Bengaluru News: ಅಮರನಾಥ ಯಾತ್ರೆಗೆ ಹೋಗಿ ಕೈ ಮುಗಿದು ಬರುವಷ್ಟರಲ್ಲಿ ಮನೆಯಲ್ಲಿದ್ದ ಸಂಪತ್ತು ಮಾಯ
ಅಮರನಾಥ ಯಾತ್ರೆಗೆ ತೆರಳಿ ವಾಪಾಸ್ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನ, ನಗದು ಕಳವು ಮಾಡಿದ್ದ ಆರೋಪಿಯನ್ನ ಇದೀಗ ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು,ಜು.25: ಕುಟುಂಬ ಸಮೇತ ಅಮರನಾಥ ಯಾತ್ರೆಗೆ ತೆರಳಿದ್ದ ಮನೆಗೆ ಕನ್ನ ಹಾಕಿದ್ದ ಆರೋಪಿಯನ್ನ ಇದೀಗ ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಹೌದು ಅಮರನಾಥ್ ಯಾತ್ರೆಗೆ ತೆರಳಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಅರ್ಧ ಕೆ.ಜಿ ಚಿನ್ನ ಸೇರಿ ಲಕ್ಷಾಂತರ ರೂಪಾಯಿಯನ್ನ ಕಳ್ಳತನ(Theft) ಮಾಡಲಾಗಿತ್ತು. ಬಳಿಕ ಮನೆಯವರು ಕಳವು ಸಂಬಂಧ ಸುಬ್ರಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮೇಲೆ ಕುಖ್ಯಾತ ಮನೆಗಳ್ಳ ವಡಿವೇಲು ರಾಮಸ್ವಾಮಿ(45) ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನು ಇತ ಸತತ 25 ವರ್ಷಗಳಿಂದ ಮನೆಗಳ್ಳತನವನ್ನೇ ವೃತ್ತಿ ಮಾಡಿಕೊಂಡ ಆರೋಪಿಯಾಗಿದ್ದಾನೆ.
ಬೀಗ ಹಾಕಿದ ಮನೆಗಳೇ ಟಾರ್ಗೆಟ್ ಮಾಡಿ ಕಳ್ಳತನ
ಹೌದು ಈ ಹಿಂದೆ ಗುಂಪಾಗಿ ಕೃತ್ಯ ಎಸಗಿ ಹಲವು ಬಾರಿ ಬಂಧನವಾಗಿದ್ದ ಆರೋಪಿ ಚಿಕ್ಕಲಸಂದ್ರ ಮೂಲದ ರಾಮಸ್ವಾಮಿ ಅಲಿಯಾಸ್ ವಡಿವೇಲು ರಾಮಸ್ವಾಮಿ, ಬಳಿಕ ತಮಿಳುನಾಡಿಗೆ ತೆರಳಿದ್ದ. ಮತ್ತೆ ವಾಪಾಸ್ ಆದ ಬಳಿಕ ಒಂಟಿಯಾಗಿ ಮನೆಗಳ್ಳತನ ಮಾಡಲು ಪ್ರಾರಂಭಿಸಿದ್ದ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ, ಇದೇ ರೀತಿ ದೇವರ ಯಾತ್ರೆಗೆ ತೆರಳಿದ್ದ ಮನೆಯಲ್ಲಿ ಚಿನ್ನಾಭರಣ ನಗದು ದೊಚಿ ಎಸ್ಕೇಪ್ ಆಗಿದ್ದ. ಇದೀಗ ಇತನನ್ನು ಬಂಧಿಸಿದ್ದು, ಆರೋಪಿಯಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಹಣ ಮಾಡೋಕೆ ಕಳ್ಳತನಕ್ಕಿಳಿದ ಒಂದೇ ಏರಿಯಾದ ಅಕ್ಕಪಕ್ಕದ ಮನೆಯವರು, ಕೊನೆಗೂ ಪೊಲೀಸ್ರಿಗೆ ಸಿಕ್ಕಿಬಿದ್ರು
ದ್ವಿಚಕ್ರ, ಆಟೋ ಕಳ್ಳತನ ಮಾಡ್ತಿದ್ದ ಕುಖ್ಯಾತ ಆರೋಪಿಯ ಬಂಧನ
ಬೆಂಗಳೂರು: ದ್ವಿಚಕ್ರ, ಆಟೋ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ಸೈಯದ್ ಶಬಾಜ್ ಬಂಧಿತ ಆರೋಪಿ. ಇತನಿಂದ ಬರೊಬ್ಬರಿ 5.60 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋ ವಶಕ್ಕೆ ಪಡೆಯಲಾಗಿದೆ. ಇನ್ನು ಇತ ಶಿವಾಜಿನಗರದ ಚಾರ್ ಮಿನಾರ್ ಮಸೀದಿ ಬಳಿ ಕಳವು ಮಾಡಿದ ವಾಹನಗಳನ್ನ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



