ಬೆಂಗಳೂರು, ಫೆಬ್ರವರಿ 24: ನರ್ಸಿಂಗ್ ಕ್ಷೇತ್ರದಲ್ಲಿ ಅಗಾದವಾದ ಸೇವೆ ಸಲ್ಲಿಸಿ ಅನುಪಮ ಸೇವೆಗೆ ಮೀಸಲಿರುವ ‘ಶ್ರೀನಗರೀಂದ್ರ ಅಂತರರಾಷ್ಟ್ರೀಯ ಪುರಸ್ಕಾರ’ಕ್ಕೆ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ.ದಿಲೀಪ್‌ಕುಮಾರ್ (Dr T DilipKumar) ಅವರು ಭಾಜನರಾಗಿದ್ದಾರೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಕಳೆದ ವರ್ಷದ ನಡೆದ ಸಮಾರಂಭದಲ್ಲಿ ರಾಣಿ ಮಹಾ ಚಕ್ರಿ ಸಿರಿಂದೋರ್ನ್ 2023ನೇ ಸಾಲಿನ ಪುರಸ್ಕಾರವನ್ನು ಡಾ ದಿಲೀಪ್‌ಕುಮಾರ್ ಅವರಿಗೆ ಪ್ರದಾನ ಮಾಡಿದ್ದಾರೆ. ನರ್ಸಿಂಗ್ ಕ್ಷೇತ್ರದ ಸಾಧನೆ ಹಾಗೂ ಸಿಕ್ಕ ಗೌರವ ಪ್ರಶಸ್ತಿ ಹಿನ್ನೆಲೆ ಡಾ. ದಿಲೀಪ್ ಕುಮಾರ್ ನಾಗರಿಕ ಅಭಿನಂದನಾ ಸಮಿತಿಯಿಂದ ಹಾಗೂ ತರಬೇತಿ ನರ್ಸಿಂಗ್ ಆಪ್ ಇಂಡಿಯಾ ಕರ್ನಾಟಕ ಸಂಸ್ಥೆಯಿಂದ ಖಾಸಗಿ ಹೋಟೆಲ್ನಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಿಡಿಸಲಾಗಿತ್ತು.
ದಿಲೀಪ್‌ಕುಮಾರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದವರು. ನರ್ಸಿಂಗ್ ಶಿಕ್ಷಣ ಪಡೆದ ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ ಸೇರಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನರ್ಸಿಂಗ್ ಉಪ ಸಲಗೆಗಾರರಾಗಿ ದೆಹಲಿಯಲ್ಲಿ ಸೇವೆಗೆ ಸೇರಿದ್ದಾರೆ. ಕೆಲ ವರ್ಷಗಳಿಂದ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ನರ್ಸಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧ್ಯನೆ, ಬದ್ಧತೆ ಮತ್ತು ತಮ್ಮನ್ನು ತಾವು ಶುಶ್ರೂಷೆಗೆ ಕೆಲಸಕ್ಕೆ ಅಪರ್ಣೆ ಮಾಡಿಕೊಂಡು ಕಳೆದ 49 ವರ್ಷಗಳಿಂದ ಭಾರತೀಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸಿರುವ ದಿಲೀಪ್ ಕುಮಾರ್ ಮಾತನಾಡಿದ್ದು, ಸಿಕ್ಕ ಗೌರವ ಹಾಗೂ ಪ್ರಶಸ್ತಿಯ ಅಭಿನಂಧನೆಗೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ನರ್ಸಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಅಭಿವೃದ್ಧಿಯ ಅವಶ್ಯಕತೆ ಇದೆ. ಜೊತೆಗೆ ನರ್ಸಿಂಗ್ ಸಿಬ್ಬಂದಿಗಳಿಲ್ಲದೆ ಆಸ್ಪತ್ರೆಗಳೆ ಇರಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿಯಲ್ಲಿ ಕ್ಯೂಆರ್ ಕೋಡ್ ಸೌಲಭ್ಯ; ಡಿಜಿಟಲ್ ಪೇಮೆಂಟ್ಗೆ ಭರ್ಜರಿ ರೆಸ್ಪಾನ್ಸ್
ಕಾರ್ಯಕ್ರಮದಲ್ಲಿ ರಾಜೀವ ಗಾಂಧೀ ಆರೋಗ್ಯ ವಿವಿ ಕುಲಪತಿ ರಮೇಶ್ ಕುಮಾರ್, ಭಾರತೀಯ ಹೋಮಿಯೋಪತಿ ಕೌನ್ಸಿಲ್ ಅಧ್ಯಕ್ಷ ರುದ್ರಮೂರ್ತಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಡಾ. ದಿಲೀಪ್ ಕುಮಾರ್ ಸಾಧನೆ ಬಗ್ಗೆ ಸಾಕಷ್ಟು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಳೆದ 50 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ದಿಲೀಪ್ ಕುಮಾರ್ ಸಲ್ಲಿಸಿರುವ ಸೇವೆಗೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.