ಡೇಟಿಂಗ್ ಆ್ಯಪ್ ಬಳಸುವವರೆ ಸಾವಧಾನ್; ಹುಡುಗಿ ಹೆಸರಲ್ಲಿ ಕರೆಸಿಕೊಂಡು ಸುಲಿಗೆ, ಇಬ್ಬರು ಅರೆಸ್ಟ್

| Updated By: ಆಯೇಷಾ ಬಾನು

Updated on: Aug 28, 2023 | 11:34 AM

Dating App: ಆನ್ ಲೈನ್ ಡೇಟಿಂಗ್ ಆ್ಯಪ್ ಮೂಲಕ ಸುಲಿಗೆ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಹೆಚ್​ಎಸ್​ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನದೀಂ ಪಾಷ ಹಾಗೂ ನಾಗೇಶ್ ಬಂಧಿತ ಆರೋಪಿಗಳು. ಲೊಕ್ಯಾಂಟೋ ಆ್ಯಪ್ ಮೂಲಕ ಹುಡುಗಿ ಹೆಸರಿಲ್ಲಿ ಕಾಲ್ ಮಾಡಿ ಡೇಟಿಂಗ್ ನೆಪದಲ್ಲಿ ಕರೆಸಿ ಬಳಿಕ ಹಣ ದೋಚುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಡೇಟಿಂಗ್ ಆ್ಯಪ್ ಬಳಸುವವರೆ ಸಾವಧಾನ್; ಹುಡುಗಿ ಹೆಸರಲ್ಲಿ ಕರೆಸಿಕೊಂಡು ಸುಲಿಗೆ, ಇಬ್ಬರು ಅರೆಸ್ಟ್
ನಾಗೇಶ್, ನದೀಂ ಪಾಷ
Follow us on

ಬೆಂಗಳೂರು, ಆ.28: ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್​ಗಳನ್ನು(Dating App) ಬಳಸುವುದರಲ್ಲಿ ಬೆಂಗಳೂರು ಮುಂದಿದೆ. ಆದರೆ ಈಗ ಡೇಟಿಂಗ್ ಆ್ಯಪ್​ಗಳನ್ನು ಬಳಸುವವರು ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ ತಮ್ಮ ಬಾಳ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ ಮೊರೆ ಹೋಗುವ ಯುವಕರಿಗೆ ಮೋಸ ಆಗುತ್ತಿದೆ. ಆನ್ ಲೈನ್ ಡೇಟಿಂಗ್ ಆ್ಯಪ್ ಮೂಲಕ ಸುಲಿಗೆ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಹೆಚ್​ಎಸ್​ಆರ್ ಲೇಔಟ್ ಪೊಲೀಸರು(HSR Layout Police) ಬಂಧಿಸಿದ್ದಾರೆ. ನದೀಂ ಪಾಷ ಹಾಗೂ ನಾಗೇಶ್ ಬಂಧಿತ ಆರೋಪಿಗಳು. ಲೊಕ್ಯಾಂಟೋ ಆ್ಯಪ್ ಮೂಲಕ ಹುಡುಗಿ ಹೆಸರಿಲ್ಲಿ ಕಾಲ್ ಮಾಡಿ ಡೇಟಿಂಗ್ ನೆಪದಲ್ಲಿ ಕರೆಸಿ ಬಳಿಕ ಹಣ ದೋಚುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಸುಲಿಗೆ ಮಾಡ್ತಿದ್ದದ್ದು ಹೇಗೆ?

ಲೊಕ್ಯಾಂಟೋ ಆ್ಯಪ್ ಬಳಸುವರನ್ನೇ ಟಾರ್ಗೆಟ್ ಮಾಡಿದ್ದ ಈ ಆರೋಪಿಗಳು, ಮೊದಲು ಸುಂದರ ಅಪರಿಚಿತ ಯುವತಿಯರ ಫೋಟೋ ಹಾಕಿ ಹುಡುಗಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ತಿದ್ದರು. ಆ ಅಕೌಂಟ್ ನಿಂದ‌ ಮೊದಲಿಗೆ ಮೆಸೇಜ್ ಮಾಡಿ ಸಲುಗೆಯಿಂದ ಮಾತಾಡುತ್ತಿದ್ದರು. ಹುಡುಗ ಮರುಳಾದ ಅಂತ ಗೊತ್ತಾಗುತ್ತಿದ್ದಂತೆಯೇ ಒಂದು ಲೊಕೇಷನ್ ಕೊಟ್ಟು ಕರೆಸಿಕೊಳ್ಳುತ್ತಿದ್ದರು. ಎಪ್ಪಾ ದೇವರೆ ಹುಡುಗಿನೇ ಮಿಟ್ ಮಾಡೋಕೆ ಕರೆಯುತ್ತಿದ್ದಾಳೆ ಎಂದು ಖುಷ್ ಖುಷಿಯಾಗಿ ಹೋಗುತ್ತಿದ್ದ ಯುವಕರು ಬಲಿ ಪಶುಗಳಾಗುತ್ತಿದ್ದರು.

ಇದನ್ನೂ ಓದಿ: ತಂದೆ ಮೃತಪಟ್ಟರೂ ವಿದೇಶದಿಂದ ಬಾರದ ಮಕ್ಕಳು; ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಚಿಕ್ಕೋಡಿ ಪೊಲೀಸರು!

ಯುವಕ ಅಥವಾ ವ್ಯಕ್ತಿ ಯುವತಿ ಕಳಿಸಿದ ಲೊಕೇಷನ್​ಗೆ ಬರುತ್ತಿದ್ದಂತೆ ಲೋಕ್ಯಾಂಟೋ ಆ್ಯಪ್ ಸಂಪರ್ಕಿತ ವ್ಯಕ್ತಿ ಇವನೇನ ಎಂದು ಕನ್ಫರ್ಮ್ ಮಾಡಿಕೊಳ್ತಿದ್ದರು. ಆ ಬಳಿಕ ಚಾಕು ತೋರಿಸಿ ಆಟೋದಲ್ಲಿ ಕಿಡ್ನಾಪ್ ಮಾಡಿ ಸುಲಿಗೆ ಮಾಡುತ್ತಿದ್ದರು. ಹಣ, ಚಿನ್ನಾಭರಣ ಸುಲಿಗೆ ಮಾಡಿ, ಅಕೌಂಟ್​ನಿಂದಲೂ ಹಣ ಡ್ರಾ ಮಾಡಿಸಿಕೊಳ್ಳುತ್ತಿದ್ದರು. ಜೊತೆಗೆ ಸ್ನೇಹಿತರಿಗೆ ಕರೆ ಮಾಡಿ ಗೂಗಲ್ ಪೇ, ಫೋನ್ ಪೇ ಕೂಡ ಮಾಡಿಸಿಕೊಳ್ಳುತ್ತಿದ್ದರು. ರಾತ್ರಿಯಿಡೀ ಬಂಧನದಲ್ಲಿ ಇರಿಸಿ ಬೆಲೆಬಾಳುವ ವಸ್ತುಗಳ ಸುಲಿಗೆ ಮಾಡುತ್ತಿದ್ದರು. ಸುಮಾರು 15ಕ್ಕೂ ಅಧಿಕ ಜನರಿಗೆ ಹುಡುಗಿ ಹೆಸರಲ್ಲಿ ಮೆಸೇಜ್ ಮಾಡಿ ಕರೆಸಿ ಸುಲಿಗೆ ಮಾಡಿದ್ದಾರೆ.

ಇತ್ತೀಚೆಗೆ ಹೆಚ್​ಎಸ್​ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಆರೋಪಿಗಳು ಕೃತ್ಯ ಎಸಗಿದ್ದರು. ವ್ಯಕ್ತಿಯೊಬ್ಬನನ್ನ ಕರೆಸಿ 60 ಸಾವಿರ ಹಣ ಸುಲಿಗೆ ಮಾಡಿದ್ದರು. ಘಟನೆ ಸಂಬಂಧ ಸುಲಿಗೆಗೊಳಗಾದವರು ದೂರು ನೀಡಿದ್ದು ದೂರಿನ ಹಿನ್ನಲೆ ಕೇಸ್ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:55 am, Mon, 28 August 23