ED ದಾಳಿ ಬಗ್ಗೆ ನನಗೂ ಅನುಭವ ಇದೆ; ಜಮೀರ್ ಜೊತೆ ಹಂಚಿಕೊಳ್ಳುವೆ; ಸಾರ್ವಜನಿಕವಾಗಿ ಮಾತನಾಡೊಲ್ಲ-ಡಿಕೆ ಶಿವಕುಮಾರ್
ED ಅಧಿಕಾರಿಗಳ ದಾಳಿಯ ಬಗ್ಗೆ ನನಗೂ ಅನುಭವ ಇದೆ. ಜಮೀರ್ ಬಂದರೆ ಅದನ್ನೆಲ್ಲಾ ಅವರ ಜೊತೆ ಹಂಚಿಕೊಳ್ಳುವೆ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ED ದೂರು ನೀಡಿರುವ ಬಗ್ಗೆ ಯಾರು ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಕೊಟ್ಟವರ ಬಳಿಯೇ ದೂರಿನ ಬಗ್ಗೆ ಕೇಳಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಜಮೀರ್ ಅಹ್ಮದ್(Zameer Ahmed Khan) ಆಸ್ತಿಪಾಸ್ತಿ ಸಂಬಂಧಿಸಿ ಇ.ಡಿ ಅಧಿಕಾರಿಗಳು ಜಮೀರ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು ಮತ್ತಷ್ಟು ದಾಖಲೆ ಕೇಳಿದ್ದಾರೆ. ಈ ಸಂಬಂಧ ನಿನ್ನೆ ಜಮೀರ್ ಹೇಳಿಕೆಗಳನ್ನು ನೀಡಿದ್ದರು. ಸದ್ಯ ಈಗ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಕೂಡ ಮಾತನಾಡಿದ್ದು ಜಮೀರ್ ಮನೆ ಮೇಲೆ ED ದಾಳಿಗೂ ನನಗೂ ಸಂಬಂಧವಿಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ED ಅಧಿಕಾರಿಗಳ ದಾಳಿಯ ಬಗ್ಗೆ ನನಗೂ ಅನುಭವ ಇದೆ. ಜಮೀರ್ ಬಂದರೆ ಅದನ್ನೆಲ್ಲಾ ಅವರ ಜೊತೆ ಹಂಚಿಕೊಳ್ಳುವೆ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ED ದೂರು ನೀಡಿರುವ ಬಗ್ಗೆ ಯಾರು ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಕೊಟ್ಟವರ ಬಳಿಯೇ ದೂರಿನ ಬಗ್ಗೆ ಕೇಳಬೇಕು. ನನಗೂ ಅದಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಶಾಸಕ ಜಮೀರ್ ಅಹ್ಮದ್ ಖಾನ್ ನಮ್ಮ ಪಕ್ಷದ ನಾಯಕ. ಅವರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಕಾನೂನು ವಿಚಾರದ ಬಗ್ಗೆ ಜಮೀರ್ ಅಹ್ಮದ್‌ಗೆ ಹೇಳಿದ್ದೇನೆ ಎಂದು ಹೇಳಿದರು.
ನಿನ್ನೆ ಮಾತನಾಡಿದ ಜಮೀರ್, ಮನೆ ವಿಚಾರವಾಗಿ ದಾಳಿ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶೀವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೂ ED ದಾಳಿ ಆಗಿತ್ತು. ಹಾಗಾದರೆ ಡಿಕೆಶಿಗೂ ಐಎಂಎಗೂ ಸಂಬಂಧ ಇತ್ತಾ? ಎಂದು ಡಿ.ಕೆ.ಶಿವಕುಮಾರ್‌ಗೆ ಜಮೀರ್ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ಮನೆ ಲೆಕ್ಕಾಚಾರ, ಒಳಾಂಗಣ ವಿನ್ಯಾಸದ ಬಗ್ಗೆ ವಿವರ ನೀಡುವುದಕ್ಕೆ 10 ದಿನ ಕಾಲಾವಕಾಶ ಕೇಳಿದ್ದೇನೆ: ಕಾಂಗ್ರೆಸ್ ಶಾಸಕ ಜಮೀರ್