ಪಡಿತರ ಕಾರ್ಡ್ಗಳ ತಿದ್ದುಪಡಿಗೆ ಸರ್ವರ್ ಸಮಸ್ಯೆ; ರೋಸಿ ಹೋದ ಫಲಾನುಭವಿಗಳು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಆದರೆ ತಿದ್ದುಪಡಿಗೆ ಸರ್ವರ್ ವರ್ಕ್ ಆಗದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಮೂರು ದಿನದಿಂದ ತಿದ್ದುಪಡಿಗೆ ಅವಕಾಶ ನೀಡಿದ್ದಾರೆ. ಸರ್ವರ್ ತುಂಬ ಸ್ಲೋ ಇದೆ. ಸಾರ್ವಜನಿಕರು ಪ್ರತಿದಿನ ಕಂಪ್ಲೆಂಟ್ ಮಾಡ್ತಿದ್ದಾರೆ.

ಬೆಂಗಳೂರು, ಜುಲೈ.07: ಲೋಕಸಭೆಯ ಚುನಾವಣೆಯ (Lok Sabha Election) ಸಲುವಾಗಿ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿಗೆ ಬ್ರೇಕ್ ಹಾಕಿತ್ತು. ಇದರಿಂದ ಜನರು ಕಾರ್ಡ್ಗಳನ್ನ ತಿದ್ದುಪಡಿ ಮಾಡಲಾಗದೇ ರೋಸಿ ಹೋಗಿದ್ರು. ಇದೀಗಾ ತಿದ್ದುಪಡಿಗೆ ಅವಕಾಶ ಏನೋ ಕೊಡಲಾಗಿದೆ. ಆದರೆ ಬೆಂಗಳೂರು ಒನ್ ಸೆಂಟರ್ಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಫಲಾನುಭವಿಗಳು ಪ್ರತಿದಿನ ಬೆಂಗಳೂರು ಒನ್ ಸೆಂಟರ್ಗಳಲ್ಲಿ ಕಾದು ನಿಂತು ಹೋಗುವ ಪರಿಸ್ಥಿತಿ ಎದುರಾಗಿದೆ.
ಮೂರು ತಿಂಗಳ ಬಳಿಕ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದ್ದು, ತಿದ್ದುಪಡಿಗೆಂದೆ ಸಮಯ ಕೂಡ ಫಿಕ್ಸ್ ಮಾಡಲಾಗಿದೆ. ಪ್ರತಿದಿನ ಬೆಳ್ಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೂ, ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಆದರೆ ಪ್ರತಿ ದಿನ ಈ ಸಮಯಕ್ಕೆ ಫಲಾನುಭವಿಗಳು ತಿದ್ದುಪಡಿಗೆ ಬಂದ್ರೆ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ಪ್ರತಿದಿನ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮಾಂತರ ಒನ್ ಕೇಂದ್ರಗಳಲ್ಲಿ ಕ್ಯೂ ನಿಲ್ಲುವಂತಾಗಿದೆ. ಇನ್ನು ಈ ತಿದ್ದುಪಡಿ ಸಮಸ್ಯೆಯಿಂದಾಗಿ ಅನ್ನಭಾಗ್ಯದ ಹಣ ಬರುವುದಕ್ಕೂ ಬ್ರೇಕ್ ಬಿದ್ದಿದೆ. ಹಣವು ಇಲ್ಲದೇ ಅಕ್ಕಿಯು ಇಲ್ಲದೇ ಬಿಪಿಎಲ್ ಫಲಾನುಭವಿಗಳು ಪರದಾಡುವಂತಾಗಿದೆ. ಇನ್ನು ಪ್ರತಿದಿನ ಕೆಲಸ ಕಾರ್ಯಬಿಟ್ಟು ತಿದ್ದುಪಡಿಗೆ ಬರ್ತಿದ್ದೀವಿ. ಆದರೆ ಕೆಲಸ ಮಾತ್ರ ಆಗ್ತಾ ಇಲ್ಲ. ಆದಷ್ಟು ಬೇಗ ಈ ಸರ್ವರ್ ಸಮಸ್ಯೆಗೆ ಅಂತ್ಯ ಹಾಡಿ ಎಂದು ಫಲಾನುಭವಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇಲ್ಲ; ಕೆಎಸ್‌ಎಂಎಸ್‌ಸಿಎಲ್ ಸ್ಪಷ್ಟನೆ
ಇನ್ನು, ಎಲೆಕ್ಷನ್ ಸಲುವಾಗಿ ಬಿಪಿಎಲ್ ವೆಬ್ ಸೈಟ್ ಅನ್ನ ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿತ್ತು. ಇದೀಗಾ ಮೂರು ದಿನದಿಂದ ತಿದ್ದುಪಡಿಗೆ ಅವಕಾಶ ನೀಡಿದ್ದಾರೆ. ಆದರೆ ಪ್ರತಿದಿನ ಸರ್ವರ್ ಸಮಸ್ಯೆಯಾಗುತ್ತಿದ್ದು, ಸಾರ್ವಜನಿಕರಿಗೆ ತುಂಬ ಸಮಸ್ಯೆಯಾಗುತ್ತಿದೆ. ಆಹಾರ ಇಲಾಖೆಗೆ ಹೋದ್ರೆ ಬೆಂಗಳೂರು ಒನ್ ಸೆಂಟರ್ ಗಳಿಗೆ ಹೋಗಿ ಅಂತರೆ. ಇಲ್ಲಿಗೆ ಬಂದ್ರೆ ಸರ್ವರ್ ಸಮಸ್ಯೆ ಅಂತರೇ. ಹೀಗಾದ್ರೆ ನಮ್ಮ ಸಮಸ್ಯೆಗಳು ಹೇಗೆ ಸರಿಯಾಗುತ್ತವೇ ಅಂತ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮೂರು ದಿನದಿಂದ ತಿದ್ದುಪಡಿಗೆ ಅವಕಾಶ ನೀಡಿದ್ದಾರೆ. ಸರ್ವರ್ ತುಂಬ ಸ್ಲೋ ಇದೆ. ಸಾರ್ವಜನಿಕರು ಪ್ರತಿದಿನ ಕಂಪ್ಲೆಂಟ್ ಮಾಡ್ತಿದ್ದಾರೆ. ಪ್ರತಿದಿನ ಒಂದರಿಂದ ಐದು ಅರ್ಜಿಗಳನ್ನ ತಿದ್ದುಪಡಿ ಮಾಡಿದ್ರೆ ಸೈ ಎನ್ನುವಂತಾಗಿದೆ. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಫಾಲಾನುಭವಿಗಳು ಬರ್ತಿರೊದ್ರಿಂದ ಜನರನ್ನ ನಿಭಾಯಿಸೋಕೆ ಕಷ್ಟವಾಗುತ್ತಿದೆ ಅಂತ ಬೆಂಗಳೂರು ಒನ್ ಸಿಬ್ಬಂದಿ ಹೇಳಿದ್ರು.
ಒಟ್ನಲ್ಲಿ, ಇನ್ನು ಈ ಕುರಿತಾಗಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಸಚಿವರನ್ನ ಪ್ರಶ್ನಿಸೋಕೆ ಕರೆ ಮಾಡಿದ್ರೆ ಯಾರು ಕೂಡ ಸ್ಪಂದಿಸಲಿಲ್ಲ. ಹೀಗಾಗಿ ಸಂಬಂಧ ಪಟ್ಟಂತಹ ಅಧಿಕಾರಿಗಳು ಈ ಕುರಿತಾಗಿ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ