AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಎಲ್​ಸಿ ಬೋಜೆಗೌಡ ಕಾರಿನ ನಕಲಿ ನಂಬರ್ ಪ್ಲೇಟ್ ಬಳಸಿ ಮಾರಾಟಕ್ಕೆ ಯತ್ನ; ಮತ್ತೋರ್ವ ಜೆಡಿಎಸ್ ಮುಖಂಡ ಅರೆಸ್ಟ್

ಎಂಎಲ್​ಸಿ ಬೋಜೆಗೌಡ ಕಾರು ನಂಬರ್ ಪ್ಲೇಟ್ ನಕಲಿ ಮಾಡಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಜೆಡಿಎಸ್ ಎಂಎಲ್​ಸಿ ಕಾರ್ ಕೇಸ್​ನಲ್ಲಿ ಹೈಗ್ರೌಂಡ್ ಪೊಲೀಸರು ಮತ್ತೊಬ್ಬ ಜೆಡಿಎಸ್ ಮುಖಂಡನನ್ನು ಬಂಧಿಸಿದ್ದಾರೆ.

ಎಂಎಲ್​ಸಿ ಬೋಜೆಗೌಡ ಕಾರಿನ ನಕಲಿ ನಂಬರ್ ಪ್ಲೇಟ್ ಬಳಸಿ ಮಾರಾಟಕ್ಕೆ ಯತ್ನ; ಮತ್ತೋರ್ವ ಜೆಡಿಎಸ್ ಮುಖಂಡ ಅರೆಸ್ಟ್
ಶಬಾಜ್
ಆಯೇಷಾ ಬಾನು
|

Updated on: Feb 26, 2023 | 11:31 AM

Share

ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ನಕಲಿ ನಂಬರ್ ಪ್ಲೇಟ್(Fake Number Plate) ಹಾವಳಿ ಹೆಚ್ಚಾಗ್ತಿದೆ. ನಕಲಿ ನಂಬರ್ ಪ್ಲೇಟ್ ಹಾವಳಿಯಿಂದ ಸಾಮಾನ್ಯ ಜನ ಹೈರಾಣಾಗಿದ್ದು, ನಿತ್ಯ ಒಂದಲ್ಲ ಒಂದು ಕಡೆ ನಕಲಿ ನಂಬರ್ ಪ್ಲೇಟ್ ಬಳಕೆ ಬಗ್ಗೆ ದೂರು ದಾಖಲಾಗ್ತಿದೆ. ಈಗ ಈ ನಕಲಿ ನಂಬರ್ ಪ್ಲೇಟ್ ಹಾವಳಿ ಶಾಸಕರು, ಎಂಎಲ್​ಸಿಗೂ ತಟ್ಟಿದೆ. ಇತ್ತೀಚೆಗೆ ಎಂಎಲ್​ಸಿ ಬೋಜೆಗೌಡ(MLC Bhojegowda) ಕಾರು ನಂಬರ್ ಪ್ಲೇಟ್ ನಕಲಿ ಮಾಡಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಜೆಡಿಎಸ್ ಎಂಎಲ್​ಸಿ ಕಾರ್ ಕೇಸ್​ನಲ್ಲಿ ಹೈಗ್ರೌಂಡ್ ಪೊಲೀಸರು ಮತ್ತೊಬ್ಬ ಜೆಡಿಎಸ್ ಮುಖಂಡನನ್ನು ಬಂಧಿಸಿದ್ದಾರೆ. ವಿಧಾನಸಭಾ ಟಿಕೆಟ್ ಗಾಗಿ ಓಡುಡುತ್ತಿದ್ದ ಜೆಡಿಎಸ್ ಮುಖಂಡ ಅರೆಸ್ಟ್ ಆಗಿದ್ದಾರೆ.

ಜೆಡಿಎಸ್ ಎಂಎಲ್​ಸಿ ಚಿಕ್ಕಮಗಳೂರಿನ ಭೋಜೆಗೌಡರ ಕಾರಿನ ನಂಬರ್ ಪ್ಲೇಟ್ ನಕಲು ಮಾಡಿ ಅದೇ ನಂಬರ್ ನಲ್ಲಿ ಬೇರೆ ಕಾರನ್ನ ಮಾರಾಟ ಮಾಡಲು ಯತ್ನಿಸಲಾಗಿದೆ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಮಂಜು ಎಂಬುವವನು ಕೊಟ್ಟ ಹೇಳಿಕೆ ಮೇಲೆ ಶಬಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶಬಾಜ್, ಹಲವು ಜೆಡಿಎಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ನಕಲಿ ಕಾರನ್ನ ಶಬಾಜ್, ಮಂಜನಿಗೆ ಕೊಟ್ಟಿದ್ದರು. ಮಂಜ ಸೆಕೆಂಡ್ ಹ್ಯಾಂಡ್ ಕಾರ್ ಶೋ ರೂಮ್ ಮಾಲೀಕ ಇಮ್ರಾನ್ ಗೆ ಕೊಟ್ಟಿದ್ದ. ಸದ್ಯ ಮಂಜ ಹಾಗೂ ಶಬಾಜ್ ನನ್ನ ಹೈಗ್ರೌಂಡ್ ಪೊಲೀಸರು ಬಂಧಿಸಿದ್ದು ಇದೇ ರೀತಿ ಹಲವು ಕಾರ್ ಗಳ ನಂಬರ್ ಪ್ಲೇಟ್ ನಕಲಿ ಮಾಡಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಚಲಾಯಿಸುತಿದ್ದ ಯುವಕ ಪತ್ತೆ

ಘಟನೆ ಹಿನ್ನೆಲೆ

ಜೆಡಿಎಸ್ ಎಂಎಲ್​ಸಿ ಚಿಕ್ಕಮಗಳೂರಿನ ಭೋಜೆಗೌಡರ ಕಾರಿನ ನಂಬರ್ ಪ್ಲೇಟ್ ನಕಲು ಮಾಡಿ ಅದೇ ನಂಬರ್ ನಲ್ಲಿ ಬೇರೆ ಕಾರನ್ನ ಮಾರಾಟ ಮಾಡಲು ಯತ್ನಿಸಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಎಂಎಲ್ ಸಿ ಭೋಜೆಗೌಡರ ಬಳಿ ಇನೋವಾ ಕ್ರಿಸ್ಟಾ ಕಾರಿದ್ದು, ಆ ಕಾರಿನ ನಂಬರ್ KA18 Z-5977 ಪ್ಲೇಟನ್ನು ಮತ್ತೊಂದು ಇನ್ನೋವಾ ಕ್ರಿಸ್ಟಾ ಕಾರಿಗೆ ಅಳವಡಿಸಿ ಕ್ವೀನ್ ರಸ್ತೆಯ ಸೆಕೆಂಡ್ ಹ್ಯಾಂಡ್ ಶೋರೂಂವೊಂದರಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಭೋಜೆಗೌಡರ ಪಿಎ ಮಾದೇಶ್ ಕ್ವೀನ್ ರಸ್ತೆಯಲ್ಲಿ ಬರುವಾಗ ಶೋರೂಂ ಬಳಿ ಇನ್ನೋವಾ ಕ್ರಿಸ್ಟಾ ಕಾರನ್ನ ನೋಡಿದ್ದಾರೆ. ಕಾರು ನೋಡಿ ಇದು ಎಂಎಲ್​ಸಿ ಭೋಜೆಗೌಡರ ಕಾರು ಅಲ್ವಾ ಅಂತ ಶೋರೂಂ ಸಿಬ್ಬಂದಿಯನ್ನ ವಿಚಾರಿಸಿದ್ದಾರೆ. ಬಳಿಕ ಭೋಜೆಗೌಡರಿಗೆ ಫೋನ್ ಮಾಡಿ ಕಾರು ಮಾರಾಟ ಮಾಡುತ್ತಿದ್ದೀರಾ ಎಂದು ವಿಚಾರಿಸಿದಾಗ, ಭೋಜೆಗೌಡರು ಇಲ್ಲ ಕಾರು ಮನೆಯ ಬಳಿಯೇ ಇದೆ ಅಂತಾ ಹೇಳಿದ್ದಾರೆ. ನಂತರ ಭೋಜೆಗೌಡರ ಪಿಎ ಮಾದೇಶ್ ನಕಲಿ ನಂಬರ್ ಪ್ಲೇಟ್ ಬಳಸಿ ಬೇರೆ ಕಾರನ್ನ ಮಾರಾಟ ಮಾಡಲಾಗುತ್ತಿದೆ ಅಂತ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ನಂತರ ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಎಂಎಲ್ ಸಿ ಭೋಜೆಗೌಡ, ಒಂದೊಂದು ನಂಬರ್ ಇಟ್ಟುಕೊಂಡು ಹತ್ತು ಬಸ್ ಓಡಿಸುತ್ತಾರೆ. ಈ ಹಿಂದೆ ಕುಮಾರಣ್ಣ ಬಸ್ಸಿನ ಬಗ್ಗೆ ಹೇಳಿದ್ರು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. ದಂಧೆಕೋರರು ವಿವಿಐಪಿ ಕಾರಿನ ನಂಬರ್ ಬಳಸುತ್ತಾರೆ, ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಕ್ರಮ ಆಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಆಗ್ರಹಿಸಿದ್ದರು.

ಇನ್ನೂ ಭೋಜೆಗೌಡ ಪಿಎ ಮಾದೇಶ್ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಇಬ್ಬರು ವ್ಯಕ್ತಿಗಳನ್ನ ವಶಕ್ಕೆ ಪಡೆದು ನಕಲಿ ನಂಬರ್ ಪ್ಲೇಟ್ ಜಾಲದ ಬಗ್ಗೆ ವಿಚಾರಣೆ ನಡೆಸಿದ್ದು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ