ಬೆಂಗಳೂರು, ಜನವರಿ 23: ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ನಾಗರಭಾವಿಯ ಎನ್ಜಿಎಫ್ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ ಪತಿ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ 2013 ರಲ್ಲಿ ನಯನ ಮದುವೆಯಾಗಿದ್ದ. ದಂಪತಿಗೆ 9 ವರ್ಷದ ಮಗ ಕೂಡ ಇದ್ದಾನೆ. ಆದರೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆ ದಂಪತಿ ಡಿವೋರ್ಸ್ ಮೊರೆ ಹೋಗಿದ್ದರು. 2022 ಕ್ಕೆ ಡಿವೋರ್ಸ್ಗೆ ಅಪ್ಲೈ ಮಾಡಿದ್ದರು.
ಇದನ್ನೂ ಓದಿ: ಅನೈತಿಕ ಚಟುವಟಿಕೆ ಆರೋಪ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ
ಈ ಮಧ್ಯೆ ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್ಜಿಎಫ್ ಲೇಔಟ್ನಲ್ಲಿರುವ ಹೆಂಡತಿ ಮನೆಗೆ ಬಂದಿದ್ದರು. ಹೆಂಡತಿ ವಾಸವಿದ್ದ ಮನೆ ಬಳಿ 8 ಗಂಟೆಗೆ ಮಂಜುನಾಥ್ ತೆರಳಿದ್ದು, ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು ನಯನ ಹೇಳಿದ್ದಾರೆ. ಈ ವೇಳೆ ನಡೆದ ಜಗಳದಿಂದ ಪೆಟ್ರೋಲ್ ತಂದು ಮಂಜುನಾಥ್ ಬೆಂಕಿ ಹಚ್ಚಿಕೊಂಡಿದು ಆತ್ಮಹತ್ಯೆ ಮಾಡಿದ್ದಾರೆ.
ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಯಮನಾಪುರ ಹೊರವಲಯದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಶಿರೂರಿನ ಸರೋಜಾ ಕಿರಬಿ(52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೈನಾನ್ಸ್ನಲ್ಲಿ ಸಬ್ಸಿಡಿಗೆ 2.30 ಲಕ್ಷ ರೂ. ಸಾಲ ಕೊಡಿಸಿದ್ದ ಹೊಳೆಪ್ಪ ದಡ್ಡಿ, ಅರ್ಧದಷ್ಟು ಹಣ ನನಗೆ ಕೊಟ್ಟರೆ ಸಾಲ ಕಟ್ಟುವುದಾಗಿ ಹೇಳಿದ್ದರು. ಆತನ ನಂಬಿ ಸಾಲ ಪಡೆದು ಅರ್ಧದಷ್ಟು ಹಣ ನೀಡಿದ್ದ ಸರೋಜಾ. ಅರ್ಧ ಸಾಲ ಕಟ್ಟಿದ ಬಳಿಕ ಫೈನಾನ್ಸ್ನಿಂದ ಪೂರ್ತಿ ಸಾಲ ಕಟ್ಟಲು ಸೂಚಿಸಲಾಗಿದೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಈ ವೇಳೆ ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದಿದ್ದ ಸರೋಜಾ, ತಾವು ಸಬ್ಸಿಡಿಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಿ ಅಂತಾ ನಿತ್ಯ ಕಿರುಕುಳ ಕೊಟ್ಟಿದ್ದಾರೆ. ಸಾಲಕಟ್ಟದೆ ಸರೋಜಾಗೆ ಹೊಳೆಪ್ಪ ದಡ್ಡಿ ಕೂಡ ವಂಚಿಸಿದ್ದ. ಇದರಿಂದ ಬೇಸತ್ತು ಬಾವಿಗೆ ಹಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಹೊಳೆಪ್ಪನ ವಿರುದ್ಧ ಕೂಡ ಕೇಸ್ ದಾಖಲಾಗಿದೆ.
ವರದಿ: ಪ್ರದೀಪ್ ಕ್ರೈಂ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:59 pm, Thu, 23 January 25