AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dengue Fever: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 175 ಜನರಲ್ಲಿ ಡೆಂಗ್ಯೂ ಜ್ವರ ದೃಢ

ರಾಜ್ಯದಲ್ಲಿ ದಿನೇ ದಿನೆ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಬಾಲಕನನ್ನೇ ಬಲಿ ಪಡೆದಿದೆ. ಮತ್ತೊಂದು ಕಡೆ 50 ಪುಟ್ಟ ಮಕ್ಕಳ ಮೇಲೆ ಅಟ್ಯಾಕ್ ಮಾಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 175 ಜನರಲ್ಲಿ ಡೆಂಗ್ಯೂ ಜ್ವರ ದೃಢಪಟ್ಟಿದೆ. 315 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

Dengue Fever: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 175 ಜನರಲ್ಲಿ ಡೆಂಗ್ಯೂ ಜ್ವರ ದೃಢ
ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 175 ಜನರಲ್ಲಿ ಡೆಂಗ್ಯೂ ಜ್ವರ ದೃಢ
Poornima Agali Nagaraj
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 06, 2024 | 10:04 PM

Share

ಬೆಂಗಳೂರು, ಜುಲೈ 06: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 175 ಜನರಲ್ಲಿ ಡೆಂಗ್ಯೂ ಜ್ವರ (Dengue fever) ದೃಢಪಟ್ಟಿವೆ. ರಾಜ್ಯದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 315 ಜನ ಆಸ್ಪತ್ರೆಗೆ ದಾಖಲಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 115 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, 127 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಅಂಜನಾಪುರ ನಿವಾಸಿ 11 ವರ್ಷದ ಬಾಲಕ ಗಗನ್‌ ಡೆಂಗ್ಯೂಯಿಂದಲೇ ಇಂದು ಮೃತಪಟ್ಟಿದ್ದಾನೆ.

ಈ ಜಿಲ್ಲೆಗಳಲ್ಲಿ ಡೆಂಗ್ಯೂ ಹೆಚ್ಚಳ  

  • ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 115
  • ಮಂಡ್ಯ: 26
  • ಕೊಡಗು: 11
  • ವಿಜಯಪುರ: 9
  • ಗದಗ: 8
  • ಉಡುಪಿ: 2

ಇದನ್ನೂ ಓದಿ: ರಾಜ್ಯದಲ್ಲಿ ಡೆಂಘೀ ಹೆಚ್ಚಳ; ಬೆಂಗಳೂರಿನಲ್ಲಿ ಬಾಲಕ ಸಾವು, ಝೀಕಾ ವೈರಸ್​ಗೆ ವೃದ್ಧ ಬಲಿ

ಹಾಸನ‌ ಜಿಲ್ಲೆಯಲ್ಲೂ ನಿಯಂತ್ರಣ ತಪ್ಪಿ ಡೆಂಗ್ಯೂ ಹೆಚ್ಚಳವಾಗುತ್ತಿದ್ದು, 85 ಜನರ ಮೇಲೆ ಸವಾರಿ ಮಾಡಿದೆ. ಈ ಪೈಕಿ 55 ಮಂದಿ ಮಕ್ಕಳೇ ಇದ್ದಾರೆ. ಅದ್ರಲ್ಲೂ 8 ಮಕ್ಕಳಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರದ ಜತೆ ಡೆಂಗ್ಯೂ ಕೂಡ ಅಬ್ಬರಿಸುತ್ತಿದೆ. ಈ ವರೆಗೆ 521 ಜನರಿಗೆ ಹೆಮ್ಮಾರಿ ವಕ್ಕರಿಸಿರೋದು ಗೊತ್ತಾಗಿದೆ. ಇಷ್ಟಾದ್ರೂ ನಗರದಲ್ಲಿ ಎಲ್ಲಿ ನೋಡಿದ್ರೂ ಸೊಳ್ಳೆಗಳ ಆಗರವೇ ಕಾಣಿಸುತ್ತಿದೆ. ಅದ್ರಲ್ಲೂ ನಗರದ ವಾರ್ಡ್ ನಂ. 23 ರ ತಮಿಳು ಕಾಲೋನಿ ಗಬ್ಬೆದ್ದು ಹೋಗಿದ್ದು ಜಿಲ್ಲಾಡಳಿತ ಸ್ವಚ್ಛತೆ ಬಗ್ಗೆ ಗಮನಹರಿಸುತ್ತಿಲ್ಲ. ಡೆಂಗ್ಯೂ ನಿಯಂತ್ರಣಕ್ಕೆ ಹೊಸ ಹೆಜ್ಜೆ ಇಟ್ಟಿರುವ ಚಿಕ್ಕಬಳ್ಳಾಪುರ ಆರೋಗ್ಯ ಇಲಾಖೆ, ರಸ್ತೆ ಪಕ್ಕದಲ್ಲೇ ಟೆಂಟ್‌ಹಾಕಿಕೊಂಡು ಕೆಲಸಕ್ಕೆ ಹೋಗೋ ಕಾರ್ಮಿಕರನ್ನ ತಡೆದು ಆರೋಗ್ಯ ತಪಾಸಣೆ ನಡೆಸಿದೆ.

ಇದನ್ನೂ ಓದಿ: ಹಾಸನದಲ್ಲಿ ಹೆಚ್ಚಾದ ಡೆಂಗ್ಯೂ ಕೇಸ್; ಮೂರು ಮಕ್ಕಳ ಸಾವು, 8 ಮಕ್ಕಳ ಸ್ಥಿತಿ ಗಂಭೀರ

ಇನ್ನು ಗದಗ್‌ದಲ್ಲಿ ಡೆಂಗ್ಯೂ ಕೇಸ್‌ ಹೆಚ್ಚಾಗ್ತಿದ್ದಂತೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಡೆಂಘೀಗೆ ಮೂಲ ಆಗಿರೋ ಲಾರ್ವಾ ನಾಶ ಮಾಡಲು ಮೀನುಗಳ ಮೊರೆ ಹೋಗಿದೆ. ಗಪ್ಪಿ, ಗಾಂಬೂಸಿಯಾ ಜಾತಿಯ ಮೀನು ಬಳಸಿ ಲಾರ್ವಾ ನಾಶ ಮಾಡಲಾಗುತ್ತೆ.

ಮೆಡಿಕಲ್ ಎಮರ್ಜೆನ್ಸಿ ಘೋಷಣೆಗೆ ಆಗ್ರಹ

ರಾಜ್ಯದಲ್ಲಿ ದಿನೇ ದಿನೆ ಡೆಂಗ್ಯೂ ಪ್ರಕರಣ ಹೆಚ್ಚಾಗ್ತಿದ್ದು, ರಾಜ್ಯ ಸರ್ಕಾರ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಅಂತಾ ಹೃದಯ ತಜ್ಞ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.