ವೀಕೆಂಡ್ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್, ನೂಕು ನುಗ್ಗಲಲ್ಲೇ ಫ್ಲವರ್ ಶೋ ವೀಕ್ಷಿಸಿದ ಪ್ರವಾಸಿಗರು

| Updated By: ಆಯೇಷಾ ಬಾನು

Updated on: Aug 18, 2024 | 8:37 AM

ಸಸ್ಯಕಾಶಿ ಲಾಲ್ ಬಾಗ್​ನಲ್ಲಿ ಒಂದು ವಾರದಿಂದ ಫ್ಲವರ್ ಶೋ ನಡೆಯುತ್ತಿದ್ದು, ಇಂದು ವೀಕೆಂಡ್ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ.‌ ವೀಕೆಂಡ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನೂಕು ನುಗ್ಗಲಲ್ಲೇ ಬಂದು ಸಾವಿರಾರು ಮಂದಿ ಫ್ಲವರ್ ಶೋ ವೀಕ್ಷಿಸಿದ್ದಾರೆ.

ವೀಕೆಂಡ್ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್, ನೂಕು ನುಗ್ಗಲಲ್ಲೇ ಫ್ಲವರ್ ಶೋ ವೀಕ್ಷಿಸಿದ ಪ್ರವಾಸಿಗರು
ಲಾಲ್ ಬಾಗ್ ಪ್ಲವರ್ ಶೋ
Follow us on

ಬೆಂಗಳೂರು, ಆಗಸ್ಟ್​.18: ಸಸ್ಯಕಾಶಿ ಲಾಲ್ ಬಾಗ್​ನಲ್ಲಿ 8 ದಿನದಿಂದ ಫ್ಲವರ್ ಶೋ ನಡೆಯುತ್ತಿದ್ದು(Lalbagh Flower Show), ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಇಂದು ವೀಕೆಂಡ್ ಇರುವ ಹಿನ್ನೆಲೆ ಅಂಬೇಡ್ಕರ್ ಫ್ಲವರ್ ಶೋ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಹೀಗಾಗಿ ಲಾಲ್ ಬಾಗ್​ನಲ್ಲಿ ಎಲ್ಲಿ ನೋಡಿದ್ರು ಜನರೇ ಕಾಣುಸ್ತಾ ಇದ್ದಾರೆ. ಫ್ಲವರ್ ಶೋ ವೀಕ್ಷಿಸಲು ಜನರು ಇಂದು ಹೈರಾಣಾಗಿದ್ದಾರೆ.

ಈ ಬಾರಿ ಸ್ವತಂತ್ರ ದಿನಾಚರಣೆಯ ಪ್ರಯುಕ್ತವಾಗಿ ಡಾ ಬಿ.ಆರ್. ಅಂಬೇಡ್ಕರ್ ಅವರ ಥೀಮ್​ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಈ ಫ್ಲವರ್ ಶೋ ಆಗಸ್ಟ್ 19 ರವರೆಗೂ ಇರಲಿದ್ದು, ಇಂದು ಭಾನುವಾರವಾಗಿರುವ ಕಾರಣ ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ‌ಮಾಡಿಕೊಡಲಾಗಿದೆ. ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಪ್ರವಾಸಿಗರು ಫ್ಲವರ್ ಶೋ ಗೆ ಬರುತ್ತಿದ್ದಾರೆ. ಹೀಗಾಗಿ ಲಾಲ್ ಬಾಗ್​ನಲ್ಲಿ‌ ಎಲ್ಲಿ ನೋಡಿದ್ರು ಜನರೆ ಕಾಣುಸ್ತಾ ಇದ್ದಾರೆ.

ಅಂದಹಾಗೇ ಈ ವರ್ಷದ ಫ್ಲವರ್ ಶೋ ನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ, ಹಳೆಯ ಸಂಸತ್ ಭವನ, ಅಂಬೇಡ್ಕರ್ ಅವರ ಜನ್ಮ ಭೂಮಿ, ಅಂಬೇಡ್ಕರ್ ಅವರ ಪುಣ್ಯಭೂಮಿ, ರಾಜಗೃಹ, ಬೌದ್ದ ಧರ್ಮದ ಸ್ವೀಕಾರ ಸಂದರ್ಭ ಸೇರಿದಂತೆ ಅಂಬೇಡ್ಕರ್ ಅವರು ಹುಟ್ಟಿ, ಬೆಳೆದು ಬಂದ ಹಾದಿಯನ್ನ ಫ್ಲವರ್ ಶೋನಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಅಂಬೇಡ್ಕರ್ ಅವರ ಫ್ಲವರ್ ಶೋಗೆ ಜನರು ಫುಲ್ ಫಿದಾ ಆಗಿದ್ದಾರೆ. ಇನ್ನು ಫ್ಲವರ್ ಶೋ‌ನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಕಂಗೊಳಿಸುತ್ತಿದ್ದು, ಆರ್ಕಿಡ್, ಲಿಲ್ಲಿ, ಸುಗಂಧರಾಜ, ಬೆರಾ, ರೆಡ್ ಹಾರ್ಟ್, ನಂದಿನಿರಿಧಾಮ ಇಂಪೆಷನ್ಸ್, ಕೋಲಾಂಬಿಯಾ, ಆಂಥೋರಿಯಮ್, ನೆದರ್ ಲ್ಯಾಂಡ್ ನಾ ಬೆಲ್ಜಿಯಂ ಹೂಗಳು ನೋಡುಗರನ್ನ ಸೆಳೆಯುತ್ತಿವೆ.

ಇದನ್ನೂ ಓದಿ: ಕೃಷ್ಣಭೈರೇಗೌಡ ಟ್ವೀಟ್​ಗೆ ಸ್ಪಂದನೆ: ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಆರಂಭ, ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್​​

ಕಳೆದ 8 ದಿನದಿಂದ ಫ್ಲವರ್ ಶೋಗೆ ಒಟ್ಟು 5 ಲಕ್ಷದಷ್ಟು ಜನರು ವಿಸಿಟ್ ಮಾಡಿದ್ದು, ಒಟ್ಟು 2 ಕೋಟಿಯಣ್ಟು ಹಣ ಕಲೆಕ್ಟ್ ಆಗಿದೆ. ಇನ್ನು ನಿನ್ನೆ ಒಂದೇ ದಿನ 70 ಸಾವಿರಕ್ಕು ಹೆಚ್ಚು ಜನರು ವಿಸಿಟ್ ಮಾಡಿದ್ದಾರೆ. ಇನ್ನು ಫ್ಲವರ್ ಶೋಗೆ ಬರುವವರಿಗೆ ನಾಲ್ಕು ಗೇಟ್ ಗಳಲ್ಲಿ ಎಂಟ್ರಿ ನಿಗದಿ‌ ಮಾಡಿದ್ದು, ಹೆಚ್ಚಿನ ಪೊಲೀಸರು, ಹೋಮ್ ಗಾರ್ಡ್ಸ್, ಲಾಲ್ ಬಾಗ್ ಸಿಬ್ಬಂದಿಗಳನ್ನ ಕೂಡ ನಿಯೋಜನೆ ಮಾಡಲಾಗಿದೆ. ಲಾಲ್ ಬಾಗ್ ಮೆಟ್ರೋ ಸ್ಟೇಷನ್ ವರೆಗೂ ಅಂಬೇಡ್ಕರ್ ಥೀಮ್ ಗೆ ಗುಡ್ ರೆಸ್ಪಾನ್ಸ್ ಸಿಗ್ತಿದೆ. ಇನ್ನು, ಇಂದು ಭಾನುವಾರವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಲಾಲ್ ಬಾಗ್ ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಒಟ್ನಲ್ಲಿ, ಲಾಲ್ ಬಾಗ್ ಫ್ಲವರ್ ಶೋ ಇನ್ನು ಎರಡು ದಿನಗಳ ಕಾಲ ಇರಲಿದ್ದು, ಸೋಮವಾರ ಕೊನೆಯಾಗಲಿದೆ, ಜನರು ಬಂದು ಫ್ಲವರ್ ಶೋ ವೀಕ್ಷಿಸಬಹುದಾಗಿದ್ದು, ಫ್ಲವರ್ ಶೋಗೆ ಬರುವವರಿಗೆ ದೊಡ್ಡವರಿಗೆ 80 ರೂ ಮಕ್ಕಳಿಗೆ 30 ರೂ ನಿಗದಿ ಮಾಡಲಾಗಿದೆ. ಫ್ಲವರ್ ಶೋ‌ನಲ್ಲಿ ಬಗೆ ಬಗೆಯ ಹೂಗಳನ್ನ ಕಣ್ತುಂಬಿಕೊಳ್ಳಬಹುದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:33 am, Sun, 18 August 24