AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬಿಐ ಅಧಿಕಾರಿಗಳು ಎಂದು ಹೇಳಿ ಅಪಾರ್ಟ್ಮೆಂಟ್​ಗೆ ನುಗ್ಗಿ ದರೋಡೆ; ಕೃತ್ಯ ನಡೆದ 12 ಗಂಟೆಯಲ್ಲಿ ಆರೋಪಿಗಳ ಬಂಧನ

ಬೆಂಗಳೂರು ನಗರದ ಸೋಲದೇವನಹಳ್ಳಿ(Soladevanahalli ) ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್​ಗೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ನಡೆದ ಹನ್ನೆರಡು ಗಂಟೆ ಒಳಗಡೆ ಪೊಲೀಸರು, ಆರೋಪಿಗಳನ್ನ ಚೇಸ್ ಮಾಡಿ ತಮಿಳುನಾಡಿನ ಧರ್ಮಪುರಿಯಲ್ಲಿ ಹಿಡಿದಿದ್ದಾರೆ.

ಸಿಬಿಐ ಅಧಿಕಾರಿಗಳು ಎಂದು ಹೇಳಿ ಅಪಾರ್ಟ್ಮೆಂಟ್​ಗೆ ನುಗ್ಗಿ ದರೋಡೆ; ಕೃತ್ಯ ನಡೆದ 12 ಗಂಟೆಯಲ್ಲಿ ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: May 30, 2024 | 5:19 PM

Share

ಬೆಂಗಳೂರು, ಮೇ.30: ಸಿಬಿಐ(CBI) ಅಧಿಕಾರಿಗಳು ಎಂದು ಹೇಳಿ ರಾತ್ರಿ ನಗರದ ಸೋಲದೇವನಹಳ್ಳಿ(Soladevanahalli ) ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್​ಗೆ ನುಗ್ಗಿ ದರೋಡೆ ಮಾಡಿದ್ದರು. ಕೃತ್ಯ ನಡೆದ ಹನ್ನೆರಡು ಗಂಟೆ ಒಳಗಡೆ ಆರೋಪಿಗಳನ್ನ ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ನಿನ್ನೆ(ಮೇ.29) ರಾತ್ರಿ ಸೆಕ್ಯೂರಿಟಿಗೆ ಸಿಬಿಐ ಪೊಲೀಸರು ಎಂದು ಹೇಳಿ ಅಪಾರ್ಟ್ಮೆಂಟ್​ಗೆ ನಾಲ್ವರು ನುಗ್ಗಿದ್ದಾರೆ. ನಂತರ ಆಚಾರ್ಯ ಕಾಲೇಜು ವಿದ್ಯಾರ್ಥಿಗಳು ವಾಸ ಮಾಡುವ ಫ್ಲಾಟ್​ಗೆ ಹೋಗಿ, ಫ್ಲಾಟ್​ನಲ್ಲಿದ್ದವರಿಗೆ ಲಾಠಿಯಿಂದ ಹಲ್ಲೆ ನಡೆಸಿ, ಲಾಕಪ್ ಮತ್ತು ಗನ್ ತೋರಿಸಿ ಗಾಂಜಾ ಮಾರಾಟ ಮಾಡ್ತಿದ್ದಿರಾ ಎಂದು ಹೇಳಿ ಬೆದರಿಸಿದ್ದಾರೆ.

ಫ್ಲಾಟ್​ನಲ್ಲಿದ್ದ ಯುವಕರಿಗೆ ಹಲ್ಲೆ ಮಾಡಿ 90 ಸಾವಿರ ಹಣ ದರೋಡೆ

ಹೌದು, ಫ್ಲಾಟ್​ನಲ್ಲಿದ್ದ ಯುವಕರಿಗೆ ಹಲ್ಲೆ ಮಾಡಿ ತೊಂಬತ್ತು ಸಾವಿರ ಹಣ ದೋಚಿದ್ದಾರೆ. ಕೂಡಲೇ ಘಟನೆ ಬಳಿಕ ಹಲ್ಲೆಗೆ ಒಳಗಾದವರು ಸೋಲದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಕಾರ್ಯಚರಣೆ ನಡೆಸಿದ ಪೊಲೀಸರಿಗೆ ತಮಿಳುನಾಡಿನ ಕಡೆ ಆರೋಪಿಗಳು ಎಸ್ಕೇಪ್ ಆಗ್ತಿದ್ದ ಮಾಹಿತಿ ದೊರೆಯುತ್ತದೆ. ಈ ಹಿನ್ನಲೆ ಚೇಸ್ ಮಾಡಿ ತಮಿಳುನಾಡಿನ ಧರ್ಮಪುರಿಯಲ್ಲಿ ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ.

ಇದನ್ನೂ ಓದಿ:ಬೀದರ್: ಸಿನಿಮೀಯ ರೀತಿಯಲ್ಲಿ ಎಟಿಎಂ ದರೋಡೆ ಮಾಡಿದ್ದ ಗ್ಯಾಂಗ್​ ಅಂದರ್​; ಮೂವರು ಅರೆಸ್ಟ್, ನಾಲ್ವರು ಪರಾರಿ

ನಾಲ್ವರು ಅರೆಸ್ಟ್​

ಒಂದು ಐ 20 ಮತ್ತು ಮಹೇಂದ್ರ XUV 300 ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದ ಟೀಮ್, ಬಂಧಿತ ಆರೋಪಿಗಳಿಂದ CBIT ಹೆಸರಿನ ನಾಲ್ಕು ಐಡಿ ಕಾರ್ಡ್, ಒಂದು ಏರ್ ಗನ್ , ಏರ್ ಗನ್ ಗೆ ಬಳಸುವ ನೂರಕ್ಕು ಹೆಚ್ಚು ಬುಲೆಟ್ಸ್, ಪೊಲೀಸರು ಬಳಸುವ ಹ್ಯಾಂಡ್ ಕಾಫ್, ಲಾಠಿ, ಹಿರಿಯ ಪೊಲೀಸ್ ಅಧಿಕಾರಿಗಳು ಬಳಸುವ ಪೊಲೀಸ್ ಬ್ಯಾಟನ್​​ನನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೇರಳ ಮೂಲದ ಪ್ರಮೋದ್, ಅನಂತ ಕೃಷ್ಣ, ದೀಪಲ್ ಮತ್ತು ಆದರ್ಶ್ ಎಂಬುವವರನ್ನು ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ