಗ್ಯಾಸ್, ಸಿಬ್ಬಂದಿ ನಿರ್ವಹಣೆಗೆ ಹೆಚ್ಚು ವೆಚ್ಚ ಭರಿಸುತ್ತಿದ್ದೇವೆ. 18% ಹೆಚ್ಚಳ ಜಿಎಸ್​​ಟಿ ಕಟ್ಟುತ್ತಿದ್ದೇವೆ. ಉದ್ಯಮಕ್ಕೆ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಮಧ್ಯರಾತ್ರಿ 2 ಗಂಟೆವರೆಗೆ ಅವಧಿ ವಿಸ್ತರಣೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.

ರಾತ್ರಿ 2 ಗಂಟೆವರೆಗೆ ರೆಸ್ಟೋರೆಂಟ್, ಬಾರ್, ಪಬ್ ತೆರೆಯಲು ಹೋಟೆಲ್ ಮಾಲೀಕರ ಮನವಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ.14: ಪಬ್, ಬಾರ್​, ರೆಸ್ಟೋರೆಂಟ್​​ಗಳ ಲೈಸೆನ್ಸ್​ ಸಬಲೀಕರಣಕ್ಕೆ ಹೋಟೆಲ್ ಅಸೋಸಿಯೇಷನ್ (Hotel Association) ಮನವಿ ಮಾಡಿದೆ. ಮಧ್ಯರಾತ್ರಿ 2 ಗಂಟೆವರೆಗೆ ರೆಸ್ಟೋರೆಂಟ್, ಬಾರ್, ಪಬ್ ತೆರೆಯಲು ಅವಕಾಶ ನೀಡುವಂತೆ ಅಬಕಾರಿ ಸಚಿವರಿಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.

ಬಾಡಿಗೆ, ಗ್ಯಾಸ್, ಸಿಬ್ಬಂದಿ ನಿರ್ವಹಣೆಗೆ ಹೆಚ್ಚು ವೆಚ್ಚ ಭರಿಸುತ್ತಿದ್ದೇವೆ. 18% ಹೆಚ್ಚಳ ಜಿಎಸ್​​ಟಿ ಕಟ್ಟುತ್ತಿದ್ದೇವೆ. ಉದ್ಯಮಕ್ಕೆ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಮಧ್ಯರಾತ್ರಿ 2 ಗಂಟೆವರೆಗೆ ಅವಧಿ ವಿಸ್ತರಣೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. ಇನ್ನು ಮತ್ತೊಂದೆಡೆ ಈ ಹಿಂದೆ ಕೂಡ ಬಿಬಿಎಂಪಿ ವ್ಯಾಪ್ತಿಯ ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವ ಸಮಯವನ್ನು ವಿಸ್ತರಿಸುವಂತೆ ಹೋಟೆಲ್​ ಅಸೋಸಿಯೇಷನ್ ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು.

ಇದನ್ನೂ ಓದಿ: ಗಾಜಾದಲ್ಲಿ ಹಮಾಸ್​ ಸೇನಾ ಕಮಾಂಡರ್​ನ ಗುರಿಯಾಗಿಸಿಕೊಂಡು ಇಸ್ರೇಲ್​ ದಾಳಿ, 90 ಮಂದಿ ಸಾವು

ಎಲ್ಲ ಹೋಟೆಲ್​ಗಳ ಪ್ರಸ್ತುತ ಮುಚ್ಚುವ ಸಮಯವನ್ನು ಮಧ್ಯರಾತ್ರಿ 1 ಗಂಟೆಗೆ ಮಿತಿಗೊಳಿಸಲಾಗಿದೆ. ಸುಮಾರು 8 ರಿಂದ 10 ತಿಂಗಳ ಹಿಂದೆ ಎಲ್ಲಾ ಹೋಟೆಲ್​ಗಳಿಗೆ, ವಿಶೇಷವಾಗಿ ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳ ಬಳಿ ಇರುವವರಿಗೆ 24/7 ಸಮಯ ತೆರೆದಿಡಲು ವಿನಂತಿ ಮಾಡಿಕೊಂಡಿದ್ದೆವು. ಸಾಮಾನ್ಯವಾಗಿ ತಡರಾತ್ರಿಯವರೆಗೆ ಪ್ರಯಾಣಿಸುವ ಗ್ರಾಹಕರಿಗೆ ಸೇವೆ ನೀಡಲು ಪ್ರಸ್ತುತ ಸಮಯವನ್ನು 2 ಗಂಟೆಗೆ ಹೆಚ್ಚಿಸುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ