Jain University: ವಿದ್ಯಾರ್ಥಿಗಳಿಂದ ವಿವಾದಾತ್ಮಕ ಸ್ಕಿಟ್ ಪ್ರದರ್ಶನ: ದಲಿತ ಸಮುದಾಯದಿಂದ ಖಂಡನೆ
ಜೈನ್ ವಿಶ್ವವಿದ್ಯಾಲಯದ ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಕಿಟ್ ವಿವಾದವನ್ನು ಹುಟ್ಟುಹಾಕಿದೆ. ಇದು ದೇಶಾದ್ಯಂತ ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ದಲಿತ ಸಮುದಾಯದವರು ಖಂಡಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ (Bengaluru) ಪ್ರತಿಷ್ಠಿತ ಜೈನ್ ವಿಶ್ವವಿದ್ಯಾಲಯದ (Jain University) ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಕಿಟ್ ವಿವಾದವನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳು ಬಿ.ಆರ್ ಅಂಬೇಡ್ಕರ್ (B.R Ambedkar) ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯವನ್ನು ಒಳಗೊಂಡ ವಿವಾದಾತ್ಮಕ ಸ್ಕಿಟ್ ಅನ್ನು ಪ್ರದರ್ಶಿಸಿದರು. ಈ ಸ್ಕಿಟ್ನಲ್ಲಿ ಬಿ.ಆರ್ ಅಂಬೇಡ್ಕರ್ರನ್ನ ‘ಬಿಯರ್ ಅಂಬೇಡ್ಕರ್’ ಎಂದು ಅವಹೇಳನ ಮಾಡಲಾಗಿದೆ. ಅಲ್ಲದೇ ದಲಿತರು ಮತ್ತು ಪರಿಶಿಷ್ಟ ಜಾತಿಯ ಬಗ್ಗೆ ವಿವಿಧ ಹಾಸ್ಯಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಕಾಲೇಜಿನ ಈ ಸ್ಕಿಟ್‌ನ ವಿಡಿಯೋ ಈಗಾಗಲೇ ಬಹಳಷ್ಟು ವೈರಲ್ ಆಗಿದೆ.
ಕಾಲೇಜು ಫೆಸ್ಟ್‌ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ವಿವಾದಾತ್ಮಕ ಸ್ಕಿಟ್ ಪ್ರದರ್ಶಿಸಲಾಯಿತು. ಮ್ಯಾಡ್-ಆಡ್ (Mad Ad) ಸ್ಪರ್ಧೆಯಲ್ಲಿ ಪ್ರದರ್ಶಿಸಲಾದ ಈ ವಿವಾದಾತ್ಮಕ ಸ್ಕಿಟ್ ಅನ್ನು, ಇದು ದೇಶಾದ್ಯಂತ ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ದಲಿತ ಸಮುದಾಯದವರು ಖಂಡಿಸಿದ್ದಾರೆ. ಮುಂಬೈನ ದಲಿತ ಕಾರ್ಯಕರ್ತನೊಬ್ಬ ಈ ಸ್ಕಿಟ್ ಪ್ರದರ್ಶನದ ವಿರುದ್ಧ ಈಗಾಗಲೇ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 11 ಫ್ಲೈ ಓವರ್ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ: ಬೊಮ್ಮಾಯಿ ಮಾಹಿತಿ
ಕಾಲೇಜು ಫೆಸ್ಟ್ ನಲ್ಲಿ ವಿದ್ಯಾರ್ಥಿಗಳ ಜೊತೆ ಉಪನ್ಯಾಸಕರೂ ಪಾಲ್ಗೊಂಡಿದ್ದು, ಇದೀಗ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾಡಿದ ವಿವಾದಾತ್ಮಕ ಸ್ಕಿಟ್ ಫುಲ್ ವೈರಲ್ ಆಗಿದೆ. ಇಷ್ಟೆಲ್ಲಾ ಆದರೂ ಕಾಲೇಜು ಆಡಳಿತ ಮಾತ್ರ ಇನ್ನೂ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ.
Published On - 5:47 pm, Fri, 10 February 23