AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ -ಹೆಚ್​ಡಿ ರೇವಣ್ಣ

ವಿಧಾನಸಭೆಯಲ್ಲಿ ಚರ್ಚೆ ವೇಳೆ ಹೆಚ್​ಡಿ ರೇವಣ್ಣ ಅರೆಸ್ಟ್ ಆದ ಬಗ್ಗೆ ಪ್ರಸ್ತಾಪವಾಗಿದ್ದು ಈ ವೇಳೆ ಹೆಚ್​ಡಿ ರೇವಣ್ಣ ಸಿಟ್ಟಿಗೆದ್ದ ಘಟನೆ ನಡೆದಿದೆ. ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ. ನಾನು ವಹಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ಎಂದು ಸದನದಲ್ಲಿ ಗದ್ಗದಿತರಾದಂತಾಗಿ ಏರುಧ್ವನಿಯಲ್ಲಿ ಮಾತನಾಡಿದ್ದಾರೆ.

ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ -ಹೆಚ್​ಡಿ ರೇವಣ್ಣ
ಮಾಜಿ ಸಚಿವ ಹೆಚ್​ಡಿ ರೇವಣ್ಣ
ಕಿರಣ್​ ಹನಿಯಡ್ಕ
| Updated By: ಆಯೇಷಾ ಬಾನು|

Updated on: Jul 16, 2024 | 1:19 PM

Share

ಬೆಂಗಳೂರು, ಜುಲೈ.16: ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದೂ ಸಹ ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣ ಸದ್ದು ಮಾಡಿದೆ. ಚರ್ಚೆ, ವಾದ-ವಿವಾದಗಳು ಮುಂದುವರೆದಿವೆ. ಇದೆಲ್ಲದರ ನಡುವೆ ವಿಧಾನಸಭೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ (HD Revanna) ಮಾತನಾಡಿದ್ದು ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ. ನಾನು ವಹಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ಎಂದಿದ್ದಾರೆ.

ನನ್ನ ಮೇಲೆ ಯಾರೋ ಆರೋಪ ಮಾಡ್ತಿದ್ದಾರೆ. ಹೆಣ್ಣು ಮಗಳನ್ನು ಕರೆದುಕೊಂಡು ಬಂದು ಡಿಜಿ ಕಚೇರಿಯಲ್ಲಿ ಡಿಜಿ ದೂರು ಬರೆಸಿಕೊಳ್ಳುತ್ತಾನೆ ಅಂದರೆ ಅವನು ಡಿಜಿ ಆಗಲು ಲಾಯಕ್ಕಾ? ಎಂದು ಸದನದಲ್ಲಿ ಗದ್ಗದಿತರಾದಂತಾಗಿ ಏರುಧ್ವನಿಯಲ್ಲಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬಹಳ ಅನ್ಯಾಯ ಆಗಿದ್ದರೆ ನೊಟೀಸ್ ಕೊಡಿಸಿ ಚರ್ಚೆ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಕುಮಾರಸ್ವಾಮಿ ಕಾವೇರಿ ನೀರು ವಿವಾದದ ಬಗ್ಗೆ ಯಾವತ್ತೂ ಸೀರಿಯಸ್ಸಾಗಿಲ್ಲ: ಡಿಕೆ ಶಿವಕುಮಾರ್

ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದ ಅಶೋಕ್

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಧಾನಸಭೆಯುಲ್ಲಿ ಪ್ರಸ್ತಾಪ ಮಾಡಿದ ವಿರೋಧ ಪಕ್ಷದ ನಾಯಕ ಅಶೋಕ್, ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದರು. ವಾಲ್ಮೀಕಿ ನಿಗಮ ಕೇಸ್​ನಲ್ಲಿ ನೋಟಿಸ್ ಕೊಟ್ಟು ಕರೆದೇ ಇಲ್ಲ. ರೇವಣ್ಣ, ಭವಾನಿ ಪ್ರಕರಣದಲ್ಲಿ ಎಸ್​ಐಟಿ ತುಂಬಾ ಸ್ಟ್ರಾಂಗ್​ ಇದ್ರು. ಎಷ್ಟು ಸ್ಟ್ರಾಂಗ್ ಅಂದರೆ ಎರಡೇ ದಿನದಲ್ಲಿ ಅರೆಸ್ಟ್​ ಮಾಡಿದರು. ಮಾಜಿ ಶಾಸಕ ಪ್ರೀತಂಗೌಡ ಕೇಸ್​ನಲ್ಲೂ ಹಾಗೆ ಆಯಿತು. ವಾಲ್ಮೀಕಿ ನಿಗಮ ಕೇಸ್​ನಲ್ಲಿ ಇನ್ನೂ ನೋಟಿಸ್ ಸಹ ಕೊಟ್ಟಿಲ್ಲ. ಎಸ್​ಐಟಿ ಕಚೇರಿಯಲ್ಲಿ 8 ಗಂಟೆಗಳ ಕಾಲ ಕೂರಿಸಿದ್ದರು. ಏನು ವಾಲ್ಮೀಕಿ ರಾಮಾಯಣ ಓದಲು ಕೂರಿಸಿದ್ದರಾ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಪ್ರಶ್ನೆ ಮಾಡಿದರು.

ಇದೇ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದ ಅಶೋಕ್, ಹಾಗಾದರೆ ರೇವಣ್ಣ ಪ್ರಕರಣ ಇದಕ್ಕಿಂತ ಕಡಿಮೆಯಾ? ಎಂದು ಪ್ರಶ್ನೆ ಮಾಡಿದರು. ಈ ಪ್ರಕರಣ ಇಡೀ ಪ್ರಪಂಚಕ್ಕೆ ಮುಜುಗರ ಆಗಿದೆ ಎಂದು ಸದನದಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್