ಬೆಂಗಳೂರು, ಅ.04: ಪ್ರತಿವರ್ಷ ಮಕ್ಕಳ ಶೈಕ್ಷಣಿಕ ದಾಖಲಾತಿ ಮಾರ್ಚ್ನಲ್ಲಿ ಶುರುವಾಗುತ್ತದೆ. ಇನ್ನು ಕೆಲವು ಖಾಸಗಿ ಶಾಲೆಗಳು ಜನವರಿಯಲ್ಲಿಯೇ ಮಾಡುತ್ತವೆ. ಆದ್ರೆ, ಈಗ 6 ತಿಂಗಳ ಮೊದಲೆ ಮಕ್ಕಳ ದಾಖಲಾತಿಗೆ ಖಾಸಗಿ ಶಾಲೆಗಳು ಮುಂದಾಗಿವೆ. ಹೌದು, 2025ನೇ ಶೈಕ್ಷಣಿಕ ಪ್ರವೇಶಕ್ಕೆ ಇವಾಗಿನಿಂದಲೇ ಬೆಂಗಳೂರಿನ(Bengaluru) ಕೆಲವು ಪ್ರತಿಷ್ಟಿತ ಶಾಲೆಗಳು, ಪ್ರವೇಶ ಶುಲ್ಕ, ಸ್ಕಾಲರ್ ಶಿಪ್, ಸೇರಿ ವಿವಿಧ ಬಗೆಯ ಆಫರ್ ಕೊಟ್ಟು ಪೋಷಕರನ್ನ ಸೆಳೆಯುತ್ತಿವೆ. ಈಗಾಗಲೇ ದಾಖಲಾತಿ ಮಾಡಿ 30%, 50% ಶುಲ್ಕ ವಿನಾಯತಿ ಕೊಡುತ್ತೆವೆ ಎಂದು ಆಫರ್ ಶುರು ಮಾಡಿಕೊಂಡಿವೆ.
ಶಿಕ್ಷಣ ಇಲಾಖೆಯ ನಿಗದಿತ ದಿನಾಂಕಕ್ಕೆ ಮುಂಚಿತವಾಗಿಯೇ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿಕೊಂಡಿರುವ ಕೆಲವು ಖಾಸಗಿ ಶಾಲೆಗಳು. ಈಗಲೇ ರಿಜಿಸ್ಟರ್ ಮಾಡಿಕೊಂಡು ವಿವಿಧ ಸೌಲಭ್ಯಗಳನ್ನ ಪಡೆಯಿರಿ ಎಂದು ಪೋಷಕರಿಗೆ ಆಮಿಷ ಒಡ್ಡುತ್ತಿವೆ. ಈಗಲೇ ನೋಂದಣಿ ಮಾಡಿಸಿದರೆ 10 ಸಾವಿರದಿಂದ 25000 ಸಾವಿರ ರಿಯಾಯಿತಿ ಎಂದು ಆಫರ್ ನೀಡಿ ಪೋಷಕರನ್ನ ಸೆಳೆಯೋಕೆ ಆಫರ್ ಅಸ್ತ್ರ ಬಳಸುತ್ತಿವೆ.
ಇದನ್ನೂ ಓದಿ:ಬೀದರ್: ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಆರೋಪ, ಖಾಸಗಿ ಶಾಲೆ ಶಿಕ್ಷಕ ಅರೆಸ್ಟ್
ಒಟ್ಟಿನಲ್ಲಿ ಖಾಸಗಿ ಶಾಲೆಗಳು ಪೋಷಕರ ಸುಲಿಗೆಗೆ ಹೊಸ ಅಸ್ತ್ರ ಪ್ರಯೋಗಿಸುತ್ತಿದೆ. ಶೈಕ್ಷಣಿಕ ವರ್ಷದ ದಾಖಲಾತಿ ಪ್ರಾರಂಭಕ್ಕೂ ಮುಂಚೆ ಶುಲ್ಕ ಸ್ವೀಕರಿಸುವಂತಿಲ್ಲ, ದಾಖಲಾತಿ ಮಾಡುವಂತಿಲ್ಲ. ಒಂದು ವೇಳೆ ಪ್ರವೇಶ ಶುಲ್ಕ ಸಂಗ್ರಹಿಸಿದರೆ ಅದು ಅಕ್ರಮ. ಇಷ್ಟಾದರೂ ಶಿಕ್ಷಣ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ