Lalbagh Flower Show: ಆ.4ರಿಂದ ಲಾಲ್ ಬಾಗ್ ಫ್ಲವರ್ ಶೋ, ಈ ಬಾರಿ ಮಿಂಚಲಿದೆ ವಿಧಾನಸೌಧ, ಕೆಂಗಲ್ ಹನುಮಂತಯ್ಯ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇದೇ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದೆ. ಈ ಬಾರಿ ಫ್ಲವರ್ ಶೋನಲ್ಲಿ ಶಾಲಾ ಮಕ್ಕಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಬೆಂಗಳೂರು, ಜುಲೈ 25: ಸಿಲಿಕಾನ್ ಸಿಟಿ ಬೆಂಗಳೂರಿನ ಹೂಗಳ ಹಬ್ಬ ಲಾಲ್ ಬಾಗ್ ಫವರ್ ಶೋಗೆ(Lalbagh Flower Show) ದಿನಾಂಕ ನಿಗದಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇದೇ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ಇರಲಿದ್ದು ವಿಧಾನ ಸೌಧ(Vidhana Soudha) ಹಾಗೂ ಕೆಂಗಲ್ ಹನುಮಂತಯ್ಯ(Kengal Hanumanthaiah) ಅವರ ಕಾನ್ಸೆಪ್ಟ್ ಇರಲಿದೆ ಎಂದು ಲಾಲ್ ಬಾಗ್ ನಿರ್ದೇಶಕರಾದ ರಮೇಶ್ ತಿಳಿಸಿದ್ದಾರೆ.
ಲಾಲ್ ಬಾಗ್ನ ನಿರ್ದೇಶಕರ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ರಮೇಶ್ ಅವರು, ಪ್ರತಿ ವರ್ಷದಂತೆ ಈ ಬಾರಿಯು ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದೇವೆ. 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಿದ್ದೇವೆ . ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ. ಶಾಲಾ ಮಕ್ಕಳಿಗೆ ಪ್ರವೇಶ ಉಚಿತ. ಈ ಬಾರಿ ಫ್ಲವರ್ ಶೋನಲ್ಲಿ ಶಾಲಾ ಮಕ್ಕಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತೆ. ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತೆ. ಸಾರ್ವಜನಿಕರು ಮೆಟ್ರೋ ಹಾಗೂ ಬಿಎಂಟಿಸಿ ಬಸ್ಸುಗಳನ್ನ ಬಳಸಿಕೊಂಡು ಲಾಲ್ ಬಾಗ್ ಶೋಗೆ ಬಂದತೆ ಒಳಿತು. ಯಾಕಂದ್ರೆ ತುಂಬ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ ಎಂದು ಲಾಲ್ ಬಾಗ್ ನಿರ್ದೇಶಕ ರಮೇಶ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Lalbagh: ಬೆಂಗಳೂರಿನ ಲಾಲ್ಬಾಗ್ಗೆ ಭೇಟಿ ನೀಡಿದರೆ ಇವುಗಳನ್ನು ಮಿಸ್ ಮಾಡದೆ ನೋಡಿ, ಎಂಜಾಯ್ ಮಾಡಿ
ಲಾಲ್ ಬಾಗ್ಗೆ 15 ರಿಂದ 17 ಲಕ್ಷ ಹೂಗಳ ಬಳಕೆ
ಮೆಟ್ರೋ ಗೇಟ್ ಬಳಿ ಪ್ರೇಕ್ಷಕರಿಗೆ ಎಂಟ್ರಿಕೊಟ್ಟಿದ್ದೇವೆ. ಒಟ್ಟು ನಾಲ್ಕೂ ಗೇಟ್ಗಳಲ್ಲಿ ಜನರಿಗೆ ಎಂಟ್ರಿ ಕೊಟ್ಟಿದ್ದೇವೆ. ಫ್ಲವರ್ ಶೋಗೆ ಎರಡೂವರೆ ಕೋಟಿಯಷ್ಟು ಹಣವನ್ನ ವ್ಯಾಯ ಮಾಡಲಾಗುತ್ತಿದೆ. ಈ ಬಾರಿ ಟಿಕೆಟ್ ದರ ಏನೂ ಜಾಸ್ತಿ ಮಾಡಿಲ್ಲ. ವೀಕ್ ಡೇಸ್ನಲ್ಲಿ ಹಿರಿಯರಿಗೆ 70 ರುಪಾಯಿ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಿದ್ದೇವೆ. 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಿದ್ದೇವೆ. ಲಾಲ್ ಬಾಗ್ನಲ್ಲಿರುವ ನಾಯಿಗಳಿಂದ ಜನರಿಗೆ ಸಮಸ್ಯೆಯಾಗಬಾರದದೆಂಬ ಕಾರಣಕ್ಕೆ ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಿದ್ದೇವೆ. ಜೇನುಗಳನ್ನ ಹಿಡಿಸಿದ್ದೇವೆ. ಆಂಬುಲೆನ್ಸ್ ಹಾಗೂ ಮಹಿಳೆಯರಿಗೆಂದೇ ವಿಶೇಷ ಶಿಬಿರ ವ್ಯವಸ್ಥೆ ಮಾಡಲಾಗುತ್ತಿದೆ. ಫ್ಲವರ್ ಶೋ ಗೆ ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ ಇತರ ರಾಜ್ಯಗಳಿಂದ ಹೂಗಳು ಬರುತ್ತಿದ್ದು ಒಟ್ಟು 15 ರಿಂದ 17 ಲಕ್ಷ ಹೂಗಳನ್ನ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:39 pm, Tue, 25 July 23