AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ವರ್ಷವಾದ್ರೂ ಕಂಪ್ಲೀಟ್ ಆಗದ ಬಿಬಿಎಂಪಿ ಸಮುದಾಯ ಭವನ,ನಿರಾಶ್ರಿತರು, ಅಕ್ರಮ ಚಟುವಟಿಕೆ ತಾಣವಾದ ಕೋಟಿ ವೆಚ್ಚದ ಕಟ್ಟಡ

ಅದು ಅಲ್ಲಿನ ಬಡ-ಮಧ್ಯಮ ವರ್ಗದ ಜನರಿಗೆ ಸಹಾಯವಾಗಲಿ ಅಂತಾ ಕೈಗೆತ್ತಿಕೊಂಡಿದ್ದ ಕಾಮಗಾರಿ. ಮಂಗಳ ವಾದ್ಯ ಮೊಳಗಬೇಕಿದ್ದ ಆ ಜಾಗದಲ್ಲಿ ಇದೀಗ ರಾತ್ರಿಯಾದ್ರೆ ಸಾಕು ಗುಂಡು-ತುಂಡಿನ ಸಾಮ್ರಾಜ್ಯ ತೆರೆದುಕೊಳ್ತಿದೆ. ಕೋಟಿ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಯನ್ನ ಪಾಲಿಕೆ ಅರ್ಧಕ್ಕೆ ಕೈಬಿಟ್ಟಿದ್ದು, ನಿರಾಶ್ರಿತರಿಗೆ, ಅಕ್ರಮ ಚಟುವಟಿಕೆಗಳಿಗೆ ಹಾಟ್ ಸ್ಪಾಟ್ ಆಗಿದೆ.

2 ವರ್ಷವಾದ್ರೂ ಕಂಪ್ಲೀಟ್ ಆಗದ ಬಿಬಿಎಂಪಿ ಸಮುದಾಯ ಭವನ,ನಿರಾಶ್ರಿತರು, ಅಕ್ರಮ ಚಟುವಟಿಕೆ ತಾಣವಾದ ಕೋಟಿ ವೆಚ್ಚದ ಕಟ್ಟಡ
ಬಿಬಿಎಂಪಿ ಸಮುದಾಯ ಭವನ
TV9 Web
| Updated By: ಆಯೇಷಾ ಬಾನು|

Updated on: Feb 03, 2024 | 2:45 PM

Share

ಬೆಂಗಳೂರು, ಫೆ.03: ಸಿಲಿಕಾನ್ ಸಿಟಿ ಬೆಂಗಳೂರಿನ ಪುಲಕೇಶಿನಗರದ ಕಾಕ್ಸ್ ಟೌನ್ ಸರ್ಕಲ್ ಬಳಿ ಬಿಬಿಎಂಪಿ (BBMP) ನಿರ್ಮಿಸುತ್ತಿರೋ ಸಮುದಾಯ ಭವನದ ದುಸ್ಥಿತಿ ಹೇಳತೀರದ್ದು. ಅರೆಬರೆ ಕಾಮಗಾರಿಯ ಮಧ್ಯೆ ಅಲ್ಲಲ್ಲಿ ಬಟ್ಟೆಗಳು ನೇತಾಡ್ತಿವೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಆಲ್ಕೋಹಾಲ್ ಬಾಟಲ್ ಗಳು ಬಿದ್ದಿವೆ. ಪಾಳು ಕಟ್ಟಡ ಎಂಬಂತಿದೆ ಬಿಬಿಎಂಪಿ ಸಮುದಾಯ ಭವನ.

ಕಳೆದ ಎರಡು ವರ್ಷಗಳ ಹಿಂದೆ ಇದೇ ಜಾಗದಲ್ಲಿದ್ದ ಹಳೇ ಸಮುದಾಯ ಭವನ ಬೀಳಿಸಿ ಸುಮಾರು 200ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು, ಆದ್ರೆ ಶೇಕಡ 50 ರಷ್ಟು ಕಾಮಗಾರಿ ಮಾತ್ರ ಮಾಡಿರೋ ಬಿಬಿಎಂಪಿ, ಅನುದಾನದ ಕೊರತೆ ನೆಪವೊಡ್ಡಿ ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿದೆ. ಸದ್ಯ ಅರ್ಧಂಬರ್ಧ ಕಟ್ಟಿರೋ ಬಿಲ್ಡಿಂಗ್ ನಲ್ಲಿ ಕಾರ್ಮಿಕರಲ್ಲದೇ ಬೇರೆ ನಿರಾಶ್ರಿತರು ಕೂಡ ಆಶ್ರಯ ಪಡೆದಿದ್ದು, ಜೂಜು, ಕುಡಿತದ ತಾಣವಾಗಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಧಾರವಾಡ: ಹಿಂದೂ ಎಂಬ ಕಾರಣಕ್ಕೆ ತರಕಾರಿ ಮಾರುವುದಕ್ಕೆ ಬಂದ ರೈತನ ಮೇಲೆ ಹಲ್ಲೆ

ಇನ್ನು ಕಾಕ್ಸ್ ಟೌನ್, ಫ್ರೇಜರ್ ಟೌನ್, ಪುಲಕೇಶಿನಗರ ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಇದ್ದ ಇದೊಂದೆ ಸಮುದಾಯ ಭವನ ಈಗ ಇದ್ದು ಇಲ್ಲದಂತಾಗಿದೆ. ಎರಡು ವರ್ಷವಾದ್ರೂ ಸಮುದಾಯ ಭವನ ರೆಡಿಯಾಗದಿರೋದರಿಂದ ದುಬಾರಿ ಹಣ ಕೊಟ್ಟು ಬೇರೆಡೆ ಸಮಾರಂಭ ಮಾಡ್ತಿರೋ ಜನರು, ಆದಷ್ಟು ಬೇಗ ಕಾಮಗಾರಿ ಮುಗಿಸಿ ಅಂತಾ ಮನವಿ ಮಾಡ್ತಿದ್ದಾರೆ. ಇತ್ತ ಕಾಮಗಾರಿ ಅರ್ಧಂಬರ್ಧ ಆಗಿದೆ, ನಿರಾಶ್ರಿತರೆಲ್ಲ ಇದ್ದಾರೆ ಏನಿದರ ಕತೆ ಅಂತಾ ಬಿಬಿಎಂಪಿ ಆಯುಕ್ತರನ್ನ ಕೇಳಿದ್ರೆ, ಕಟ್ಟಡ ಅರ್ಧಕ್ಕೆ ನಿಂತಾಗ ಜನರು ಬರೋದು ಕಾಮನ್, ಆದಷ್ಟು ಬೇಗ ಕೆಲಸ ಶುರು ಮಾಡಿಸೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಿನಲ್ಲಿ ಕೋಟಿ ಕೋಟಿ ಹಣ ಮೀಸಲಿಟ್ಟು ಕಾಮಗಾರಿ ಆರಂಭಿಸೋ ಪಾಲಿಕೆ, ಕಾಮಗಾರಿ ಅರ್ಧಂಬರ್ಧ ಆದ್ರೂ ಅತ್ತ ತಲೆಹಾಕದೇ ಸೈಲೆಂಟ್ ಆಗಿದೆ. ಅತ್ತ ಅರೆಬರೆ ಕಟ್ಟಡವನ್ನೇ ಮನೆ ಮಾಡಿಕೊಂಡಿರೋ ಜನರು ಬಿಬಿಎಂಪಿಯ ಜಾಗದಲ್ಲಿ ಅಕ್ರಮ ಚಟುವಟಿಕೆ ಮಾಡಿಕೊಂಡು ಆರಾಮಾಗಿದ್ದಾರೆ. ಸದ್ಯ ಸಮಸ್ಯೆ ಬಗೆಹರಿಸೋ ಭರವಸೆ ಕೊಟ್ಟಿರೋ ಆಯುಕ್ತರು ಯಾವಾಗ ಕಾಮಗಾರಿಗೆ ವೇಗ ನೀಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ