ಜಯದೇವ ಆಸ್ಪತ್ರೆ ಹಾಲಿ ನಿರ್ದೇಶಕರ ಅವಧಿ  ಜುಲೈ 19ಕ್ಕೆ ಮುಕ್ತಾಯ; ಡಾ.ಮಂಜುನಾಥ್​ರನ್ನೇ ಮುಂದುವರಿಸಲು ಸರ್ಕಾರಕ್ಕೆ ಒತ್ತಾಯ

ಜಯದೇವ ಆಸ್ಪತ್ರೆಯ ಹಾಲಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್​ರವರ​ ಅವಧಿ  ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹಾಲಿ ನಿರ್ದೇಶಕರನ್ನು ಮುಂದುವರಿಸಬೇಕೋ ಅಥವಾ ಹೊಸ ನಿರ್ದೇಶಕರ ನೇಮಕ  ಮಾಡಬೇಕು ಎಂಬ ವಿಚಾರದಲ್ಲಿ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಜಯದೇವ ಆಸ್ಪತ್ರೆ ಹಾಲಿ ನಿರ್ದೇಶಕರ ಅವಧಿ  ಜುಲೈ 19ಕ್ಕೆ ಮುಕ್ತಾಯ; ಡಾ.ಮಂಜುನಾಥ್​ರನ್ನೇ ಮುಂದುವರಿಸಲು ಸರ್ಕಾರಕ್ಕೆ ಒತ್ತಾಯ
ಜಯದೇವ ಆಸ್ಪತ್ರೆ ಬೆಂಗಳೂರು
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 16, 2022 | 5:51 PM

ಬೆಂಗಳೂರು: ಜಯದೇವ ಆಸ್ಪತ್ರೆಯ (Jayadeva hospital) ಹಾಲಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್​ರವರ​ ಅವಧಿ  ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹಾಲಿ ನಿರ್ದೇಶಕರನ್ನು ಮುಂದುವರಿಸಬೇಕೋ ಅಥವಾ ಹೊಸ ನಿರ್ದೇಶಕರ ನೇಮಕ  ಮಾಡಬೇಕು ಎಂಬ ವಿಚಾರದಲ್ಲಿ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ.  ಆದರೆ ಡಾ.ಮಂಜುನಾಥ್​ರನ್ನೇ ಮುಂದುವರಿಸುವಂತೆ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇನ್ನೂ ಡಾ.ಮಂಜುನಾಥ್​ ಸೇವೆ ಮುಂದುವರಿಕೆಗೆ ಕೆಲ ಸಚಿವರ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ಈ ಸಂಬಂಧ  ವೈದ್ಯಕೀಯ ಶಿಕ್ಷಣ ಸಚಿವರು ಡಾ.ಮಂಜುನಾಥ್​ ಅವರ ಜೊತೆ ಚರ್ಚೆ ನಡೆಸಿದ್ದಾರೆ.  ಡಾ.ಮಂಜುನಾಥ್​ರವರ ಸೇವೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದರೆ, ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಒಪಿಡಿಯನ್ನು ಬಂದ್​ ಮಾಡುವ ಸಾಧ್ಯತೆ  ಇದೆ.

Published On - 5:51 pm, Sat, 16 July 22