AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಬ್​ಗೆ ನುಗ್ಗಿ ನೈತಿಕ ಪೊಲೀಸ್​ಗಿರಿ ಮಾಡುತ್ತಿದ್ದವರನ್ನ ವಶಕ್ಕೆ ಪಡೆದ ಪೊಲೀಸರು

ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಪಬ್​ಗೆ ನುಗ್ಗಿ ಕರ್ನಾಟಕ ಕಾರ್ಮಿಕರ ಪರಿಷತ್ ಸಂಘಟನೆಯಿಂದ ದಾಳಿಗೆ ಯತ್ನ ಮಾಡಿದ್ದು, ನೈತಿಕ ಪೊಲೀಸ್​ಗಿರಿ ತೋರಿಸಿರುವ ಘಟನೆ ನಡೆದಿದೆ.

TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Mar 05, 2023 | 9:58 AM

Share

ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಪಬ್​ಗೆ ನುಗ್ಗಿ ಕರ್ನಾಟಕ ಕಾರ್ಮಿಕರ ಪರಿಷತ್ ಸಂಘಟನೆಯಿಂದ ದಾಳಿಗೆ ಯತ್ನ ಮಾಡಿದ್ದು, ನೈತಿಕ ಪೊಲೀಸ್​ಗಿರಿ ತೋರಿಸಿರುವ ಘಟನೆ ನಡೆದಿದೆ. ಡೋಲು ಬಡಿದುಕೊಂಡು ಸುಮಾರು 15 ಜನರ ತಂಡ ಪಬ್​ ಬಳಿ ಬಂದಿದ್ದು, ಈ ವೇಳೆ ಪಬ್​ಗೆ ನುಗ್ಗಿ ದಾಳಿಗೆ ಯತ್ನ ಮಾಡಿದ್ದಾರೆ. ತಡೆಯಲು ಬಂದ ಬೌನ್ಸರ್ಸ್​, ಸಂಘಟನೆಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಬೌನ್ಸರ್ಸ್​ ಹಾಗೂ ಸಂಘಟನೆಯ ಸದಸ್ಯರ ನಡುವೆ ಹೊಡೆದಾಟವಾಗಿದ್ದು, ಘಟನಾ ಸ್ಥಳಕ್ಕೆ ಅಶೋಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನೈತಿಕ ಪೊಲೀಸ್​​​​ಗಿರಿ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕದೇವಮ್ಮನ ಬೆಟ್ಟಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟ ಭಸ್ಮ

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟ ಭಸ್ಮವಾಗಿರುವ ಘಟನೆ ನಡೆದಿದೆ. ಬೆಟ್ಟದ ಉತ್ತರ ದಿಕ್ಕಿನಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಕುರುಚಲು ಗಿಡಗಳು ಸಂಪೂರ್ಣ ನಾಶವಾಗಿದೆ. ಸರಗೂರು ಪ್ರಾದೇಶಿಕ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯ ಬೆಟ್ಟ ಇದಾಗಿದ್ದು, ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದರು.

Published On - 7:02 am, Sun, 5 March 23