AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ; ಪ್ರತಿ ವರ್ಷ 2,100 ಮಂದಿ ಬಲಿ

ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗುತ್ತಿದ್ದು, ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದೀಗಾ ಈ ವಾಯು ಮಾಲಿನ್ಯದಿಂದ ರಾಜಧಾನಿಯಲಿ ಸಾವಿನ ಪ್ರಕಾರಣಗಳು ಹೆಚ್ಚಾಗಿವೆ.‌ ನಗರದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯದಿಂದಲೂ ಸಿಲಿಕಾನ್ ಸಿಟಿಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಳವಾಗಿವೆ.

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ; ಪ್ರತಿ ವರ್ಷ 2,100 ಮಂದಿ ಬಲಿ
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on: Jul 07, 2024 | 8:58 AM

Share

ಬೆಂಗಳೂರು, ಜುಲೈ.07: ರಾಜ್ಯ ರಾಜಧಾನಿ‌ ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಗಿ ಮಾರ್ಪಾಡಾಗುತ್ತಿದೆ. ಎಲ್ಲಿ‌ ನೋಡಿದ್ರು ಕಟ್ಟಡಗಳು ತಲೆಎತ್ತುತ್ತಿದ್ದು,‌ ಎಲ್ಲಿ ನೋಡಿದ್ರು ವಾಹನಗಳ ಕಕರ್ಶ ಶಬ್ದವೇ ಕೇಳುತ್ತದೆ. ಈ ಮಧ್ಯೆ ಅಭಿವೃದ್ಧಿ ಹೆಸರಲ್ಲಿ ಮರಗಳನ್ನ ಕಡಿಯುವುದು ಹೆಚ್ಚಾಗಿದ್ದು, ಶುದ್ಧಗಾಳಿಯನ್ನ ನೋಡುವುದೇ ಅಪರೂಪವಾಗಿದೆ. ಈ ವಾಯುಮಾಲಿನ್ಯದಿಂದಾಗಿ (Pollution) ಬೆಂಗಳೂರಿನಲ್ಲಿಯೂ ಸಾವಿನ ಸಂಖ್ಯೆ ಏರಿಕೆಯಾಗಿದೆ.

ಭಾರತದ 10 ಮಹಾನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣದ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಅದ್ರಲ್ಲಿ ಡೆಲ್ಲಿ ಸೇರಿದಂತೆ ಬೆಂಗಳೂರು, ಅಹಮದಾಬಾದ್, ಚೆನ್ನೈ, ದಿಲ್ಲಿ, ಹೈದರಾಬಾದ್, ಕೋಲ್ಕತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಾಣಸಿ ಮಹಾನಗರಗಳು ಇದ್ವು. ಸಧ್ಯ ಇಷ್ಟೂ ನಗರಗಳಲ್ಲಿ ಪ್ರತಿವರ್ಷ 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ಪತ್ತೆಯಾಗಿದೆ. ಆಶ್ಚರ್ಯ ಏನು ಅಂದ್ರೆ ಒಂದು ಕಾಲದಲ್ಲಿ ಆಹ್ಲಾದಕರ ವಾತಾವರಣ ಹೊಂದಿದ್ದ ಬೆಂಗಳೂರಿನಲ್ಲಿ ವಾಯುಮಾಲಿನ್ಯದಿಂದ ವರ್ಷಕ್ಕೆ 2100 ಮಂದಿ ಸಾವನ್ನಪ್ಪುತ್ತಿರುವುದು ಪತ್ತೆಯಾಗಿದೆ.

ಇನ್ನು‌ ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ವಾಯುಮಾಲಿನ್ಯ ಗುಣಮಟ್ಟದ‌ ಮಾರ್ಗಸೂಚಿಗಿಂತಲೂ ಈ ಮಹಾನಗರಗಳು ಕೆಳಮಟ್ಟದಲ್ಲಿಯೇ ಗುಣಮಟ್ಟ ಮುಂದುವರಿದಿದೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟ ಹದಗೆಡುತ್ತಿದ್ದು, ಮುಂದಿನ ದಿನಗಳಲ್ಲಿ ವಾಯುಮಾಲಿನ್ಯ ಸುಧಾರಣೆಯಾಗದಿದ್ರೆ‌,‌ ಡೆಲ್ಲಿಯನ್ನ ಮೀರಿಸುವ ಸಾಧ್ಯತೆ ಇದ್ದು, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಗರದಲ್ಲಿ ವಾಯು ಮಾಲಿನ್ಯದ ಮೇಲೆ‌ ನಿಯಂತ್ರಣ ಬೇಕು ಅಂತ ವೈದ್ಯರು ಹೇಳ್ತಿದ್ದಾರೆ.

ಇದನ್ನೂ ಓದಿ: ಪಡಿತರ ಕಾರ್ಡ್​ಗಳ ತಿದ್ದುಪಡಿಗೆ ಸರ್ವರ್ ಸಮಸ್ಯೆ; ರೋಸಿ ಹೋದ ಫಲಾನುಭವಿಗಳು

ನಗರದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯದಿಂದಲೂ ಸಿಲಿಕಾನ್ ಸಿಟಿಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಳವಾಗಿವೆ. ಇವುಗಳನ್ನ ಕಡಿಮೆ‌ ಮಾಡುವ ನಿಟ್ಟಿನಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನ ರೂಪಿಸುತ್ತಿದೆ. ನಗರದಲ್ಲಿ ಮೊದಲು ಹಸಿರೀಕರಣ ಹೆಚ್ಚಾಗಬೇಕು. ಇದು ಹೆಚ್ಚಾದಾಗ ಮಾತ್ರ ಕಾಯಿಲೆಗಳು ಹೆಚ್ಚಾಗುವುದನ್ನ ತಡೆಯಬಹುದು ಡಾಕ್ಟರ್​ಗಳು ಹೇಳ್ತಿದ್ದಾರೆ.

ಬಾಪುಜಿ ನಗರ – 57%, ಬೊಮ್ಮನಹಳ್ಳಿ – 42%, ಬ್ರಿಗೇಡ್ ರೋಡ್ – 57%, ಬಿಟಿಎಂ ಲೇಔಟ್ – 57%, ಸಿಟಿ ರೈಲ್ವೆ ಸ್ಡೇಷನ್ – 66%, ಹೆಬ್ಬಾಳ – 68 %, ಕೋರಮಂಗಲ – 60%, ವೈಟ್ ಫೀಲ್ಡ್ – 57% ರಷ್ಟು ಮಂದಿ ಮಾಲಿನ್ಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಒಟ್ನಲ್ಲಿ, ಗಾರ್ಡಾನ್ ಸಿಟಿಯಾಗಿದ್ದ ಸಿಲಿಕಾನ್ ಸಿಟಿ ಗಾರ್ಬೇಜ್ ಹಾಗೂ ಪಲ್ಯುಷನ್ ಸಿಟಿಯಾಗಿ ಬದಲಾಗುತ್ತಿದ್ದು, ಮರಗಿಡಗಳನ್ನ ಹೆಚ್ಚು ನೆಡುವ ಮೂಲಕ ನಗರದಲ್ಲಿ ಮಾಲಿನ್ಯವನ್ನ ನಿಯಂತ್ರಿಸಬಹುದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ